Kitchen Tips: ಎಷ್ಟೇ ಪ್ರಯತ್ನಿಸಿದ್ರು ಹೆಚ್ಚು ಹೆಚ್ಚು ಗ್ಯಾಸ್ ಬಳಕೆ ಆಗ್ತಿದೆಯಾ ?! ಈ ಸಿಂಪಲ್ ಟ್ರಿಕ್ಸ್ ಬಳಸಿ, ಗ್ಯಾಸನ್ನು ಉಳಿಸಿ

Kitchen tips useful tips to save cooking gas in home latest news

Gas Cylinder Saving Tips: ದೈನಂದಿನ ಪ್ರತಿ ವಸ್ತುಗಳ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದೆ. ಈ ನಡುವೆ, ದಿನಸಿ, ತರಕಾರಿ, ಪೆಟ್ರೋಲ್‌-ಡೀಸೆಲ್, ಗ್ಯಾಸ್ ಸಿಲಿಂಡರ್ (Gas Cylinder)ಎಲ್ಲ ಬೆಲೆ ಏರಿಕೆಯಿಂದ ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ನಡುವೆ, ಗ್ಯಾಸ್ ಸಿಲಿಂಡರ್ ಉಳಿತಾಯ (Gas Cylinder saving Tips)ಮಾಡಲು ಕೆಲವು ಸಿಂಪಲ್ ಟಿಪ್ಸ್ ಫಾಲೋ ಮಾಡಿ:

ಬರ್ನರ್ (Gas Burner)ಶುಚಿಯಾಗಿಟ್ಟುಕೊಳ್ಳಿ :
ನೀವೇನಾದರೂ ಗ್ಯಾಸ್ ಸಿಲಿಂಡರ್(Gas Cylinder)ಉಳಿತಾಯ ಮಾಡಬೇಕು ಎಂದುಕೊಂಡರೆ,
* ಮೊದಲಿಗೆ ಗ್ಯಾಸ್ ಬರ್ನರ್ ಅನ್ನು ಶುಚಿಯಾಗಿ ಇಟ್ಟುಕೊಳ್ಳಬೇಕಾಗುತ್ತದೆ.
* ಗ್ಯಾಸ್ ಬರ್ನರ್‌ ಅನ್ನು ಶುಚಿ ಮಾಡದೆ ಇದ್ದಾಗ ಪೈಪ್ ಮುಖಾಂತರ ಗ್ಯಾಸ್ ಸರಿಯಾಗಿ ಬರದೇ ಬ್ಲಾಕ್ ಆಗುವ ಸಂಭವವಿದೆ. ಇದರಿಂದ ಬರ್ನರ್ ಕೂಡ ಸರಿಯಾಗಿ ಉರಿಯದು.
* ಬರ್ನರ್‌ ಅನ್ನು ಕನಿಷ್ಟ ಪಕ್ಷ ಮೂರು ತಿಂಗಳಿಗೊಮ್ಮೆ ಆದರೂ ಸರ್ವೀಸ್ ಮಾಡುತ್ತಲೇ ಇರಬೇಕು.
* ಗ್ಯಾಸ್ ಒಲೆಯ ಬೆಂಕಿಯ ಬಣ್ಣವನ್ನು ಗಮನಿಸಿ, ಬರ್ನರ್‌ ಕ್ಲೀನಾಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು.
* ಗ್ಯಾಸ್ ಒಲೆಯ ಬೆಂಕಿಯ ಬಣ್ಣ ಕೆಂಪು, ಹಳದಿ ಅಥವಾ ಕಿತ್ತಳೆ ಬಣ್ಣದಲ್ಲಿದ್ದರೆ, ಬರ್ನರ್‌ನಲ್ಲಿ ಸಮಸ್ಯೆಯಿದೆ ಎಂಬುದು ತಿಳಿಯುತ್ತದೆ.

# ಕುಕ್ಕರ್ ಹೆಚ್ಚು ಬಳಸಿ
ಅಡುಗೆ ಮಾಡುವಾಗ ಯಾವಾಗಲೂ ತೆರೆದ ಪಾತ್ರೆಯನ್ನು ಬಳಸುವ ಬದಲಿಗೆ ಕುಕ್ಕರ್‌ (Cooker)ಅನ್ನು ಬಳಸಿಕೊಳ್ಳಿ. ಕುಕ್ಕರ್ ಬಳಸಿದರೆ ಅನ್ನ, ತರಕಾರಿ ಬೇಗ ಬೇಯುತ್ತದೆ. ಕುಕ್ಕರ್ ಬಳಸಿದರೆ ಗ್ಯಾಸ್ ವೇಸ್ಟ್ ಆಗುವುದಿಲ್ಲ.

# ಧಾನ್ಯ, ಅಕ್ಕಿಯನ್ನು ನೆನೆಸಿಡಿ
ಸಾಮಾನ್ಯವಾಗಿ ಧಾನ್ಯಗಳನ್ನು ಬೇಯಿಸಲು ಹೆಚ್ಚು ಸಮಯ ಬೇಕಾಗುತ್ತದೆ. ಹೀಗಾಗಿ, ಹೆಚ್ಚು ಗ್ಯಾಸ್ ಖರ್ಚಾಗುತ್ತದೆ. ಈ ನಡುವೆ, ಗ್ಯಾಸ್ ಸಿಲಿಂಡರ್ ಉಳಿತಾಯ ಮಾಡಲು ಅಡುಗೆ ಸಿದ್ದ ಪಡಿಸುವ ಮುನ್ನ ಕನಿಷ್ಠ ಒಂದು ಗಂಟೆಯ ಮೊದಲು ಧಾನ್ಯಗಳು ಇಲ್ಲವೇ ಅಕ್ಕಿ ಯನ್ನು ಗಂಟೆಗಳ ಕಾಲ, ನೀರಿನಲ್ಲಿ ನೆನೆಸಿಡಿ. ಇದರಿಂದ ಗ್ಯಾಸ್ ಉಳಿತಾಯವಾಗುತ್ತದೆ.

# ಪೈಪ್ ಮತ್ತು ರೆಗ್ಯೂಲೇಟರ್‌ ಶುಚಿ:
ಪೈಪ್ ಮತ್ತು ರೆಗ್ಯೂಲೇಟರ್‌ನಲ್ಲಿ ಗ್ಯಾಸ್ ಲೀಕ್ ಆಗುತ್ತಿದೆಯಾ ಎನ್ನುವುದನ್ನು ಗಮನಿಸಬೇಕು. ಗ್ಯಾಸ್ ಸಿಲಿಂಡರ್‌ ಮತ್ತು ಇದರ ಪೈಪ್‌ನ ಸುರಕ್ಷತೆಯಷ್ಟೇ ಇದರ ರೆಗ್ಯೂಲೇಟರ್ ಬಗ್ಗೆ ಕೂಡ ಎಚ್ಚರ ವಹಿಸಬೇಕು. ಕೆಲವೊಮ್ಮೆ ರೆಗ್ಯೂಲೇಟರ್ ನ ಕಾರಣದಿಂದ ಗ್ಯಾಸ್ ಸೋರಿಕೆಯಾಗುತ್ತದೆ. ಇದರಿಂದ ಸರಿಯಾದ ನಿರ್ವಹಣೆ ಮಾಡುವುದು ಅವಶ್ಯಕ.

 

ಇದನ್ನು ಓದಿ: Government Land : ಸರ್ಕಾರಿ ಜಾಗದಲ್ಲಿ ಹೊಲ, ಗದ್ದೆ ಮಾಡಿದವರಿಗೆ ಸಂತಸದ ಸುದ್ದಿ – ಬದಲಾದವು ನೋಡಿ ಹಳೆ ನಿಯಮಗಳು

Leave A Reply

Your email address will not be published.