Home Education Dress Code for Exam: ಸರ್ಕಾರಿ ಇಲಾಖೆಗಳಲ್ಲಿ ಗ್ರೂಪ್ ಬಿ ಮತ್ತು ಸಿ ಹುದ್ದೆಗಳ ನೇಮಕಾತಿಗಾಗಿ...

Dress Code for Exam: ಸರ್ಕಾರಿ ಇಲಾಖೆಗಳಲ್ಲಿ ಗ್ರೂಪ್ ಬಿ ಮತ್ತು ಸಿ ಹುದ್ದೆಗಳ ನೇಮಕಾತಿಗಾಗಿ ಡ್ರೆಸ್‌ ಕೋಡ್‌ ಬಿಡುಗಡೆ!

Dress Code for Exam

Hindu neighbor gifts plot of land

Hindu neighbour gifts land to Muslim journalist

Dress Code for Exam: UP PET 2023 ಪರೀಕ್ಷೆಯ ನೋಂದಣಿ ಪ್ರಕ್ರಿಯೆಯು ಆಗಸ್ಟ್ 1, 2023 ರಂದು ಪ್ರಾರಂಭವಾಗಿದ್ದು, ಇದಕ್ಕಾಗಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಆಗಸ್ಟ್ 30, 2023 ರವರೆಗೆ ಕಾಲಾವಕಾಶ ನೀಡಲಾಗಿತ್ತು. ಈ ಪರೀಕ್ಷೆಯು ಯುಪಿಯ( UP PET 2023)ವಿವಿಧ ಜಿಲ್ಲೆಗಳಲ್ಲಿ 28 ಮತ್ತು 29 ಅಕ್ಟೋಬರ್ 2023 ರಂದು ನಡೆಯಲಿದೆ. ಪರೀಕ್ಷೆಯ ಡ್ರೆಸ್ ಕೋಡ್‌ನ ವಿವರಗಳನ್ನು ಇಲ್ಲಿದೆ. ಯುಪಿ ಪಿಇಟಿ ಪರೀಕ್ಷೆಯ ಪ್ರವೇಶ ಪತ್ರವನ್ನು ಯುಪಿ ಸಿಬ್ಬಂದಿ ಆಯ್ಕೆ ಆಯೋಗ (ಯುಪಿಎಸ್ಎಸ್‌ಸಿ) ಬಿಡುಗಡೆ ಮಾಡಲಿದೆ. ಪರೀಕ್ಷೆಯ ಪ್ರವೇಶ ಪತ್ರವನ್ನು ಆಯೋಗವು ಅಧಿಕೃತ ವೆಬ್‌ಸೈಟ್ – upsssc.gov.in ನಲ್ಲಿ ಬಿಡುಗಡೆ ಮಾಡುತ್ತದೆ. ಪ್ರವೇಶ ಕಾರ್ಡ್ ಬಿಡುಗಡೆಯಾದ ನಂತರ, ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆಯೊಂದಿಗೆ ಲಾಗ್ ಇನ್ ಮಾಡುವ ಮೂಲಕ ಅದನ್ನು ಡೌನ್‌ಲೋಡ್ ಮಾಡಬಹುದು.

ಉತ್ತರ ಪ್ರದೇಶದ ಸರ್ಕಾರಿ ಇಲಾಖೆಗಳಲ್ಲಿ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ನೇಮಕಾತಿಗಾಗಿ ಯುಪಿ ಪಿಇಟಿ ಪರೀಕ್ಷೆಯನ್ನು ಕೆಲವೇ ದಿನಗಳಲ್ಲಿ ನಡೆಸಲಾಗುವುದು. ಈ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್- upsssc.gov.in ಗೆ ಭೇಟಿ ನೀಡುವ ಮೂಲಕ ಪರೀಕ್ಷೆಯ ವಿವರಗಳನ್ನು ಪರಿಶೀಲಿಸಬಹುದು. ಈ ಪರೀಕ್ಷೆಗೆ ಹಾಜರಾಗುವ ಮೊದಲು, ಪರೀಕ್ಷಾ ಕೇಂದ್ರದ ಮಾರ್ಗಸೂಚಿಗಳನ್ನು ಈ ಕೆಳಗೆ ನೀಡಲಾಗಿದೆ.

ಡ್ರೆಸ್ ಕೋಡ್ (Dress Code for Exam) ಮತ್ತು ಪರೀಕ್ಷಾ ಕೇಂದ್ರದಲ್ಲಿ ಅನುಸರಿಸಬೇಕಾದ, ಪರೀಕ್ಷಾ ಕೇಂದ್ರದ ಮಾರ್ಗಸೂಚಿಗಳನ್ನು ಕೆಳಗೆ ನೀಡಲಾಗಿದೆ.
ಪರೀಕ್ಷಾ ಕೇಂದ್ರಕ್ಕೆ ಹೋಗುವ ಮೊದಲು, ಪ್ರವೇಶ ಪತ್ರದ ಹಾರ್ಡ್ ಪ್ರತಿ ಇದೆಯೇ ಎಂದು ಖಚಿತ ಪಡಿಸಿಕೊಳ್ಳಿ. ಇದರ ಜೊತೆ 2,4 ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ ಅದು ಇತ್ತೀಚಿನದ್ದಾಗಿರಬೇಕು. ಅದನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.
ಹಿಂದಿನ ಸೂಚನೆಯಂತೆ ಪರೀಕ್ಷಾ ಕೇಂದ್ರದೊಳಗೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಷೇಧಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಮೊಬೈಲ್ ಫೋನ್‌ಗಳು, ಸ್ಮಾರ್ಟ್ ವಾಚ್‌ಗಳು, ಹೆಡ್‌ಫೋನ್‌ಗಳು, ಇಯರ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳನ್ನು ಪರೀಕ್ಷಾ ಹಾಲ್‌ನ ಹೊರಗೆ ಬಿಡಬೇಕಾಗುತ್ತದೆ.
ಮಹಿಳೆಯರು ಮುಖ ಮುಚ್ಚಿಕೊಳ್ಳುವಂತಹ ಬಟ್ಟೆ ಧರಿಸಿ ಬರಬಾರದು. ಹಾಫ್ ಸ್ಲೀವ್ ಡ್ರೆಸ್ ಧರಿಸಬೇಕು.ಅಲ್ಲದೆ, ನೀವು ಯಾವುದೇ ರೀತಿಯ ಆಭರಣಗಳನ್ನು ಧರಿಸಿ ಬಂದರೆ ನಿಮಗೆ ಪ್ರವೇಶವನ್ನು ಅನುಮತಿಸಲಾಗುವುದಿಲ್ಲ. ಹುಡುಗಿಯರು ಕೂದಲನ್ನು ಸರಳವಾದ ರಬ್ಬರ್ ಬ್ಯಾಂಡ್ನೊಂದಿಗೆ ಕಟ್ಟಬೇಕು.

 

ಇದನ್ನು ಓದಿ: Snake Found In Autorickshaw: ಹೆಡೆ ಬಿಚ್ಚಿಕೊಂಡೇ ಆಟೋ ಹಿಂದೆ ಸಾಗಿದ ನಾಗರಹಾವು – ವೈರಲ್ ಆಯ್ತು ಭಯಾನಕ ವಿಡಿಯೋ