Good News for Central Employees: ಸರ್ಕಾರಿ ನೌಕರರಿಗೆ ನಿಮಗೆ ಮತ್ತೊಂದು ಭರ್ಜರಿ ಸುದ್ದಿ ! ಪಿಂಚಣಿ ಯೋಜನೆಯಲ್ಲಾಗಿದೆ ಅನೇಕ ಲಾಭ ತರುವಂತ ಬದಲಾವಣೆಗಳು !
Good news for Central Government employees and old pension scheme chanages latest updates
Central Government Employees : ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ಹೊರಬಿದ್ದಿದೆ. ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಲಾಭದಾಯಕ ಬದಲಾವಣೆಯಾಗಿದೆ. ಕೇಂದ್ರವು (Central Government)ಈ ವರ್ಷದ ಕೊನೆಯಲ್ಲಿ ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (NPS)ಪರಿಷ್ಕರಿಸುವ ಸಂಭವವಿದೆ.
ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆಯಡಿಯಲ್ಲಿ, (NPS )ಕೇಂದ್ರ ಮತ್ತು ರಾಜ್ಯ-ಸರ್ಕಾರಿ ಉದ್ಯೋಗಿಗಳು ತಮ್ಮ ಮೂಲ ವೇತನದ 10% ರಷ್ಟು ಕೊಡುಗೆ ನೀಡುತ್ತಾರೆ. ಈ ನಡುವೆ, ಸರ್ಕಾರವು 14%ದಷ್ಟನ್ನು ಪಾವತಿಸುತ್ತದೆ. ಅಂತಿಮ ಪಾವತಿಯು ನಿಧಿಯಿಂದ ಗಳಿಸಿದ ಆದಾಯವನ್ನು ಅವಲಂಬಿತವಾಗಿರುತ್ತದೆ. ಇದರ ನಡುವೆ, ಹಳೆಯ ಪಿಂಚಣಿ ವ್ಯವಸ್ಥೆಯು ಕೇಂದ್ರ ಸರ್ಕಾರಿ ನೌಕರರ ಕೊನೆಯ ವೇತನದ 50% ಶಾಶ್ವತ ಪಿಂಚಣಿಯನ್ನು ಖಾತರಿಪಡಿಸುತ್ತದೆ. ಹೀಗಾಗಿ, ಇದು ಉತ್ತಮ ನಿವೃತ್ತಿ ಯೋಜನೆ ಎಂದು ಪರಿಗಣಿಸಲಾಗಿದೆ.
ಕೇಂದ್ರ ಸರ್ಕಾರಿ ನೌಕರರು (Central Government Employees)ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವಂತೆ ಹಲವು ದಿನಗಳಿಂದ ಒತ್ತಾಯ ಮಾಡುತ್ತಿದ್ದು, ಪ್ರತಿಪಕ್ಷದ ಆಡಳಿತವಿರುವ ಹಲವು ರಾಜ್ಯಗಳು ಹಳೆಯ ಪಿಂಚಣಿ ಯೋಜನೆಗೆ (OPS) ಬದಲಾಗುತ್ತಿದೆ. ಹಳೆಯ ಪಿಂಚಣಿ ಯೋಜನೆಯಲ್ಲಿ, ನೌಕರರು ಗಳಿಸುವ ವೇತನದ 50%ವನ್ನು ನಿವೃತ್ತಿಯ ನಂತರ ಪಿಂಚಣಿಯಾಗಿ ಕೊಡಲಾಗುತ್ತದೆ. ಮಾರುಕಟ್ಟೆ ಸಂಬಂಧಿತ ಪಿಂಚಣಿ ಯೋಜನೆ, 2004 ರಲ್ಲಿ ಶುರುವಾಗಿದ್ದು, ಇದು OPSನಲ್ಲಿರುವಂತೆ ಯಾವುದೇ ಖಾತರಿಯ ಮೂಲ ಮೊತ್ತವನ್ನು ನೀಡುವುದಿಲ್ಲ.
“ಸರ್ಕಾರವು ಹಳೆಯ ಯೋಜನೆಯನ್ನು ಮತ್ತೆ ಜಾರಿ ಮಾಡುವುದಿಲ್ಲ. ಆದರೆ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ತರಲಿದೆ ಎನ್ನಲಾಗಿದೆ. ಈ ಮೂಲಕ, ನಿಗದಿತ ಮೂಲ ಮೊತ್ತವನ್ನು ಒದಗಿಸುತ್ತದೆ” ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಪರಿಷ್ಕೃತ ಹೊಸ ಪಿಂಚಣಿ ಯೋಜನೆಯು ಹೆಚ್ಚಿನ ಆದಾಯವನ್ನು ಒದಗಿಸಲು “ಆಕ್ಚುರಿಯಲ್ ಲೆಕ್ಕಾಚಾರಗಳಲ್ಲಿ” ಕೆಲವು ಬದಲಾವಣೆಗಳಾಗುವ ಸಾಧ್ಯತೆಯ ಬಗ್ಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉದ್ಯೋಗಿ ಮತ್ತು ಉದ್ಯೋಗದಾತರ ಅಂದರೆ, ಇಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಡುಗೆಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ರಾಷ್ಟ್ರೀಯ ಪಿಂಚಣಿ ಯೋಜನೆಯ ಪಿಂಚಣಿದಾರರು ನಿವೃತ್ತಿಯ ನಂತರ 60% ಕಾರ್ಪಸ್ ಅನ್ನು ಹಿಂಪಡೆಯಬಹುದಾಗಿದ್ದು, ಉಳಿದ 40% ಗೆ ವರ್ಷಾಶನ ಯೋಜನೆಯನ್ನು ಖರೀದಿಸಬಹುದು.
ಇದನ್ನು ಓದಿ: H D Devegowda: ಜೆಡಿಎಸ್ ಕಾರ್ಯಕರ್ತರಿಗೆಲ್ಲಾ ಊಹಿಸದಂತ ಶಾಕ್ – JDS ರಾಜ್ಯ ಘಟಕವನ್ನೇ ವಿಸರ್ಜಿಸದ ದೇವೇಗೌಡರು !!