DNA Test: ಮಗು ನನ್ನದಲ್ಲ ಎಂದು ತಂದೆಗೆ ಹೇಳಿತು 6th ಸೆನ್ಸ್ – DNA ರಿಪೋರ್ಟ್ ನೋಡಿ ಹೌಹಾರಿಹೋದ !!
father is shocked to see the DNA report that the child is not mine
DNA Test: ಪತಿ ಪತ್ನಿಯರ ಸಂಬಂಧದಲ್ಲಿ ಪ್ರೀತಿಗಿಂತ ಹೆಚ್ಚು ಸಂಶಯಕ್ಕೆ ಜಾಗ ನೀಡಿದರೆ ನಂತರ ನಡೆಯುವುದು ಅನಾಹುತವೇ ಸರಿ. ಹೌದು, ಇಲ್ಲೊಬ್ಬ ಸಂಶಯದ ಪತಿರಾಯನಿಂದ ದಾಂಪತ್ಯ ಮುರಿದು ಬಿದ್ದಿದೆ. ಮೂರು ಮಕ್ಕಳ ಸುಂದರ ಸಂಸಾರವನ್ನು ತಾನೇ ಹಾಳು ಮಾಡಿಕೊಂಡಿದ್ದಾನೆ.
ರೆಡ್ಡಿಟ್ ನಲ್ಲಿ ವ್ಯಕ್ತಿ ತನ್ನ ಕಥೆಯನ್ನು ಹೇಳಿಕೊಂಡಿದ್ದು, ಆತನಿಗೆ ಮೂವರು ಗಂಡು ಮಕ್ಕಳು. ಅದ್ರಲ್ಲಿ ಎರಡನೇ ಮಗನ ಮೇಲೆ ವ್ಯಕ್ತಿಗೆ ಅನುಮಾನವಿದ್ದು, ಕುಟುಂಬದ ಎಲ್ಲ ಸದಸ್ಯರಿಗಿಂತ ಎರಡನೇ ಮಗ (Son) ಸ್ವಲ್ಪ ಭಿನ್ನವಾಗಿದ್ದೇ ಇದಕ್ಕೆ ಕಾರಣವಾಗಿತ್ತು. ತನ್ನ ಪತ್ನಿ ತನಗೆ ಮೋಸ ಮಾಡಿದ್ದಾಳೆಂದು ಆತ ಮನಸ್ಸಿನಲ್ಲಿಯೇ ಇಟ್ಟುಕೊಂಡು, ಎರಡನೇ ಮಗನನ್ನು ಕೀಳಾಗಿ ನೋಡ್ತಿದ್ದ.
ಕೊನೆಗೆ ಕೆಲವು ಸಮಯದ ಬಳಿಕ ಆತನ ಸಂಶಯವನ್ನು ಕ್ಲಿಯರ್ ಮಾಡಲು ಅಂತಿಮ ನಿರ್ಧಾರ ತೆಗೆದುಕೊಂಡ. ಮನೆಗೆ ಡಿಎನ್ ಎ ಕಿಟ್ ತರಿಸಿ ಮಗನ ಡಿಎನ್ ಎ (DNA Test) ಪರೀಕ್ಷೆ ಮಾಡುವುದಾಗಿ ಪತ್ನಿಗೆ ಹೇಳಿದ್ದ. ಎರಡನೇ ಮಗು, ನಮ್ಮಂತೆ ಇಲ್ಲ. ಹಾಗಾಗಿ ನನಗೆ ಸಂಶಯವಿದ್ದು, ಆತನ ಡಿಎನ್ ಎ ಪರೀಕ್ಷೆ ಮಾಡುವುದಾಗಿ ಪತ್ನಿಗೆ ಹೇಳಿದ್ದಾನೆ.
ಈ ಮಾತನ್ನು ಕೇಳಿ ಪತ್ನಿ ದಂಗಾಗಿದ್ದಾಳೆ. ಡಿಎನ್ ಎ ಪರೀಕ್ಷೆ ಮಾಡುವ ಅಗತ್ಯವಿಲ್ಲವೆಂದು ಪತಿಗೆ ಹೇಳಿದ್ದಾಳೆ. ಆದ್ರೆ ಅದನ್ನು ನಿರ್ಲಕ್ಷ್ಯ ಮಾಡಿದ ಪತಿ, ಎರಡನೇ ಮಗನ ಡಿಎನ್ ಎ ಪರೀಕ್ಷಿಸಿದ್ದಾನೆ. ಕೊನೆಗೂ ಡಿಎನ್ ಎ ಪರೀಕ್ಷೆ (Test) ಫಲಿತಾಂಶ ಪತಿಗೆ ನೆಮ್ಮದಿ ನೀಡಿದೆ. ಯಾಕೆಂದ್ರೆ ಆತನ ಪತ್ನಿ ಯಾವುದೇ ದ್ರೋಹ ಮಾಡಿರಲಿಲ್ಲ. ಎರಡನೇ ಮಗ ಕೂಡ ಈತನದ್ದೇ ಆಗಿತ್ತು. ಇದ್ರಿಂದ ವ್ಯಕ್ತಿಯ ಸಂಶಯ ಬಗೆ ಹರಿಯಿತು ಎನ್ನುವಷ್ಟರಲ್ಲಿ ಪತ್ನಿ ಶಾಕ್ ನೀಡಿದ್ದಾಳೆ.
ಹೌದು, ಪತಿಗೆ ವಿಚ್ಛೇದನ ನೀಡಲು ಆಕೆ ಮುಂದಾಗಿದ್ದಾಳೆ. ಪತಿಯ ಈ ಪರೀಕ್ಷೆ ಆಕೆ ಮನಸ್ಸನ್ನು ಘಾಸಿಗೊಳಿಸಿದೆ. ತನ್ನ ಮೇಲೆ ವಿಶ್ವಾಸವಿಲ್ಲದ ವ್ಯಕ್ತಿ ಜೊತೆ ಜೀವನ ನಡೆಸಲು ಇಷ್ಟವಿಲ್ಲ ಎಂದ ಪತ್ನಿ, ಮಕ್ಕಳ ಜೊತೆ ತವರು ಸೇರಿದ್ದಾಳೆ. ಮಕ್ಕಳು ಕೂಡ ಅಪ್ಪನ ಅನುಮಾನದಿಂದ ಕೋಪಗೊಂಡಿದ್ದಾರೆ.
ಇದೀಗ ಪತ್ನಿಯನ್ನು ಅನುಮಾನಿಸಿದ್ದ ಪತಿಗೆ ಈಗ ತಾನು ಮಾಡಿದ ತಪ್ಪಿನ ಅರಿವಾಗಿದೆ. ನಾನು ನನ್ನ ಹೆಂಡತಿಗೆ ಎಂದಿಗೂ ಮೋಸ ಮಾಡಿಲ್ಲ. ಅವರು ನನಗೆ ಎಂದಿಗೂ ಮೋಸ ಮಾಡಿಲ್ಲ. ಆದ್ರೆ ನಾನು ಮಾಡಿದ ಈ ದೊಡ್ಡ ತಪ್ಪು ನನಗೆ ಈಗ ತೊಂದರೆ ತಂದಿದೆ ಎಂದು ವ್ಯಕ್ತಿ ಬರೆದಿದ್ದಾನೆ. ಎರಡನೇ ಮಗ ನನ್ನ ಜೊತೆ ಮಾತುಬಿಟ್ಟಿದ್ದಾನೆ. ಪತ್ನಿ ವಿಚ್ಛೇದನ ಕೇಳ್ತಿದ್ದಾಳೆ ಏನು ಮಾಡ್ಲಿ ಎಂದು ಪ್ರಶ್ನೆ ಮಾಡಿದ್ದಾನೆ. ಸದ್ಯ ರೆಡ್ಡಿಟ್ ನಲ್ಲಿ ಅನೇಕರು ಈತನ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನು ಓದಿ: