Google Search: ಜನಸಾಮಾನ್ಯರೇ ಹುಷಾರ್ !! ಗೂಗಲ್’ನಲ್ಲಿ ಈ 5 ಪದಗಳನ್ನು ‘ಸರ್ಚ್’ ಕೊಟ್ರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ‘ಜಿರೋ’ ಆಗೋದು ಪಕ್ಕಾ!!
If you search these 5 words in Google Search will cause to Bank balance empty
Google Search: ಇಂದು ಮೊಬೈಲ್ (Mobile)ಎಂಬ ಮಾಯಾವಿ ಮೂಲಕ ಕ್ಷಣಮಾತ್ರದಲ್ಲಿಯೇ ಬೆರಳ ತುದಿಯಲ್ಲಿ ಎಲ್ಲ ಕೆಲಸ ಮಾಡಲು ಅನುವು ಮಾಡಿಕೊಟ್ಟಿದೆ. ಮೊಬೈಲ್ನಿಂದ ಎಷ್ಟು ಪ್ರಯೋಜನ ಪಡೆಯಬಹುದೋ ಅಷ್ಟೆ ತೊಂದರೆ ಕೂಡ ಇದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಯಾವುದೇ ಮಾಹಿತಿ ಬೇಕಿದ್ದರೂ ಕೂಡ ಹೆಚ್ಚಿನ ಮಂದಿ ಮೊರೆ ಹೋಗುವುದು ಗೂಗಲ್ ಸರ್ಚ್ (Google Search)ಎಂದರೆ ತಪ್ಪಾಗದು. ಆದರೆ, ನೀವೇನಾದರೂ ಈ ವಿಚಾರ ತಿಳಿಯದೇ ಹೋದರೆ ನಿಮ್ಮ ಬ್ಯಾಂಕ್ ಖಾತೆಯ ಹಣ ಖಾಲಿ ಆಗೋದು ಗ್ಯಾರಂಟಿ!!
* ಹಣಕಾಸಿನ ಕುರಿತ ಸಲಹೆಯನ್ನು ಸರ್ಚ್ ಮಾಡಬೇಡಿ
ಗೂಗಲ್ ಸರ್ಚ್‌ನಲ್ಲಿ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಟಿಪ್ಸ್ ಪಡೆಯುವ ಬಗ್ಗೆ ಮಾಹಿತಿ ಹುಡುಕುವುದು ನಿಮ್ಮನ್ನು ಅಪಾಯಕ್ಕೆ ತಳ್ಳುವ ಸಾಧ್ಯತೆ ಹೆಚ್ಚಿದೆ. ಆನ್‌ಲೈನ್ ವಂಚಕರು ಹಣಕಾಸಿನ ಹೂಡಿಕೆಯ ಬಗ್ಗೆ ಟಿಪ್ಸ್ ಸರ್ಚ್ ಮಾಡುವ ಗ್ರಾಹಕರನ್ನು ಟಾರ್ಗೆಟ್ ಮಾಡಿ ವಂಚಿಸುವ ಸಾಧ್ಯತೆ ಹೆಚ್ಚಿದೆ.
* ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡಬೇಡಿ
ಆನ್ಲೈನ್ ಪ್ಲಾಟ್ಫಾರ್ಮ್ ಮತ್ತು ಅಮೆಜಾನ್, ಆಪಲ್, ಮೈಕ್ರೋಸಾಫ್ಟ್, ಮೆಟಾ ಇನ್ನಿತರ ಕಂಪನಿಗಳ ಕಸ್ಟಮರ್ ಕೇರ್ ಸಂಖ್ಯೆ ನೀವು ಹುಡುಕುತ್ತಿದ್ದರೆ ವಂಚನೆಗೆ ಒಳಗಾಗುವ ಸಾಧ್ಯತೆ ಇದೆ. ನೀವು ನಕಲಿ ಕಸ್ಟಮರ್ ಕೇರ್ ನಂಬರ್‌ಗಳಿಗೆ ಕರೆ ಮಾಡಿ ವಂಚನೆಗೆ ಒಳಗಾಗಬಹುದು. ಹೀಗಾಗಿ ಗೂಗಲ್ ಸರ್ಚ್‌ನಲ್ಲಿ ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡಬೇಡಿ.ವ್ಯವಹಾರಗಳು ಮತ್ತು ಕಂಪನಿಗಳನ್ನು ಸಂಪರ್ಕಿಸಲು, ಅವರ ಅಧಿಕೃತ ವೆಬ್ಬೆಟ್ಗಳು ಮತ್ತು ಅಪ್ಲಿಕೇಶನ್ಗಳಿಗೆ ಭೇಟಿ ನೀಡಿ.
* ಫ್ರೀ ಪೀಪಲ್ ಫೈಂಡರ್
ಉತ್ತಮಸಂಗಾತಿ, ಹಳೆಯ ಸ್ನೇಹಿತರನ್ನು, ಪ್ರೇಮಿಯನ್ನು ಹುಡುಕಿ ಕೊಡುವ ಕೆಲ ನಕಲಿ ವೆಬ್ ಸೈಟ್ಗಳು ನಿಮ್ಮ ವೈಯುಕ್ತಿಕ ಮಾಹಿತಿ ಬಳಸಿ ದುರ್ಬಳಕೆ ಮಾಡುವ ಸಾಧ್ಯತೆ ಹೆಚ್ಚಿದೆ.ಹೀಗಾಗಿ, ಫ್ರೀ ಪೀಪಲ್ ಫೈಂಡರ್ ಎಂಬೆಲ್ಲ ನಕಲಿ ವೆಬ್ ಸೈಟ್ ಹುಡುಕಾಟ ವನ್ನು ನಿಲ್ಲಿಸಿ.
* ಉಚಿತ ಕ್ರೆಡಿಟ್ ಸ್ಕೋರ್ / ವರದಿ
ನಿಮ್ಮ ಕ್ರೆಡಿಟ್ ರಿಪೋರ್ಟ್ ಮತ್ತು ಕ್ರೆಡಿಟ್ ಸ್ಕೋರ್ ನಿಮ್ಮ ಆರ್ಥಿಕ ಸ್ಥಿತಿಯ ಪ್ರಮುಖ ಅಂಶಗಳಾಗಿವೆ. ಸೈಬರ್ ಕ್ರೂಕ್ ಗಳು ಆಗಾಗ ಈ ಹುಡುಕಾಟ ನಡೆಸುವವರ ಖಾತೆಗೆ ಕನ್ನ ಹಾಕಲು ನಕಲಿ ಸೈಟ್ ಗಳ ಮೂಲಕ ವಂಚಿಸುವ ಅಪಾಯ ಹೆಚ್ಚಿದೆ.
* ಕ್ರಿಸ್ಟೋ ವ್ಯಾಲೆಟ್
ಹನ್ ವಿನಿಮಯ ಕೇಂದ್ರದಲ್ಲಿ ನೀವು ಕ್ರಿಸ್ಟೋಕರೆನ್ಸಿಯನ್ನು ಖರೀದಿ ಮಾಡಿದಾಗ ಕಸ್ಟಡಿ ವ್ಯಾಲೆಟ್ ಅನ್ನು ರಚಿಸಲಾಗುತ್ತದೆ. ನಿಮ್ಮ ಕರೆನ್ಸಿಯನ್ನು ಬದಲಿಸಿ ಹಣ ಪಡೆಯಲು ಇಲ್ಲವೇ ವಸ್ತುಗಳನ್ನು ಖರೀದಿಸಲು, ನೀವು ಸ್ವಯಂ-ಕಸ್ಟಡಿ ವ್ಯಾಲೆಟ್ ಬಳಸಬೇಕು. ಇದರಿಂದ ನಿಮ್ಮ ಖಾತೆ ಕನ್ನ ಆಗುವ ಸಾಧ್ಯತೆ ಹೆಚ್ಚಿದೆ.
ಇದನ್ನು ಓದಿ: Shiva Rajkumar: ಕಬ್ಜ ಡೈರೆಕ್ಟರ್ ವಿರುದ್ಧ ಹ್ಯಾಟ್ರಿಕ್ ಶಿವಣ್ಣ ಮುನಿಸು!! ಇದೇನಾ ಅಸಲಿ ಕಾರಣ?