Kill Dog By Hanging: ನಾಯಿಯನ್ನು ಗೇಟ್’ಗೆ ನೇತುಹಾಕಿ ಕೊಂದೇ ಬಿಟ್ರು ಪಾಪಿಗಳು – ಮನಕಲುಕೋ ವಿಡಿಯೋ ವೈರಲ್
Kill Dog By Hanging: ಪ್ರಾಣಿ ಕ್ರೌರ್ಯ ಸೇರಿದಂತೆ ವಿವಿಧ ಆರೋಪಗಳ ಮೇಲೆ ಮೂವರನ್ನು ಬಂಧಿಸಲಾಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಮೂಲತಃ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಶ್ವಾನ ತರಬೇತುದಾರ ತನ್ನ ಇಬ್ಬರು ಸಿಬ್ಬಂದಿಯೊಂದಿಗೆ ಸೇರಿ ನಾಯಿಯೊಂದನ್ನು ತರಬೇತಿ ಕೇಂದ್ರದ (Training center) ಗೇಟ್‌ಗೆ ತೂಗು ಹಾಕಿ ಕೊಂದಿರುವ ಭೀಕರ ಘಟನೆ (kill dog by hanging it) ಆರೋಪ ಸಾಬೀತು ಆಗಿದೆ. ಸದ್ಯ ಈ ಕುರಿತಾದ ವಿಡಿಯೊ ವೈರಲ್ ಆಗಿದೆ (Viral News).
ರವಿ ಕುಶ್ವಾಹ, ನೇಹಾ ತಿವಾರಿ ಮತ್ತು ತರುಣ್ ದಾಸ್ ಮತ್ತಿತರರು ನಾಯಿಯನ್ನು ಕೊಂದಿದ್ದು, ಶ್ವಾನದ ಮಾಲಕ, ಉದ್ಯಮಿ ನಿಲೇಶ್ ಜೈಸ್ವಾಲ್ ನಾಯಿಯನ್ನು ನಾಲ್ಕು ತಿಂಗಳ ಕಾಲದ ತರಬೇತಿಗಾಗಿ ಆಲ್ಫಾ ಡಾಗ್ ಟ್ರೈನಿಂಗ್ ಮತ್ತು ಬೋರ್ಡಿಂಗ್ ಸೆಂಟರ್ ತರಬೇತಿ ಕೇಂದ್ರಕ್ಕೆ ಸೇರಿಸಿದ್ದು, ತಿಂಗಳಿಗೆ 13,000 ರೂ. ಫೀಸ್ ಚಾರ್ಜ್ ಮಾಡಲಾಗಿತ್ತು. ಸೆಪ್ಟಂಬರ್‌ನಲ್ಲೇ ತರಬೇತಿ ಅವಧಿ ಕೊನೆಗೊಂಡಿತ್ತು. ಜೈಸ್ವಾಲ್ ತನ್ನ ನಾಯಿಯನ್ನು ಮನೆಗೆ ಕರೆದೊಯ್ಯಲು ಕೇಂದ್ರವನ್ನು ಸಂಪರ್ಕಿಸಿದಾಗ ನಾಯಿ ಸತ್ತಿದೆ ಎಂದು ತಿಳಿಸಿದ್ದರು.
ಅನುಮಾನಗೊಂಡ ಜೈಸ್ವಾಲ್ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಬೇಕೆಂದು ಆಗ್ರಹಿಸಿದ್ದರು. ಅಲ್ಲದೆ ದೂರು ನೀಡಿದ್ದರು. ಅದರ ಮೇರೆಗೆ ಮಿಸ್ರೋಡ್ ಪೊಲೀಸರು ತನಿಖೆ ನಡೆಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಘಟನೆಯ ದಿನದ ಸಿಸಿಟಿವಿ ವಿಡಿಯೊವನ್ನು ಅಳಿಸಲಾಗಿದೆ ಎಂದು ತಿಳಿದುಬಂತು ಎಂದು ಅಧಿಕಾರಿಗಳು ತಿಳಿಸಿದರು.
ನಂತರ ಪೊಲೀಸರು ಹಾರ್ಡ್ ಡ್ರೈವ್ ಅನ್ನು ವಶಪಡಿಸಿಕೊಂಡು ಅಕ್ಟೋಬರ್ 9ರ ಘಟನೆಯ ದಿನದ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದರು. ಇದರಲ್ಲಿ ಕುಶ್ವಾಹ, ತಿವಾರಿ ಮತ್ತು ದಾಸ್ ನಾಯಿಯನ್ನು ಕಟ್ಟಿ ಗೇಟ್‌ಗೆ ತೂಗು ಹಾಕುತ್ತಿರುವುದು ಕಂಡು ಬಂದಿದೆ. ನಾಯಿ ಸುಮಾರು 10 ನಿಮಿಷಗಳ ಕಾಲ ಪರದಾಡಿ ಉಸಿರುಗಟ್ಟಿ ಮೃತಪಟ್ಟಿದೆ.
ಸದ್ಯ ನಾಯಿ ಆಕ್ರಮಣಕಾರಿ ಮನೋಭಾವ ಹೊಂದಿತ್ತು ಮತ್ತು ತರಬೇತಿಯ ಭಾಗವಾಗಿ ಅದನ್ನು ಗೇಟಿಗೆ ಕಟ್ಟಲು ಪ್ರಯತ್ನಿಸಿದೆವು. ಆದರೆ ನಾಯಿಯ ಕುತ್ತಿಗೆಯ ಹಗ್ಗವು ಬಿಗಿಯಾಗಿದ್ದರಿಂದ ಅದು ಪ್ರಜ್ಞಾಹೀನವಾಯಿತು ಎಂದು ಆರೋಪಿಗಳು ಹೇಳಿಕೆ ನೀಡಿದ್ದಾರೆ.
ಈ ವಿಷಯದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರದಲ್ಲಿ ಇನ್ನೂ 10ರಿಂದ 15 ನಾಯಿಗಳಿವೆ ಮತ್ತು ಪೊಲೀಸರು ಅವುಗಳ ಮಾಲಕರಿಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
Dog killed by training centre owner in #bhopal@Manekagandhibjp ji please help us in putting them behind the bar.@deespeak #AnimalCruelty #AnimalAbuse #killed #pfa #peopleforanimal pic.twitter.com/9mGJduzYqr
— शोbhit (@2IC_Shobhit) October 18, 2023
ಇದನ್ನು ಓದಿ: Gruha Lakshmi Yojana: BPL ಕಾರ್ಡ್ ತಿದ್ದುಪಡಿಗೆ ಇರೋದಿನ್ನು 3 ದಿನ ಮಾತ್ರ – ಆದ್ರೆ ಮಾಡಿಸಲು ಇವರಿಗೆ ಮಾತ್ರ ಅವಕಾಶ