Senior Citizens FD: ಎಫ್‌ಡಿ ಮೇಲೆ ಬಂಪರ್ ಬಡ್ಡಿದರ ಘೋಷಿಸಿದೆ ಈ ಬ್ಯಾಂಕ್- ಕ್ಯೂ ನಿಂತ ಜನ
Business news FD Schemes Offer High Interest Rate To Senior Citizens
Senior Citizens FD: ಇತ್ತೀಚೆಗೆ ಇತರ ಬ್ಯಾಂಕ್‌ಗಳಿಗಿಂತ ಸಣ್ಣ ಹಣಕಾಸು ಬ್ಯಾಂಕ್‌ಗಳು ಗ್ರಾಹಕರಿಗೆ ಹೆಚ್ಚು ಆಕರ್ಷಕ ಆದಾಯವನ್ನು ನೀಡುತ್ತಿದ್ದು, ಅಂತಹ ಒಂದು ಸಣ್ಣ ಹಣಕಾಸು ಬ್ಯಾಂಕ್ ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಆಗಿದೆ. ಈ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ ಶೇಕಡ 9.5 ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಹಿರಿಯ ನಾಗರಿಕರು ಯೂನಿಟಿ ಎಸ್‌ಎಫ್‌ಬಿಯಲ್ಲಿ ಭಾರೀ ಆದಾಯವನ್ನು ಗಳಿಸಬಹುದಾಗಿದೆ.
ಹೌದು, ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ 1001 ದಿನಗಳ ಅವಧಿಗೆ ಎಫ್‌ಡಿ(Senior Citizens FD) ಮೇಲೆ ಶೇಕಡ 9.5 ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಆದರೆ 701 ದಿನಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 9.45 ರಷ್ಟು ಬಡ್ಡಿದರ ನೀಡಲಾಗುತ್ತದೆ. ಅಲ್ಲದೆ, 6 ತಿಂಗಳು – 201 ದಿನಗಳು ಮತ್ತು 501 ದಿನಗಳಿಗಿಂತ ಹೆಚ್ಚಿನ ಅವಧಿಗಳಲ್ಲಿ ಶೇಕಡ 9.25 ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ.
ಇನ್ನು ಎಸ್‌ಎಫ್‌ಬಿ 1002 ದಿನಗಳಿಂದ 5 ವರ್ಷಗಳ ಅವಧಿಗೆ ಶೇಕಡ 8.15 ರಷ್ಟು ಬಡ್ಡಿದರವನ್ನು ನೀಡುತ್ತಿದೆ. 18 ತಿಂಗಳು- 700 ದಿನಗಳು ಮತ್ತು 702 ದಿನಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 7.90 ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ. ಹೆಚ್ಚುವರಿಯಾಗಿ, ಬ್ಯಾಂಕ್ 1 ವರ್ಷದಿಂದ 500 ದಿನಗಳಲ್ಲಿ ಮತ್ತು 502 ದಿನಗಳು – 18 ತಿಂಗಳುಗಳಲ್ಲಿ ಮೆಚ್ಯೂರ್ ಆಗುವ ಎಫ್‌ಡಿ ಮೇಲೆ ಶೇಕಡ 7.85 ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ.
5 ವರ್ಷದಿಂದ 10 ವರ್ಷಗಳ ಅವಧಿ ಎಫ್‌ಡಿ ಮೇಲೆ ಶೇಕಡ 7.50 ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. 202 – 364 ದಿನಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 7.25 ರಷ್ಟು ಬಡ್ಡಿದರ ನೀಡಲಾಗುತ್ತದೆ. 91 ದಿನಗಳಿಂದ 6 ತಿಂಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 6.25 ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. 1 – 90 ದಿನಗಳ ಎಫ್‌ಡಿ ಮೇಲೆ ಶೇಕಡ 6 ರಷ್ಟು ಬಡ್ಡಿದರವಾಗಿದೆ. 7 ದಿನಗಳಿಂದ 60 ದಿನಗಳವರೆಗೆ ಕಡಿಮೆ ಅವಧಿಗಳ ಎಫ್‌ಡಿ ಬಡ್ಡಿದರವು ಶೇಕಡ 4.50 ರಿಂದ ಶೇಕಡ 5.75 ವರೆಗೆ ಇದೆ.
ಸಾಮಾನ್ಯ ನಾಗರಿಕರಿಗೆ ಬಡ್ಡಿದರ ಇಂತಿವೆ :
ಸಾಮಾನ್ಯ ನಾಗರಿಕರಿಗೆ ಎಸ್‌ಎಫ್‌ಬಿ 1001 ದಿನಗಳ ಅವಧಿಗೆ ಶೇಕಡ 9 ರಷ್ಟು ಬಡ್ಡಿದರ ನೀಡುತ್ತದೆ. 701 ದಿನಗಳ ಎಫ್‌ಡಿ ಮೇಲೆ ಶೇಕಡ 8.95 ಬಡ್ಡಿದರ, 6 ತಿಂಗಳಿಂದ 201 ದಿನಗಳು ಮತ್ತು 501 ದಿನಗಳ ಅವಧಿ ಎಫ್‌ಡಿ ಮೇಲೆ ಶೇಕಡ 8.75 ಬಡ್ಡಿದರ ನೀಡಲಾಗುತ್ತದೆ. ಬಡ್ಡಿಯ ದರವು 1002 ದಿನಗಳಿಂದ 5 ವರ್ಷಗಳ ಅವಧಿಗೆ ಶೇಕಡ 7.65 ಆಗಿದೆ. 18 ತಿಂಗಳುಗಳ ಎಫ್‌ಡಿ ಬಡ್ಡಿದರ ಶೇಕಡ 7.40 ಆಗಿದೆ. 700 ದಿನಗಳು ಮತ್ತು 702 ದಿನಗಳು- 1000 ದಿನಗಳ ಎಫ್‌ಡಿಗೆ ಶೇಕಡ 7.40 ರಷ್ಟು ಬಡ್ಡಿದರ ನೀಡಲಾಗುತ್ತದೆ.
1 ವರ್ಷದಿಂದ 500 ದಿನಗಳ ಅವಧಿ ಎಫ್‌ಡಿ ಮೇಲೆ ಶೇಕಡ 7.35 ಬಡ್ಡಿದರವಾಗಿದೆ. 502 ದಿನಗಳು – 18 ತಿಂಗಳುಗಳ ಎಫ್‌ಡಿ ಮೇಲೆಯೂ ಇಷ್ಟೇ ಬಡ್ಡಿದರ ನೀಡಲಾಗುತ್ತದೆ. 5 ವರ್ಷಗಳಲ್ಲಿ – 10 ವರ್ಷಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 7 ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ.
ಇದನ್ನೂ ಓದಿ: ಧೂಳೆಬ್ಬಿಸುತ್ತಿವೆ ದಸರಾ ಆಫರ್ ಗಳು – ಹೊಸ ಹೊಸ ಕಾರುಗಳ ಮೇಲೆ ಬಂಪರ್ ಡಿಸ್ಕೌಂಟ್ ಘೋಷಣೆ !! ಮುಗಿಬಿದ್ದ ಜನತೆ