Petrol Diesel Price Update: ವಾಹನ ಸವಾರರೇ ನಿಮಗೊಂದು ಬಿಗ್ ಅಪ್ಡೇಟ್! ಇಂಧನ ಬೆಲೆ ಮಾಹಿತಿ ತಿಳಿಯೋ ರೀತಿ ಇಲ್ಲಿದೆ!!!

Petrol and Diesel Price Update 2023 latest news

Petrol Diesel Price Update: ಇಂಧನ ಶಕ್ತಿಗಳು ನವೀಕರಿಸಲಾಗದ ಶಕ್ತಿಯ ಸಂಪನ್ಮೂಲಗಳಾಗಿವೆ. ಶಕ್ತಿಗಳನ್ನು ಸಾಮಾನ್ಯವಾಗಿ ದ್ರವ ರೂಪದ ಬಂಗಾರ ಎಂದೇ ಕರೆಯಲಾಗುತ್ತದೆ.
ಮೂಲತಃ ಕಚ್ಚಾ ತೈಲದಿಂದ ದೊರಕುವ ಪೆಟ್ರೋಲ್ ಹಾಗೂ ಡೀಸೆಲ್ ಗಳಿಗೆ ಜಗತ್ತಿನಾದ್ಯಂತ ಅಪಾರ ಬೇಡಿಕೆಯಿದೆ.

ಮುಖ್ಯವಾಗಿ ಜಗತ್ತಿನ ಕೆಲವೇ ಕೆಲವು ರಾಷ್ಟ್ರಗಳು ಮಾತ್ರವೇ ಈ ಕಚ್ಚಾ ತೈಲ ಲಭ್ಯವಿರುವ ನಿಕ್ಷೇಪಗಳನ್ನು ಹೊಂದಿವೆ. ಅದರಲ್ಲೂ ಭಾರತ ಯಾವುದೇ ತೈಲದ ನಿಕ್ಷೇಪ ಹೊಂದಿಲ್ಲ. ಹಾಗಾಗಿ ಭಾರತವು ಕಚ್ಚಾತೈಲವನ್ನು ಇತರೆ ರಾಷ್ಟ್ರಗಳಿಂದ ಬೃಹತ್ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ. ನಂತರ ಆ ಕಚ್ಚಾ ತೈಲವನ್ನು ಇಲ್ಲಿನ ರಿಫೈನರಿಗಳಲ್ಲಿ ಸಂಸ್ಕರಿಸಿ ಅದರಿಂದ ಪೆಟ್ರೋಲ್, ಡೀಸೆಲ್ ಹಾಗೂ ಇತರೆ ತೈಲಗಳನ್ನು ಬೇರ್ಪಡಿಸಿ ಎಲ್ಲೆಡೆ ವಿತರಿಸಲಾಗುತ್ತದೆ. ಆದ್ದರಿಂದ ಈ ಇಂಧನ ಶಕ್ತಿಗಳ ಉಪಯೋಗವನ್ನು ಬಹಳ ಸೂಕ್ಷ್ಮವಾಗಿ ಬಳಸಬೇಕಾಗಿದೆ.

ಇನ್ನು ಪ್ರತಿ ದಿನದ ಇಂಧನ ದರಗಳು, ಹೊಸದಾಗಿರಲಿ ಅಥವಾ ಬದಲಾಗದೆ ಇರಲಿ, ಪ್ರತಿದಿನ ಬೆಳಗ್ಗೆ 6 ಗಂಟೆಗೆ ಘೋಷಿಸಲಾಗುತ್ತದೆ. ಅದಲ್ಲದೆ ಇಂಧನ ದರಗಳು ಮೌಲ್ಯವರ್ಧಿತ ತೆರಿಗೆ(ವ್ಯಾಟ್), ಸರಕು ಸಾಗಣೆ ಶುಲ್ಕಗಳು, ಸ್ಥಳೀಯ ತೆರಿಗೆಗಳು ಇತ್ಯಾದಿ ಅಂಶಗಳನ್ನು ಅವಲಂಬಿಸಿ ತೈಲ ಮಾರುಕಟ್ಟೆ ಕಂಪನಿಗಳ ನವೀಕರಣಗಳ ಪ್ರಕಾರ ರಾಜ್ಯದಿಂದ ರಾಜ್ಯಕ್ಕೆ ಬೆಲೆ ನಿಗದಿ ಮಾಡಲಾಗುತ್ತದೆ.

ಪ್ರತಿದಿನ ಪೆಟ್ರೋಲ್ ಡೀಸೆಲ್ ಬೆಲೆಯ ಅಪ್ಡೇಟ್ (Petrol Diesel Price Update)ತಿಳಿಯಲು ಈ ಕ್ರಮ ಅನುಸರಿಸಿ:
ಗ್ರಾಹಕರು ಎಸ್‌ಎಂಎಸ್ ಮೂಲಕ ಪೆಟ್ರೋಲ್ ಮತ್ತು ಡೀಸೆಲ್‌ನ ದೈನಂದಿನ ದರವನ್ನು ತಿಳಿದುಕೊಳ್ಳಬಹುದು.
> ಇಂಡಿಯನ್ ಆಯಿಲ್ ಗ್ರಾಹಕರು RSP ಮತ್ತು ಅವರ ಸಿಟಿ ಕೋಡ್ ಅನ್ನು 9224992249 ಗೆ ಕಳುಹಿಸುವ ಮೂಲಕ ಮಾಹಿತಿಯನ್ನು ಪಡೆಯಬಹುದು.

> HPCL ಗ್ರಾಹಕರು HPPrice ಮತ್ತು ಅವರ ಸಿಟಿ ಕೋಡ್ ಅನ್ನು 9222201122 ಗೆ ಕಳುಹಿಸುವ ಮೂಲಕ ಬೆಲೆಯನ್ನು ತಿಳಿಯಬಹುದು.

ಮತ್ತು BPCL ಗ್ರಾಹಕರು RSP ಮತ್ತು ಅವರ ಸಿಟಿ ಕೋಡ್ ಅನ್ನು ಟೈಪ್ ಮಾಡುವ ಮೂಲಕ 9223112222 ಗೆ SMS ಕಳುಹಿಸುವ ಮೂಲಕ ಮಾಹಿತಿಯನ್ನು ಪಡೆಯಬಹುದು.

 

ಇದನ್ನು ಓದಿ: KSRTC Special Tour Package For Mangalore Dasara: ದಸರಾ ಪ್ರಯುಕ್ತ ಮಂಗಳೂರಿಗರಿಗೆ ಭರ್ಜರಿ ನ್ಯೂಸ್- KSRTC ಕಡೆಯಿಂದ ಬಂತು ಬಂಪರ್ ಆಫರ್

Leave A Reply

Your email address will not be published.