Government Land : ಸರ್ಕಾರಿ ಜಾಗದಲ್ಲಿ ಹೊಲ, ಗದ್ದೆ ಮಾಡಿದವರಿಗೆ ಸಂತಸದ ಸುದ್ದಿ – ಬದಲಾದವು ನೋಡಿ ಹಳೆ ನಿಯಮಗಳು

Good news for those who have farmed in government land

Government Land: ಸರ್ಕಾರಿ ಜಾಗದಲ್ಲಿ ಹೊಲ, ಗದ್ದೆ ಮಾಡಿದವರಿಗೆ ಸಿಹಿ ಸುದ್ದಿ ಇಲ್ಲಿದೆ. ಹಳೆ ನಿಯಮಗಳಲ್ಲಿ ಬದಲಾವಣೆಯಾಗಿದೆ. ಹೌದು, ಸಾಕಷ್ಟು ರೈತರು ಸರಕಾರಿ ಜಾಗದಲ್ಲಿ (Government Land) ಕೃಷಿ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ.
ಹಲವಾರು ವರ್ಷಗಳಿಂದ ಸರ್ಕಾರಿ ಜಾಗವೇ ಅವರಿಗೆ ಅನ್ನ ನೀಡಿರುತ್ತದೆ. ಈ ಹಿನ್ನೆಲೆಯಲ್ಲಿ ಸರಕಾರ ಅಕ್ರಮ ಸಕ್ರಮ ಯೋಜನೆ ಜಾರಿಗೆ ತಂದಿದೆ.

ಇದೀಗ ರಾಜ್ಯ ಕಂದಾಯ ಇಲಾಖೆಯಿಂದ ಮಾಹಿತಿಯೊಂದು ಬಂದಿದೆ‌. ಅಕ್ರಮವಾಗಿ ಕಟ್ಟಿಕೊಂಡ ಮನೆಯನ್ನು ಸರ್ಕಾರ ಸಕ್ರಮ ಮಾಡಲು ಅರ್ಜಿಯನ್ನು ಕರೆದಿದ್ದು, ಅಕ್ರಮ ನಿವೇಶನ ಅಥವಾ ಸರ್ಕಾರಿ ಜಾಗದಲ್ಲಿ ಉಳುಮೆ ಮಾಡುತ್ತಿದ್ದರೆ, ಅಥವಾ ಮನೆ ನಿರ್ಮಾಣ ಮಾಡಿದ್ದರೆ ರೈತರ ಹೆಸರಿಗೆ ಆ ಜಾಗ ವರ್ಗಾವಣೆ (Land Transfer) ಮಾಡಲಾಗುತ್ತದೆ ಎನ್ನಲಾಗಿದೆ. ಅಲ್ಲದೆ, ಯಾವುದೇ ಜಾಗ ನಿವೇಶನ ಇದ್ದರೂ ಅದು ಆ ವ್ಯಕ್ತಿಯ ಹೆಸರಿನಲ್ಲಿ ನಮೂದಾಗದಿದ್ದರೆ ಸರಕಾರದ ಯಾವುದೇ ಸೌಲಭ್ಯ ಗಳು ದೊರಕುವುದಿಲ್ಲ‌. ಇದ್ದ ಜಾಗವನ್ನು ಅಕ್ರಮ ಜಮೀನು ಅನ್ನು ಸಕ್ರಮ ಜಮಿನನ್ನಾಗಿ ಮಾಡಬಹುದು ಎಂದು ತಿಳಿಸಲಾಗಿದೆ.

ಬಡವರ ಹೆಸರಲ್ಲಿ ಇದ್ದ ಸರ್ಕಾರಿ ಭೂಮಿ (Govt Land) ಇದೀಗ ಉಳಿದವರ ಪಾಲಾಗುತ್ತಿದೆ. ಈ ಬಗ್ಗೆ ಸರಕಾರ ಸೂಕ್ತವಾದ ಕ್ರಮ ವನ್ನು ಕೈಗೊಂಡಿದ್ದು, ಬಗರ್‌ ಹುಕುಂ (Bagar Hukum) ಹೆಸರಿನಲ್ಲಿ ಇತರ ಯಾರೇ ವ್ಯಕ್ತಿ ಭೂಮಿ ಒತ್ತುವರಿ ಮಾಡಿಕೊಂಡಿದ್ದರೆ ಅದೆಲ್ಲದರ ಮೇಲೆ ಕ್ರಮ ವಹಿಸಲು ಪ್ರತ್ಯೇಕ ಆ್ಯಪ್ ಅನ್ನು ಕರ್ನಾಟಕ ಕಂದಾಯ ಇಲಾಖೆ ಜಾರಿಗೆ ತಂದಿದೆ. ಒಟ್ಟಾರೆ ಸರಕಾರಿ ಜಾಗದಲ್ಲಿ (Government Land) ಕೃಷಿ ಮಾಡಿ ಬದುಕು ಕಟ್ಟಿಕೊಂಡಿರುವ ರೈತರು ನಿಟ್ಟುಸಿರು ಬಿಡುವಂತಾಗಿದೆ.

 

ಇದನ್ನು ಓದಿ: ಈ ಯೋಜನೆಯಡಿ ಕಾರ್ಮಿಕರಿಗೆ ಪ್ರತೀ ತಿಂಗಳು ಸಿಗಲಿದೆ ಭರ್ಜರಿ 3,000 ಪಿಂಚಣಿ !!

Leave A Reply

Your email address will not be published.