ಸಿನಿಮಾ ನಟಿಯಿಂದ ಬಂತೊಂದು ಸ್ಪೆಷಲ್ ಟ್ವೀಟ್- ತಮಿಳು ನಾಡು ‘ಕಮಲ’ ಪಾಳಯದಲ್ಲಿ ಶುರುವಾಯ್ತು ಹೊಸ ಸಂಚಲನ

Vijayashanthi: ತೆಲಂಗಾಣದಲ್ಲಿ ಭಾರತೀಯ ಜನತಾ ಪಕ್ಷವು ಚುನಾವಣಾ ಸಮಯ ಸಮೀಪಿಸುತ್ತಿದ್ದಂತೆ ಬಿಜೆಪಿ ಕಚೇರಿಯಲ್ಲಿ ಮೊದಲ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆದಿದೆ. ಈ ವೇಳೆ ಬಿಜೆಪಿ ಹಿರಿಯ ನಾಯಕಿ ವಿಜಯಶಾಂತಿ ಮುಂದಿಟ್ಟಿರುವ ಹೊಸ ಬೇಡಿಕೆ ತೆಲಂಗಾಣದಾದ್ಯಂತ ಸಂಚಲನ ಮೂಡಿಸಿದ್ದು, ವಿಜಯಶಾಂತಿ (Vijayashanthi)ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ.

ಕೆಲ ದಿನಗಳಿಂದ ಬಿಜೆಪಿಯಲ್ಲಿದ್ದರೂ ವಿಜಯಶಾಂತಿ ಅತಿಥಿ ಪಾತ್ರದಲ್ಲಿ ಮಾತ್ರವೇ ಕಾಣಿಸಿಕೊಂಡಿದ್ದಾರೆ.
ಆದರೆ ಇದೀಗ ಒಂದು ರೀತಿಯಲ್ಲಿ, ಮುಖ್ಯಮಂತ್ರಿ ಕೆಸಿಆರ್ ವಿರುದ್ಧದ ಸ್ಪರ್ಧೆಗೆ ತಮ್ಮ ಹೆಸರನ್ನು ಪರಿಗಣಿಸಬೇಕು ಎಂದು ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಹೇಳುವಂತಿದೆ ಆ ಟ್ವೀಟ್ ಅರ್ಥ.

ಬಿಆರ್‌ಎಸ್ ನಾಯಕ, ಸಿಎಂ ಕೆ ಚಂದ್ರಶೇಖರ ರಾವ್​ ಈ ಬಾರಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಎಂದಿನಂತೆ ಗಜವೇಲ್ ಕ್ಷೇತ್ರದ ಜತೆಗೆ ಕಾಮಾರೆಡ್ಡಿ ಕ್ಷೇತ್ರದಿಂದಲೂ ಈ ಬಾರಿ ಕಣಕ್ಕೆ ಇಳಿಯಲು ಪ್ಲಾನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಶಾಂತಿ ಕಾಮಾರೆಡ್ಡಿಯಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ಪರೋಕ್ಷವಾಗಿ ಬಿಜೆಪಿ ವರಿಷ್ಠರಿಗೆ ಶಾಂತಿ ಮನವಿ ಮಾಡಿದ್ದಾರೆ.

ಗಜವೇಲ್ ಕ್ಷೇತ್ರದಿಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಂಡಿ ಸಂಜಯ್ ಅವರ ಹೆಸರನ್ನು ಪರಿಶೀಲಿಸುವಂತೆಯೂ ಅವರು ಪರೋಕ್ಷವಾಗಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಆದರೆ ಇದು ಕೇವಲ ತನ್ನ ಅಭಿಪ್ರಾಯವಷ್ಟೇ ಅಲ್ಲ. ತೆಲಂಗಾಣದ ಸರಾಸರಿ ಬಿಜೆಪಿ ಕಾರ್ಯಕರ್ತರು ಇದನ್ನೇ ಹೇಳುತ್ತಿದ್ದಾರೆ ಎಂದಿದ್ದಾರೆ. ಆದರೆ, ತೆಲಂಗಾಣ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಇರಾದೆ ತನಗಿಲ್ಲ ಎಂದು ಈ ಹಿಂದೆ ಹೇಳಿದ್ದ ವಿಜಯಶಾಂತಿ, ವರಿಷ್ಠರು ಕೈಗೊಳ್ಳುವ ಕಾರ್ಯತಂತ್ರದ ನಿರ್ಧಾರಗಳನ್ನು ಖಂಡಿತಾ ಪಾಲಿಸಬೇಕಾಗುತ್ತದೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಮತ್ತೊಂದೆಡೆ, ಕೆಲವು ದಿನಗಳಿಂದ ಹುಜೂರಾಬಾದ್ ಶಾಸಕ, ಬಿಜೆಪಿ ಮುಖಂಡ ಈಟಲ ರಾಜೇಂದ್ರ ಅವರು ಗರ್ವೇಲ್‌ನಿಂದ ಕೆಸಿಆರ್ ವಿರುದ್ಧ ಸ್ಪರ್ಧಿಸಲು ತಾನು ಸಿದ್ಧ ಎಂದು ಹೇಳುತ್ತಿದ್ದಾರೆ. ಚುನಾವಣೆ ವೇಳೆ ಹುಜೂರಾಬಾದ್ ಜನರಿಗೆ ಕೆಸಿಆರ್ ಮಾಡಿದ ತೊಂದರೆ ನೋಡಿ ಗಜವೇಲಿಯಲ್ಲಿ ಸ್ಪರ್ಧಿಸಲು ತಾನು ನಿರ್ಧರಿಸಿರುವದಾಗಿ ಅವರು ಹೇಳಿದ್ದಾರೆ.

ನಾನು ಗಜ್ವೇಲ್‌ಗೆ ಹೋಗುವ ಮುನ್ನ ನೂರಾರು ಮುಖಂಡರು, ಸರಪಂಚ್‌ಗಳು, ಮಾಜಿ ಸರಪಂಚ್‌ಗಳು ಬೆಂಬಲ ನೀಡಲು ಮುಂದೆ ಬಂದಿದ್ದರು. ಜನರ ಹೃದಯದಲ್ಲಿ ಕೆಸಿಆರ್ ಇದ್ದಾರೆ. ಸ್ವಾಭಿಮಾನಕ್ಕೆ ಅಭಿವೃದ್ಧಿ ಪರ್ಯಾಯವಲ್ಲ ಎಂದು ಜನರು ಭಾವಿಸುತ್ತಾರೆ ಎಂದು ರಾಜೇಂದ್ರ ಹೇಳಿದರು. ಈ ಹಂತದಲ್ಲಿ ಗಜ್ವೇಲ್‌ನಲ್ಲಿ ಕೆಸಿಆರ್‌ರನ್ನು ಸೋಲಿಸಲು ಈಟಲ ರಾಜೇಂದ್ರ ಮಾನಸಿಕವಾಗಿ ಸಜ್ಜಾಗಿದ್ದಾರೆ. ಕಾರ್ಯಕರ್ತರು ಸಹ ಬಂಡಿ ಸ್ಪರ್ಧೆಗೆ ಆಗ್ರಹಿಸುತ್ತಿದ್ದು, ವಿಜಯಶಾಂತಿ ಟ್ವೀಟ್‌ ಮಾಡಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹಾಗೂ ರಾಜ್ಯ ನಾಯಕರನ್ನೂ ಗೊಂದಲ ಮಾಡಿದೆ.

 

ಇದನ್ನು ಓದಿ: CM Ibrahim: ದೇವೇಗೌಡ್ರೇ, ವಿನಾಶ ಕಾಲೇ ವಿಪರೀತ ಬುದ್ಧಿ, Wait and Watch- ಎಚ್ಚರಿಕೆ ನೀಡಿದ ಸಿಎಂ ಇಬ್ರಾಹಿಂ!!!

Leave A Reply

Your email address will not be published.