Black Tea benefits: ಅಬ್ಬಬ್ಬಾ.. ಬ್ಲಾಕ್ ಟೀ ಕುಡಿಯೊದ್ರಿಂದ ಇಷ್ಟೆಲ್ಲಾ ಲಾಭ ಇದೆಯಾ ?! ಮಿಸ್ ಮಾಡ್ದೆ ಈ ಸ್ಟೋರಿ ನೋಡಿ !
healthy life tips of good health Health benefits of drinking black tea
Black Tea benefits : ನಮ್ಮಲ್ಲಿ ಹೆಚ್ಚಿನವರು ಪ್ರತಿದಿನ ಚಹಾ ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಅವರು ಬೆಳಗ್ಗೆ ಎದ್ದ ನಂತರ ಒಂದು ಬ್ಲ್ಯಾಕ್ ಟೀ ಕುಡಿಯುತ್ತಾರೆ. ಪ್ರತಿದಿನ ಎರಡು ಕಪ್ ಚಹಾ ಕುಡಿಯುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಆದರೆ ಸಾಮಾನ್ಯ ಚಹಾದ ಬದಲು ಬ್ಲ್ಯಾಕ್ ಟೀ ಕುಡಿದರೆ ಬಹಳ ಪ್ರಯೋಜನ (Black Tea benefits) ಸಿಗುತ್ತದೆ. ಅಬ್ಬಬ್ಬಾ.. ಬ್ಲಾಕ್ ಟೀ ಕುಡಿಯೊದ್ರಿಂದ ಇಷ್ಟೆಲ್ಲಾ ಲಾಭ ಇದೆಯಾ ?! ಮಿಸ್ ಮಾಡ್ದೆ ಈ ಸ್ಟೋರಿ ನೋಡಿ !
ಬ್ಲ್ಯಾಕ್ ಟೀಯನ್ನು ಸೇವಿಸದ ಜನರಿಗಿಂತ ಬ್ಲ್ಯಾಕ್ ಟೀ ಕುಡಿಯುವ ಜನರು ಸಾವಿನ ಅಪಾಯವನ್ನು 13% ಕಡಿಮೆ ಎಂದು ಸಂಶೋಧನೆ ತೋರಿಸುತ್ತದೆ. ಅಧ್ಯಯನದ ಪ್ರಕಾರ, ಬ್ಲ್ಯಾಕ್ ಟೀ ಸಸ್ಯದಲ್ಲಿ ಪಾಲಿಫಿನಾಲ್ ಮತ್ತು ಫ್ಲೇವನಾಯ್ಡ್‌ಗಳು ಕಂಡುಬರುತ್ತವೆ. ಇವು ನಮ್ಮ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಬ್ಲ್ಯಾಕ್ ಟೀಕ್ಯಾ ಟೆಚಿನ್ ಎಂಬ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ಜೀವಕೋಶದ ಒತ್ತಡವನ್ನು ಕಡಿಮೆ ಮಾಡುತ್ತದೆ.
ಬ್ಲ್ಯಾಕ್ ಟೀಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಇದನ್ನು ಸೇವಿಸುವುದರಿಂದ ನಮ್ಮ ಹೃದಯವೂ ಆರೋಗ್ಯವಾಗಿರುತ್ತದೆ. ಪ್ಲೇವನಾಯ್ಡ್ಗಳು ಎಂದು ಕರೆಯಲ್ಪಡುವ ಅಂಟಿಆಕ್ಸಿಡೆಂಟ್‌ಗಳು ಹೃದಯವನ್ನು ಆರೋಗ್ಯವಾಗಿಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹೃದಯಾಘಾತದ ಸಮಸ್ಯೆಗಳಿಂದ ಹೃದಯವನ್ನು ರಕ್ಷಿಸುತ್ತದೆ. ಈ ಟೀಯನ್ನು ಪ್ರತಿದಿನ ಕುಡಿದರೆ ಅಧಿಕ ರಕ್ತದೊತ್ತಡ, ಕೆಟ್ಟ ಕೊಲೆಸ್ಟ್ರಾಲ್ ಮತ್ತು ಬೊಜ್ಜಿನಿಂದ ಮುಕ್ತಿ ಪಡೆಯಬಹುದು.
ಬ್ಲ್ಯಾಕ್ ಟೀನಲ್ಲಿ ಆ್ಯಂಟಿಆಕ್ಸಿಡೆಂಟ್ಸ್ ಸಮೃದ್ಧವಾಗಿವೆ. ಇವು ಅನೇಕ ರೋಗಗಳನ್ನು ದೂರ ಮಾಡುತ್ತವೆ. ಜೊತೆಗೆ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಸಹ ಹೊರ ತೆಗೆಯುತ್ತವೆ. ಹೀಗಾಗಿ ನೀವು ಪ್ರತಿದಿನ ಬ್ಲ್ಯಾಕ್ ಟೀ ಸೇವಿಸಿದರೆ, ದೀರ್ಘಕಾಲದ ಕಾಯಿಲೆಗಳಿಂದ ಸುಲಭವಾಗಿ ಪರಿಹಾರವನ್ನು ಪಡೆಯಬಹುದು.
ಪ್ರತಿದಿನ ಬ್ಲ್ಯಾಕ್ ಟೀ ಕುಡಿಯುವುದರಿಂದ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು, ಇದರಲ್ಲಿರುವ ಆ್ಯಂಟಿಮೈಕ್ರೋಬಿಯಲ್ ಗುಣಲಕ್ಷಣಗಳು ಎಲ್ಲಾ ರೀತಿಯ ದೀರ್ಘಕಾಲದ ಕಾಯಿಲೆಗಳಿಗೆ ಪರಿಹಾರವನ್ನು ನೀಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅಲ್ಲದೆ, ಬ್ಲ್ಯಾಕ್ ಟೀ ಸೇವನೆಯು ರಕ್ತದಲ್ಲಿನ ಶುಗರ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಸ್ಟೋಕ್ ಅಪಾಯವನ್ನು ತಪ್ಪಿಸುತ್ತದೆ. ಕೆಲ ಕ್ಯಾನ್ಸರ್ ಸಂಭವಗಳನ್ನು ತಡೆಯುತ್ತದೆ.