Dasara Vacation: ದಸರಾ ರಜೆಯಲ್ಲಿ ಕಡಿತ ?! ಸಿಎಂ ಮೊರೆ ಹೋದ ಶಿಕ್ಷಕರು- ಬಳಿಕ ನಡೆದದ್ದೇನು?!

Dasara Vacation: ಈ ಬಾರಿ ಶಿಕ್ಷಣ ಇಲಾಖೆ ಘೋಷಿಸಿರುವ ದಸರಾ ರಜೆ (Dasara Vacation) ಅವಧಿ ಕಡಿತ ಮಾಡಲಾಗಿದೆ ಎಂದು ಹುಬ್ಬಳ್ಳಿ ಶಿಕ್ಷಕರು ಆರೋಪಿಸಿದ್ದು, ರಜೆ ವಿಸ್ತರಣೆ ಮಾಡಬೇಕೆಂದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.

ಅಕ್ಟೋಬರ್ 24ರಂದು ವಿಜಯದಶಮಿ ಹಬ್ಬವಾಗಿದ್ದು ಅದರ ಮರುದಿನ ಅಂದರೆ 25ರಂದು ಶಾಲೆ ಪ್ರಾರಂಭ ಮಾಡುವಂತೆ ಶಿಕ್ಷಣ ಇಲಾಖೆ ಆದೇಶವಿದೆ. ಈ ರೀತಿ ಮಾಡುವುದರಿಂದ ವಿದ್ಯಾರ್ಥಿಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ ಎಂದು ಶಿಕ್ಷಕರು ಕಾಳಜಿ ವ್ಯಕ್ತಪಡಿಸಿದ್ದಾರೆ.
ಒಂದು ದಿನದಲ್ಲಿ ಮಕ್ಕಳು ಹೇಗೆ ಶಾಲೆಗೆ ಬರೋಕೆ ಸಾಧ್ಯ ಅನ್ನೋ ಪ್ರಶ್ನೆ ಶಿಕ್ಷಕರರದ್ದಾಗಿದೆ.

ಇನ್ನು ಕೊರೋನಾ ಸಮಯದಲ್ಲಿ ರಜೆ ಕಡಿತ ಮಾಡಿತ್ತು. ಆದ್ರೆ ಅದನ್ನು ಇನ್ನೂ ಸರಿ ಮಾಡಿಲ್ಲ. ಮೊದಲು ದಸರಾ ರಜೆ ಒಂದು ತಿಂಗಳಿತ್ತು. ಇದೀಗ ಕೇವಲ 15 ದಿನಕ್ಕೆ ರಜೆಯನ್ನು ಕಡಿತ ಮಾಡಿದೆ. ದಸರಾ ಹಬ್ಬ ಮರುದಿನವೇ ಶಾಲೆ ಆರಂಭ ಮಾಡ್ತಿರೋದು ಮಕ್ಕಳಿಗೆ ಒತ್ತಡ ಆಗುತ್ತೆ. ಮಕ್ಕಳು ಹಬ್ಬಕ್ಕೆ ಹೋಗಿರ್ತಾರೆ. ಆ ಕಾರಣಕ್ಕೆ ದಸರಾ ರಜೆಯನ್ನು ವಿಸ್ತರಣೆ ಮಾಡಬೇಕೆಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಶಿಕ್ಷಕರು ಪತ್ರ ಬರೆದಿದ್ದಾರೆ.

24 ರಂದು ಹಬ್ಬ ಇದ್ರು,25 ಕ್ಕೆ ಶಾಲೆ ಆರಂಭವಾಗಿರೋ ಕಾರಣಕ್ಕೆ ಮಕ್ಕಳು ಒತ್ತಡದಲ್ಲಿರುತ್ತವೆ, ಹಬ್ಬ ಆಚರಣೆಯೂ ಆಗಲ್ಲ ಎಂದು ಶಿಕ್ಷಕರ ಸಂಘ ಜಗದೀಶ್ ಶೆಟ್ಟರ್ ಬಳಿ ಮನವಿ ಮಾಡಿಕೊಂಡರು. ಬೇರೆ ಇಲಾಖೆಯ ನೌಕರರಿಗೆ 30 ರಜೆ ಇದ್ರೆ , ಶಿಕ್ಷಕರಿಗೆ ಮಾತ್ರ ಹತ್ತು ಗಳಿಕೆ ರಜೆಯಷ್ಟೆ. ಇದ್ಯಾವ ನ್ಯಾಯ ಎಂದು ಶಿಕ್ಷಕರ ಸಂಘ ಆಕ್ರೋಶ ಹೊರಹಾಕಿದರು.

ಒಟ್ಟಾರೆ ಶಿಕ್ಷಕರಿಗೊಂದು ನ್ಯಾಯ ಬೇರೆ, ಇಲಾಖೆಯ ನೌಕರರಿಗೊಂದು ನ್ಯಾಯನಾ ಎಂದು ಶಿಕ್ಷಕರ ಸಂಘ ಅಸಮಾಧಾನ ಹೊರ ಹಾಕಿದೆ. ಸದ್ಯ ರಜೆಯನ್ನು ಈ ತಿಂಗಳು 31 ರ ವರೆಗೂ ವಿಸ್ತರಣೆ ಮಾಡಲು ಶಿಕ್ಷಕರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.

 

ಇದನ್ನು ಓದಿ: Watching Movies On Mobile While Driving:ವಾಹನ ಸವಾರರಿಗೆ ಬಂತು ಹೊಸ ಟಫ್ ರೂಲ್ಸ್- ಡ್ರೈವ್ ಮಾಡುವಾಗ ಈ ತಪ್ಪು ಮಾಡಿದ್ರೆ ಜೈಲು ಫಿಕ್ಸ್

Leave A Reply

Your email address will not be published.