Kachidi gold Fish: ಮೀನುಗಾರನ ಬಲೆಗೆ ಬಿದ್ದ ಈ ಮೀನು, ಅದೃಷ್ಟದ ಬಾಗಿಲು ತೆರೆಯಿತು! ಲಕ್ಷ ಲಕ್ಷ ಕೊಟ್ಟ ಈ ಮೀನು ಯಾವುದು?
national news 15kg kachidi gold fish record price sale 3 lakh
Kachidi Gold Fish: ನಾನ್‌ವೆಜ್ ಪ್ರಿಯರಿಗೆ ಮೀನು ಎಂದರೆ ತುಂಬಾನೇ ಇಷ್ಟವಿರುತ್ತದೆ. ಅದರಲ್ಲೂ ನೀವು ವೆರೈಟಿ ವೆರೈಟಿ ಮೀನನ್ನು ಖರೀದಿ ಮಾಡಿ ತಿಂದಿರಬಹುದು. ಆದರೆ ನಿಮಗೆ ಗೊತ್ತಿದೆಯೇ? 3.5 ಲಕ್ಷ ಬೆಲೆಬಾಳುವ ಮೀನಿನ ವೈಶಿಷ್ಟ್ಯತೆಯ ಕುರಿತು. ಇಂತಹ ಲಕ್ಷ ಲಕ್ಷ ಬೆಲೆಬಾಳುವ ಮೀನು ಬಲೆಗೆ ಬಿದ್ದಿರುವುದು ಓರ್ವ ಮೀನುಗಾರನಿಗೆ. ಪಾಶ ಮಣ್ಣಯ್ಯ ಎಂಬಾತ ಕಡಲ ದೇವಿಗೆ ನಮಸ್ಕಾರ ಮಾಡಿ ದೋಣಿ ತಗೊಂಡು ಹೋಗಿದ್ದಾನೆ. ಆತ ಸಮುದ್ರದಲ್ಲಿ ಬಲೆ ಬೀಸಿದಾಗ ಏನೋ ದೊರಕಿದ ಅನುಭವ ಆಗಿದೆ. ಅದು ತುಂಬಾ ಭಾರನೂ ಇತ್ತು. ನಿಜಕ್ಕೂ ಬಲೆಯಲ್ಲಿ ಬಿದ್ದಿರುವುದು ಮೀನಾ ಅಥವಾ ಇನ್ನೇನಾದರೂ ಎಂಬ ಅನುಮಾನವಾಗಿದೆ. ಆತ, ಜೊತೆಗಿದ್ದ ಆತನ ಸಂಗಡಿಗರು ಕೂಡಾ ಎಲ್ಲಾ ಸೇರಿ ಬಲೆಯನ್ನು ನಿಧಾನವಾಗಿ ಮೇಲಕ್ಕೆತ್ತಿದಾಗ ಕಂಡು ಬಂದದ್ದೇ ಭಾರೀ ಗಾತ್ರದ ಮೀನು. ಅಂತಿಂಥ ಸಾಮಾನ್ಯ ಮೀನಲ್ಲ ಅದು ಗೋಲ್ಡನ್ ಫಿಶ್ ಮಾರ್ರೆ. ಅದೃಷ್ಟದ ಜೊತೆಗೆ ಮೀನುಗಾರರಿಗೆ ಖುಷಿಯಾಗಿದೆ.
ಈ ಘಟನೆ ನಡೆದಿರುವುದು ಅನಕಪಲ್ಲಿ (Anakapalli) ಜಿಲ್ಲೆಯ ಪೂರ್ವ ಗೋದಾವರಿ ಗಡಿ ಭಾಗದಲ್ಲಿರುವ ಪಾಯಕರೋಪೇಟ ಪೆಂಟಕೋಟ ಗ್ರಾಮದಲ್ಲಿ. ಈ ಗೋಲ್ಡನ್ ಫಿಶನ್ನು ಕಚಿಡಿ ಫೀಸ್ (Kachidi Gold Fish) ಎಂದೂ ಕರೆಯಲಾಗುತ್ತದೆ. ಅನಂತರ ಮೀನುಗಾರರು ಕಷ್ಟಪಟ್ಟು ಆ ಮೀನನ್ನು ದೋಣಿಗೆ ಹಾಕಿ ದಡಕ್ಕೆ ತಂದಿದ್ದಾರೆ. ಈ ಸಮಯದಲ್ಲಿ ಈ ಮೀನನ್ನು ನೋಡಲು ಜನಸಾಗರವೇ ಬಂದಿತ್ತು. ಅನಂತರ ಹರಾಜು ಪ್ರಕ್ರಿಯೆ ನಡೆಯಿತು. 22 ಕೆಜಿ ತೂಕದ ಈ ಮೀನು ಭರ್ಜರಿಯಾಗಿ ಹರಾಜಾಗಿದೆ. ಸೂರಿ ಮಣಿ ಎಂಬ ವ್ಯಕ್ತಿ ಈ ಮೀನನ್ನು ಖರೀದಿಸಿದ್ದು ಬರೋಬ್ಬರಿ ಕೆಜಿ ಗೆ 14.5 ಸಾವಿರ ರೂಪಾಯಿಗೆ. ಅಂದರೆ ಒಟ್ಟು 3 ಲಕ್ಷದ 20 ಸಾವಿರ ರೂ.ಗೆ.
ಈ ಕಚಿಡಿ ಮೀನು ಸಮುದ್ರದಲ್ಲಿ ಅಪರೂಪಕ್ಕಂದರೆ ಅಪರೂಪದಲ್ಲಿ ದೊರಕುತ್ತದೆ. ಅದಕ್ಕೆ ಇದನ್ನು ಚಿನ್ನದ ಮೀನು ಎಂದು ಕರೆಯಲಾಗುತ್ತದೆ. ಈ ಮೀನಿನ ಮಾಂಸ ತುಂಬಾ ರುಚಿಕರ ಹಾಗೂ ಔಷಧೀಯ ಗುಣಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಕಚಿಡಿ ಮೀನಿನಲ್ಲಿರುವ ಗಂಡು ಮೀನು ಚಿನ್ನದ ಬಣ್ಣದಲ್ಲಿರುತ್ತದೆ. ಇದರ ಹೊಟ್ಟೆಯ ಭಾಗಕ್ಕೆ ಹೆಚ್ಚು ಬೆಲೆ.
ಇದನ್ನು ಓದಿ: Anti Hindu HDFC: ʼಹಿಂದೂ ವಿರೋಧಿʼ ಜಾಹೀರಾತು ಪ್ರಕಟಿಸಿ HDFC?! ನೆಟ್ಟಿಗರಿಂದ ಸಖತ್ ಕ್ಲಾಸ್!!!