Crime News: ಇವಳೇನೂ ಹೆಂಡತಿಯೋ, ರಾಕ್ಷಸಿಯೋ ?! ದಿಂಬಿನಿಂದ ಉಸಿರುಗಟ್ಟಿಸಿ, ಹಾವಿನಿಂದ ಕಚ್ಚಿಸಿ… ಯಪ್ಪಾ ಗಂಡನಿಗೆ ಕೊಟ್ಟ ಹಿಂಸೆ ಒಂದೋ ಎರಡೋ ?! ಕೊನೆಗೂ ಈ ನೀಚೆ ಮಾಡಿದ್ದೇನು ?!

Crime news Peddapalli district wife killed her husband brutally latest news

Peddapalli: ಪೆದ್ದಪಲ್ಲಿ (Peddapalli)ಜಿಲ್ಲೆಯ ಗೋದಾವರಿ ತಟದಲ್ಲಿ ಹೆಂಡತಿಯೊಬ್ಬಳು ತನ್ನ ಗಂಡನನ್ನು ಸ್ಕೆಚ್ ಮಾಡಿ ಹತ್ಯೆ ಮಾಡಿಸಿ ಹೃದಯಾಘಾತ(Heart attack)ಎಂದು ಬಿಂಬಿಸಿದ ಘಟನೆ ವರದಿಯಾಗಿದೆ. ಗಂಡನನ್ನು ಸಾಯಿಸಲು ಸುಫಾರಿ ಕೊಟ್ಟ ಮಹಿಳೆ ಮುಖ-ತಲೆಗೆ ದಿಂಬು ಹಿಡಿದಿಟ್ಟು ಉಸಿರುಗಟ್ಟಿಸಿ ಮತ್ತೆಯೂ ಗಂಡ ಎಲ್ಲಾದರೂ ಬದುಕಿದ್ದರೆ ಎಂಬ ಶಂಕೆಯಿಂದ ಹಾವಿನಿಂದ(Snake)ಕಚ್ಚಿಸಿ ಸಾಯಿಸಿದ್ದಾಳೆ.

ಪತ್ರಕರ್ತನಾಗಿ ವೃತ್ತಿ ಆರಂಭಿಸಿದ ಪ್ರವೀಣ್ ಎಂಬಾತ ನಂತರ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಮಧ್ಯೆ ಬಿಲ್ಡರ್ ಆಗಲು ಮುಂದಾದರು. ಈ ನಡುವೆ, ಪ್ರವೀಣ್‌ ಮದುವೆಯಾಗಿದ್ದರು(Marraige)ಕೂಡ ಬೇರೆ ಮಹಿಳೆಯ ಸಂಗಕ್ಕೆ ಬಿದ್ದು, ವಿವಾಹೇತರ ಸಂಬಂಧ ಹೊಂದಿದ್ದನಂತೆ. ಇದು ಪ್ರವೀಣನ ಹೆಂಡತಿಗೆ ತಿಳಿದು ದಿನಾ ಮಾರಾಮಾರಿ ನಡೆಯುತ್ತಿತ್ತು. ಹೀಗಾಗಿ, ಪ್ರವೀಣ್ ಕುಡಿತದ ಚಟ ಬೆಳೆಸಿಕೊಂಡಿದ್ದ.

ಈ ನಡುವೆ ಈತನ ಪತ್ನಿ ಲಲಿತಾ ಸುರೇಶ್ ಎಂಬುವವನ ಮೊರೆ ಹೋಗಿ ಇಬ್ಬರೂ ಸೇರಿ ಪ್ರವೀಣನನ್ನು ಕೊಲೆ ಮಾಡಲು ತೀರ್ಮಾನ ಮಾಡಿದ್ದಾರೆ. ಲಲಿತಾ, ತನ್ನ ಒಡೆತನದಲ್ಲಿರುವ ಫ್ಲ್ಯಾಟ್ ಒಂದನ್ನು ನಿಡುವುದಾಗಿ ಸುರೇಶನಿಗೆ ಸುಪಾರಿ ನೀಡಿ ಕೊಲೆ ಮಾಡಲು ಮನವಿ ಮಾಡಿದ್ದಾಳೆ. ಪ್ರವೀಣ್ ಕೊಲೆಯನ್ನು ಸಹಜ ಸಾವು ಎಂದು ಬಿಂಬಿಸುವ ನಿಟ್ಟಿನಲ್ಲಿ ಉಸಿರಾಡದಂತೆ ಮಾಡಿ ಕೊಲ್ಲಲು ತೀರ್ಮಾನ ಮಾಡಿ, ಒಂದು ವೇಳೆ ಪ್ರವೀಣ ಪ್ರತಿರೋಧ ತೋರಿದರೆ ಹಾವಿನಿಂದ ಕಚ್ಚಿಸಿ, ಕೊಲೆ ಮಾಡುವ ಯೋಜನೆ ಹಾಕಿ ಅದೇ ರೀತಿ ಪ್ಲಾನಿನಂತೆ ಕೊಲೆ ಮಾಡಲಾಗಿದೆ. ಲಲಿತ ಈ ಕೊಲೆ ಮಾಡಿಸಲು ತನ್ನ ಮೈಮೇಲಿದ್ದ 34 ಗ್ರಾಂ ಚಿನ್ನದ ಸರವನ್ನು ಕೂಡ ನೀಡಿದ್ದಾಳೆ.

ಈ ಕೊಲೆಗೆ ರಾಮಗುಂಡಂನ ಇಂದಾರಪು ಸತೀಶ್, ಮಂದಮರಿಗೆ ಸೇರಿದ ಮಾಸ್ ಶ್ರೀನಿವಾಸ್, ಭೀಮಾ ಗಣೇಶ್ ಸೇರಿ ಪ್ರವೀಣನ ಹತ್ಯೆಗೆ ಸುರೇಶ ಸಂಚು ರೂಪಿಸಿದ. ಹಾವಿನಿಂದ ಕಚ್ಚಿಸುವ ಯೋಜನೆಗೆ ಖಾಸಗಿ ಸೆಕ್ಯುರಿಟಿ ಗಾರ್ಡ್ ಮಂದಮರಿಗೆ ಸೇರಿದ ನನ್ನಾಪುರಾಜು ಚಂದ್ರಶೇಖರ್ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದನ್ನೆಲ್ಲ ಸರಿದೂಗಿಸಲು ಲಲಿತ .

ಈ ಯೋಜನೆಯ ರೀತಿಯಲ್ಲಿ ರಾಮಗುಂಡಂನಲ್ಲಿ ಆ ರಾತ್ರಿ ಪ್ರವೀಣ ಮದ್ಯ ಸೇವಿಸಿ, ನಿದ್ರೆ ಮಾಡಿದ್ದಾನೆ.ಈ ಸಂದರ್ಭ ಲಲಿತಾ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಪ್ರವೀಣ ಮದ್ಯ ಸೇವಿಸಿ ಮಲಗಿದ್ದಾಗ ಸುರೇಶ ಮತ್ತು ಅವನ ತಂಡ ಕೊಲೆ ಮಾಡಿದ್ದು, ಪ್ರವೀಣ ಸತ್ತಿದ್ದಾನೋ, ಇಲ್ಲವೋ ಎಂಬ ಅನುಮಾನದಿಂದ ಸುರೇಶ ಹಾವನ್ನು ಬಿಟ್ಟು ಕಚ್ಚಿಸಿದ್ದಾನೆ. ಮತ್ತೊಂದೆಡೆ , ಪ್ರವೀಣ್‌ಗೆ ಹೃದಯಾಘಾತವಾಗಿದೆ ಎಂದು ಆತನ ಪತ್ನಿ ಲಲಿತಾ, ನೆರೆಮನೆಯವರನ್ನು ನಂಬಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಪ್ರವೀಣ ಆಗಲೇ ಸತ್ತಿರುವುದಾಗಿ, ಆಸ್ಪತ್ರೆಯ ವೈದ್ಯರು ಘೋಷಿಸಿದ್ದಾರೆ. ಪ್ರವೀಣನ ಸಾವಿನ ವಿಷಯ ಆತನ ಕುಟುಂಬಸ್ಥರಿಗೆ ತಿಳಿದು, ಪ್ರವೀಣನ ತಾಯಿ ಆತನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ ಬಳಿಕ ಕೊಲೆಯ ಮಾಹಿತಿ ಬಹಿರಂಗವಾಗಿದೆ. ಸದ್ಯ, ಪೊಲೀಸರು ಪತ್ನಿ ಲಲಿತಾ ಸೇರಿದಂತೆ ಆರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಇದನ್ನು ಓದಿ: Kundapura : ಬೀದಿ ಬದಿ ಚಪ್ಪಲಿ ಹೊಲಿಯುವವನಿಗೆ ಬಂತು ದೆಹಲಿ ಗಣರಾಜ್ಯೋತ್ಸವಕ್ಕೆ ಆಹ್ವಾನ !

Leave A Reply

Your email address will not be published.