Shiva Rajkumar: ಕಬ್ಜ ಡೈರೆಕ್ಟರ್ ವಿರುದ್ಧ ಹ್ಯಾಟ್ರಿಕ್ ಶಿವಣ್ಣ ಮುನಿಸು!! ಇದೇನಾ ಅಸಲಿ ಕಾರಣ?

Kannada news filmy news Sivarajkumar is upset with the director

Shiva Rajkumar: ಶಿವರಾಜ್ ಕುಮಾರ್ ಅವರಿಗೆ ಮೈಲಾರಿ ಡೈರೆಕ್ಟರ್ ಆರ್ ಚಂದ್ರು ಮೇಲೆ ಬೇಸರಿ ಮೂಡಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಆದ್ರೆ ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ (Shiva Rajkumar) ತುಂಬಾ ತಾಳ್ಮೆ ಉಳ್ಳವರು. ಒಂದು ವೇಳೆ ಸಿಟ್ಟು ಬಂದ್ರೂ ಕೂಡ ಅದನ್ನ ಬೇಗನೆ ಹೊರಗೆ ಹಾಕಿ ಬಿಡ್ತಾರೆ. ಮುಜುಗರ ಇಲ್ದೆ ಮುಖದ ಮೇಲೇನೆ ಹೇಳಿ ಬಿಡ್ತಾರೆ. ಆ ಸಿಟ್ಟು ಒಂದು ಕ್ಷಣ ಮಾತ್ರ ಆಗಿರುತ್ತೆ. ಮರುಕ್ಷಣವೆ ಅಷ್ಟೆ ಪ್ರೀತಿಯಿಂದಲೂ ಮಾತನಾಡಿಸುತ್ತಾರೆ.

ವಿಶೇಷ ಅಂದ್ರೆ ಡೈರೆಕ್ಟ್ ಆರ್.ಚಂದ್ರು (R Chandru) ವಿಚಾರದಲ್ಲಿ ಶಿವಣ್ಣ ತುಂಬಾನೇ ಬೇಸರ ಮಾಡಿಕೊಂಡಿದ್ದಾರೆ. ಘೋಸ್ಟ್ (Ghost) ಸಿನಿಮಾ ತೆಗೆದುಕೊಂಡು ಮುಂಬೈಗೆ ಹೋದಾಗಲೇ ಚಂದ್ರು ಬಗೆಗಿನ ಅಭಿಪ್ರಾಯ ಬದಲಾಗಿದೆ. ಅದನ್ನ ಓಪನ್ ಆಗಿಯೇ ಶಿವಣ್ಣ ಹೇಳಿಕೊಂಡಿದ್ದಾರೆ.

ಹೌದು, ಶಿವರಾಜ್ ಕುಮಾರ್ ಅವರಿಗೆ ಮೈಲಾರಿ ಡೈರೆಕ್ಟರ್ ಆರ್ ಚಂದ್ರು ಮೇಲೆ ಬೇಸರಿ ಮೂಡಿದೆ. ಅದಕ್ಕೆ ಕಾರಣ ಕಬ್ಜ ಚಿತ್ರದಲ್ಲಿ ಶಿವಣ್ಣನ ಪಾತ್ರವನ್ನ ತುಂಬಾನೆ ಹೈಲೈಟ್ ಮಾಡಿರೋದೇ ಆಗಿದೆ. ಸಿನಿಮಾದ ಕೊನೆಯಲ್ಲಿ ಶಿವಣ್ಣನ ದೃಶ್ಯ ಬರುತ್ತದೆ. ಅಲ್ಲಿಂದಲೇ ಕಬ್ಜ-2 ಸಿನಿಮಾ ಲೀಡ್ ಕೂಡ ಕೊಡಲಾಗಿದೆ.

ಆದರೆ ಕಬ್ಜ ರಿಲೀಸ್ ಟೈಮ್‌ನಲ್ಲಿ ಶಿವಣ್ಣನ ಪಾತ್ರವನ್ನ ತುಂಬಾನೆ ಹೈಲೈಟ್ ಮಾಡಿದ್ರು. ಅದರಿಂದ ಜನರ ನಿರೀಕ್ಷೆ ಕೂಡ ಜಾಸ್ತಿನೇ ಇತ್ತು. ಅದರ ಅನುಭವ ಚೆನ್ನೈನಲ್ಲಿದ್ದಾಗಲೇ ಶಿವಣ್ಣನಿಗೆ ಆಗಿದೆ. ಕಬ್ಜ ಮಾರ್ಚ್-17 ರಂದು ರಿಲೀಸ್ ಆಯಿತು. ಆ ದಿನ ಪವರ್ ಸ್ಟಾರ್ ಪುನೀತ್ ಜನ್ಮ ದಿನ ಕೂಡ ಇತ್ತು. ಇದೇ ದಿನ ಕಬ್ಜ ಸಿನಿಮಾ ನೋಡಿದ ಜನ ಶಿವಣ್ಣನ ಪಾತ್ರದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಆ ನಿರೀಕ್ಷೆ ಸುಳ್ಳಾಗಿತ್ತು. ಅದನ್ನ ಸ್ವತಃ ಶಿವಣ್ಣನಿಗೂ ಅಭಿಮಾನಿಗಳು ಹೇಳಿದ್ರು. ಇದರಿಂದ ತುಂಬಾನೇ ಬೇಸರದಲ್ಲಿದ್ದ ಶಿವಣ್ಣ ಮೊನ್ನೆ ಘೋಸ್ಟ್ ಸಿನಿಮಾ ಪ್ರಚಾರದ ಸಮಯದಲ್ಲಿ ಈ ಒಂದು ವಿಚಾರವನ್ನ ಹೇಳಿಕೊಂಡಿದ್ದರು.

ಆರ್ ಚಂದ್ರು ಅವ್ರು ಗೆಸ್ಟ್ ರೋಲ್‌ ಅನ್ನ ದೊಡ್ಡಮಟ್ಟದಲ್ಲಿಯೇ ಪ್ರಚಾರ ಮಾಡಿದ್ದಾರೆ. ಆದರೆ ಗೆಸ್ಟ್ ರೋಲ್ ಎಷ್ಟು ಪ್ರಮೋಟ್ ಮಾಡ್ಬೇಕೋ ಅಷ್ಟೇ ಮಾಡ್ಬೇಕು. ಜಾಸ್ತಿ ಮಾಡಿ ಜನರನ್ನ ದಾರಿ ತಪ್ಪಿಸೋದಲ್ವೇ ಅಲ್ಲ ಅಂತಲೇ ಹೇಳಿದ್ದಾರೆ. ಅಂತೆಯೇ ಜೈಲರ್ ಚಿತ್ರದಲ್ಲಿ ಗೆಸ್ಟ್ ರೋಲ್ ಇತ್ತು. ಆದರೆ ಇಲ್ಲಿ ಮಿತಿ ಮೀರಿದ ಹೈಪ್ ಇರಲಿಲ್ಲ. ಆದರೂ ಜನ ಇದನ್ನ ಮೆಚ್ಚಿಕೊಂಡ್ರು. ಈಗಲೂ ಇಷ್ಟಪಡ್ತಾರೆ. ಹಾಗಾಗಿಯೇ ಸಿನಿಮಾ ಗೆಸ್ಟ್ ರೋಲ್‌ಗಳನ್ನ ಎಷ್ಟು ಬೇಕೋ ಅಷ್ಟೇ ಪ್ರಚಾರ ಮಾಡ್ಬೇಕು ಎಂದಿದ್ದಾರೆ.

 

ಇದನ್ನು ಓದಿ: First Night: ಮದುವೆ ಮುಗಿಸಿ ಫಸ್ಟ್ ನೈಟ್’ಗೆಂದು ರೂಮಿಗೆ ಹೋದ ನವ ಜೋಡಿ – ಹೆಂಡತಿ ತಲೆಯಿಂದ ಹೂ ಜಾರುತ್ತಲೇ ಗಂಡನಿಗೆ ಕಾದಿತ್ತು ಊಹಿಸದ ಶಾಕ್ !!

Leave A Reply

Your email address will not be published.