APAAR ID: ‘ಆಧಾರ್ ‘ ರೀತಿಯಲ್ಲೇ ಬಂತು ‘ಅಪಾರ್’- ಇವರಿಗೆ ಇಷ್ಟೆಲ್ಲಾ ಲಾಭ ತರಲಿದೆ ಈ ಕಾರ್ಡ್!!
Govt news education department introduced apaar I'd for students benefits of apaar card
APAAR ID: 12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯ ಆಧಾರ್ ಭಾರತೀಯನ ಪ್ರತಿಯೊಬ್ಬ ಅಗತ್ಯ ID ಪುರಾವೆಯಾಗಿದೆ. ಇದು ವಿಶಿಷ್ಟ ಗುರುತಿನ ಪ್ರಾಧಿಕಾರ ದೊಂದಿಗೆ (ಯುಐಡಿಎಐ) ಭಾರತದ ಜನರಿಗೆ ನೀಡುವ ದಾಖಲೆಯಾಗಿದೆ. ಇದೀಗ ಈ ಇದೇ ಮಾದರಿಯಲ್ಲಿ ಅಪಾರ್ (APAAR ID) ಅನ್ನು ಪರಿಚಯಿಸಲಾಗಿದೆ. ಒಂದು ರಾಷ್ಟ್ರ, ಒಂದು ಐಡಿ ಕಾರ್ಯಕ್ರಮದ ಅಡಿಯಲ್ಲಿ ಇದನ್ನು ಪರಿಚಯಿಸಲಾಗಿದ್ದು, ಇದರಲ್ಲಿ 12 ಅಂಕಿಯ ಗುರುತಿನ ಸಂಖ್ಯೆ ಇರುತ್ತದೆ.
ಭಾರತ ಸರ್ಕಾರವು ಆಟೋಮ್ಯಾಟಿಕ್ ಪರ್ಮನೆಂಟ್ ಅಕಾಡೆಮಿಕ್ ಅಕೌಂಟ್ ರಿಜಿಸ್ಟ್ರಿ (Automatic Permanent Academic Account Registry) ಅಥವಾ ಅಪಾರ್ ಅನ್ನು ಈಗ ಪರಿಚಯಿಸಿದ್ದು, ಇದು ವಿದ್ಯಾರ್ಥಿಗಳಿಗೆ ಆಜೀವ ಶೈಕ್ಷಣಿಕ ದಾಖಲೆಯಾಗಿ ಕೆಲಸ ಮಾಡುತ್ತದೆ. ಹಾಗಿದ್ರೆ, ಇದನ್ನು ಪಡೆಯುವುದು ಹೇಗೆ? ಸರ್ಕಾರ ಈ ಅಪಾರ್ ಅನ್ನು ಯಾಕೆ ಪರಿಚಯಿಸಿದೆ? ಎಂಬ ಮಾಹಿತಿ ಇಲ್ಲಿದೆ ನೋಡಿ.
ಅಪಾರ್ ಐಡಿಯು ಆಧಾರ್ ಕಾರ್ಡ್‌ನ ಪರಿಕಲ್ಪನೆಯಲ್ಲೇ ಇದ್ದು, ಇದು ಪ್ರತಿ ವಿದ್ಯಾರ್ಥಿಗೆ ವಿಶಿಷ್ಟವಾದ 12 ಅಂಕಿಗಳನ್ನು ನೀಡುತ್ತದೆ. ಈ ಸಂಖ್ಯೆಯು ಶಾಲೆ, ಜೂನಿಯರ್ ಕಾಲೇಜು, ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಪದವಿ ಸೇರಿದಂತೆ ವಿವಿಧ ಶೈಕ್ಷಣಿಕ ಹಂತಗಳಲ್ಲಿ ವಿದ್ಯಾರ್ಥಿಯ ಶೈಕ್ಷಣಿಕ ಹಂತ ಹೇಗಿದೆ ಎಂಬುದನ್ನು ಸೂಕ್ಷ್ಮವಾಗಿ ಟ್ರ್ಯಾಕ್ ಮಾಡುತ್ತದೆ. ಅಷ್ಟೇ ಅಲ್ಲದೆ ವಿದ್ಯಾರ್ಥಿವೇತನಗಳು ಮತ್ತು ಶೈಕ್ಷಣಿಕ ಕೋರ್ಸ್‌ಗಳಲ್ಲಿ ಮಾಡಲಾದ ಎಲ್ಲಾ ಆರ್ಥಿಕ ಮಾಹಿತಿಯೂ ಇದರಲ್ಲಿ ಇರಲಿದೆ.
ಇದರೊಂದಿಗೆ ಅಧಿಕೃತ ಸರ್ಕಾರಿ ಉಪಕ್ರಮವಾದ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್ (ABC) ನೊಂದಿಗೆ ನಿಕಟವಾಗಿ ಸಂಬಂಧ ಹೊಂದಲಾಗಿದೆ. ವಿದ್ಯಾರ್ಥಿಯು ಕೋರ್ಸ್ ಅಥವಾ ಸೆಮಿಸ್ಟರ್ ಅನ್ನು ಪೂರ್ಣಗೊಳಿಸಿದಾಗ ಅವರು ಗಳಿಸಿದ ಕ್ರೆಡಿಟ್‌ಗಳು ನೇರವಾಗಿ ಬ್ಯಾಂಕ್ ಆಫ್ ಕ್ರೆಡಿಟ್ಸ್ ನಲ್ಲಿ ಕಾಣಿಸಿಕೊಳ್ಳುತ್ತವೆ. ಇದು ಭಾರತದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಅವರ ಸಿಂಧುತ್ವವನ್ನು ಖಚಿತಪಡಿಸುತ್ತದೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಹಿಂದಿನ ಶಿಕ್ಷಣದ ಗುರುತಿಸುವಿಕೆ ಮತ್ತು ಮೌಲ್ಯೀಕರಣದ ವಿಷಯದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುವ ಅವಶ್ಯಕತೆ ಇಲ್ಲ.
ಅಪಾರ್ ಐಡಿಯ ಪ್ರವೇಶವನ್ನು ಪಡೆದುಕೊಳ್ಳಲು ನೀವು ಡಿಜಿಲಾಕರ್‌ಗೆ (DigiLocker) ಭೇಟಿ ನೀಡಬೇಕಿದೆ. ಅಂದರೆ ಇದನ್ನು ಡಿಜಿಲಾಕರ್ ಪ್ಲಾಟ್‌ಫಾರ್ಮ್ ಮೂಲಕ ಸುವ್ಯವಸ್ಥಿತಗೊಳಿಸಲಾಗಿದೆ. ಈ ಕಾರ್ಡ್ ಅನ್ನು ಪಡೆದುಕೊಳ್ಳಲು ನೀವು ಮಾನ್ಯವಾದ ಆಧಾರ್ ಕಾರ್ಡ್ ಅನ್ನು ಹೊಂದಿರಬೇಕಾಗುತ್ತದೆ. ನಂತರ ಸಕ್ರಿಯ ಡಿಜಿಲಾಕರ್ ಖಾತೆಯನ್ನು ಸಹ ಹೊಂದಿರಬೇಕು ಎಂಬುದು ತಿಳಿದಿರಲಿ. ಇದಾದ ಬಳಿಕ ಇ-ಕೆವೈಸಿ ಪ್ರಕ್ರಿಯೆ ನಡೆಸಬೇಕಾಗುತ್ತದೆ. ನೋಂದಣಿ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಯ ಪೋಷಕರ ಒಪ್ಪಿಗೆ ಅಗತ್ಯವಿದೆ ಎಂಬುದು ಈ ವೇಳೆ ನಿಮ್ಮ ಗಮನಕ್ಕೆ ಇರಲಿ.
ಹಂತ 1: ಈ ಕಾರ್ಡ್‌ಗೆ ನೋಂದಣಿ ಮಾಡಿಕೊಳ್ಳಲು ನೀವು abc.gov.in ಗೆ ಭೇಟಿ ನೀಡಿ ಬಳಿಕ ಅಲ್ಲಿ ವಿದ್ಯಾರ್ಥಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಂತರದಲ್ಲಿ ನನ್ನ ಖಾತೆ ಮೇಲೆ ಆಯ್ಕೆ ಕಾಣಿಸಿಕೊಳ್ಳಲಿದ್ದು, ಲಾಗಿನ್ ಐಡಿ ಬಳಕೆ ಮಾಡಿಕೊಂಡು ಡಿಜಿಲಾಕರ್ ಖಾತೆಗೆ ಲಾಗಿನ್ ಮಾಡಿ.
ಹಂತ 2: ಈ ವೇಳೆ ಪ್ರಾಂಪ್ಟ್ ಮಾಡಿದಾಗ ಕೆವೈಸಿ ಪರಿಶೀಲನೆಗಾಗಿ ಎಬಿಸಿ ಯೊಂದಿಗೆ ನಿಮ್ಮ ಆಧಾರ್ ಕಾರ್ಡ್ ವಿವರಗಳನ್ನು ಶೇರ್ ಮಾಡಿಕೊಳ್ಳಲು ಒಪ್ಪಿಗೆ ನೀಡಿ . ನಂತರದಲ್ಲಿ ಅಲ್ಲಿ ಕೇಳಲಾಗುವ ಶಾಲೆ ಅಥವಾ ವಿಶ್ವವಿದ್ಯಾಲಯದ ಹೆಸರು, ಕೋರ್ಸ್ ಹೆಸರು ಇತ್ಯಾದಿ ಅಗತ್ಯ ಶೈಕ್ಷಣಿಕ ವಿವರಗಳನ್ನು ಒದಗಿಸಿ.
ಹಂತ 3: ಇದನ್ನೆಲ್ಲಾ ಪೂರೈಸಿದ ಮೇಲೆ ಮಾಹಿತಿಯನ್ನು ಸೇವ್ ಮಾಡಿ . ಇಷ್ಟು ಮಾಡಿದ್ರೆ ನಿಮ್ಮ ಎಲ್ಲಾ ಕೆಲಸ ಆದಂತೆ. ನಂತರದಲ್ಲಿ ಡೇಟಾವನ್ನು ಶಿಕ್ಷಣ ಸಂಸ್ಥೆಗಳು ನಿಯಮಿತವಾಗಿ ನವೀಕರಿಸುತ್ತವೆ. ಇದು ವಿದ್ಯಾರ್ಥಿಯ ಆಧಾರ್ ಕಾರ್ಡ್‌ಗೆ ನೇರವಾಗಿ ಲಿಂಕ್ ಆಗಿರುವುದರಿಂದ ವಿದ್ಯಾರ್ಥಿಯು ಜೀವಿತಾವಧಿಯಲ್ಲಿ ಮಾನ್ಯವಾಗಿರುವ ಒಂದು ಅಪಾರ್ ಐಡಿಯನ್ನು ಅನ್ನು ಮಾತ್ರ ಹೊಂದಬಹುದಾಗಿದೆ.
ಇನ್ನು ಅಪಾರ್ ಐಡಿ ಪಡೆದುಕೊಳ್ಳುವುದು ಸ್ವಯಂಪ್ರೇರಿತವಾಗಿದ್ದು, ಇದು ಯಾವುದೇ ಕಡ್ಡಾಯದ ವಿಚಾರವಲ್ಲ ಎಂದು ತಿಳಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳು ತಮಗೆ ಇಷ್ಟವಾದರೆ ಇದನ್ನು ಪಡೆದುಕೊಳ್ಳಬಹುದು ಅಥವಾ ಇಷ್ಟ ಇಲ್ಲ ಎಂದಾದರೆ ಇದರಿಂದ ದೂರ ಉಳಿಯಬಹುದಾಗಿದೆ.
ಇದನ್ನೂ ಓದಿ: ಅಂಬಿಕಾಪತಿ ಮನೆಗೆ ಕೆಂಪಣ್ಣ ಎಂಟ್ರಿ ?! ಹೊಸ ಬಾಂಬ್ ಸಿಡಿಸಿದ ಸದಾನಂದಗೌಡ