Gruha Lakshmi scheme money: ದಸರಾ ಪ್ರಯುಕ್ತ ‘ಗೃಹಲಕ್ಷ್ಮೀ’ ಯರಿಗೆ ಭರ್ಜರಿ ಗಿಫ್ಟ್ ಘೋಷಿಸಿದ ಸರ್ಕಾರ- ಈ ಮಹಿಳೆಯರಿಗಂತೂ ಬಂಪರ್ ಲಾಟ್ರಿ

Karnataka news Navaratri gift for women deposit Gruha Lakshmi scheme money rs 4000 together

Gruha Lakshmi Scheme money : ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ(Gruha Lakshmi Scheme) ಆಗಸ್ಟ್‌ 30ರಂದು ಚಾಲನೆ ನೀಡಲಾಗಿದೆ. ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ರಾಜ್ಯದ ಒಂದು ಕೋಟಿಗೂ ಹೆಚ್ಚು ಮಹಿಳೆಯರಿಗೆ ಮಾಸಿಕ 2,000 ರೂಪಾಯಿಗಳ ಆರ್ಥಿಕ ನೆರವು ನೀಡುವ ಯೋಜನೆಯ ಮೊದಲ ಕಂತು ಜಮೆಯಾಗಿದೆ. ಇದೀಗ, ಮನೆಯ ಮಹಿಳಾ ಯಜಮಾನಿಯರು ಎರಡನೇ ಕಂತಿನ ಹಣ ಜಮೆ ಆಗುವ ನಿರೀಕ್ಷೆಯಲ್ಲಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಇನ್ನೂ 2 ತಿಂಗಳ ಹಣ ಬಂದಿಲ್ಲ ಎಂದು ಚಿಂತಿಸುತ್ತಿದ್ದ ಮಹಿಳಾಮಣಿಗಳಿಗೆ ಸಿಎಂ ಸಿದ್ದರಾಮಯ್ಯ ಸಿಹಿ ಸುದ್ದಿ ನೀಡಿದ್ದಾರೆ. ಗೃಹಲಕ್ಷ್ಮಿಯರಿಗೆ ‘ನವರಾತ್ರಿ’ ಹಬ್ಬಕ್ಕೆ ಈ ಮೂಲಕ ಭರ್ಜರಿ ಗಿಫ್ಟ್ ದೊರೆತಿದ್ದು, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ 4 ಸಾವಿರ ಹಣ( Gruha Lakshmi scheme money) ಒಟ್ಟಿಗೆ ಜಮೆ ಆಗಲಿದೆ.

“ಕುಟುಂಬ ನಿರ್ವಹಣೆಯ ಜವಾಬ್ದಾರಿ ನಿಭಾಯಿಸುವ ಮನೆಯ ಯಜಮಾನಿಯರು ನಿತ್ಯ ಎದುರಿಸುವ ಸವಾಲುಗಳಿಗೆ ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ ನಮ್ಮ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ ರೂ. 2,000 ಧನಸಹಾಯ ನೀಡಲಾಗುತ್ತಿದೆ. ಈಗಾಗಲೇ ರಾಜ್ಯದ 1.08 ಕೋಟಿ ಮಹಿಳೆಯರಿಗೆ ಎರಡು ತಿಂಗಳ ಹಣ ಜಮೆಯಾಗಿದೆ. ಸ್ತ್ರೀಶಕ್ತಿ ಆರಾಧನೆಯ ಈ ನವರಾತ್ರಿ ಹಬ್ಬದ ಶುಭ ಸಂದರ್ಭದಲ್ಲಿ ನಮ್ಮ ಸರ್ಕಾರವು ಸ್ತ್ರೀಸಬಲೀಕರಣ ಉತ್ತೇಜಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ” ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: DA Hike: ಕೊನೆಗೂ ಡಿಎ ಹೆಚ್ಚಳ ಘೋಷಿಸಿದ ಸರ್ಕಾರ- ಇನ್ನು ಸರ್ಕಾರಿ ನೌಕರರ ಕೈ ಸೇರಲಿದೆ ಈ ಭರ್ಜರಿ ಸಂಬಳ !!

Leave A Reply

Your email address will not be published.