Mangaluru Dasara: ದಸರಾ ಉತ್ಸವಕ್ಕೆ ಭರ್ಜರಿಯಾಗೆ ಸಿಂಗಾರವಾಗ್ತಿದೆ ಕರಾವಳಿ ‘ಕುದ್ರೋಳಿ’ – ಆದ್ರೆ ಈ ಸ್ತಬ್ಧಚಿತ್ರಗಳಿಗೆ ಇರೋದಿಲ್ಲ ಅವಕಾಶ!

Dakshina Kannada news World famous Mangaluru kudroli dasara 2023 festival

Share the Article

Mangaluru Dasara: ರಾಜ್ಯದಾದ್ಯಂತ ದಸರಾ ಹಬ್ಬದ ಸಂಭ್ರಮ ಕಳೆ ಕಟ್ಟಿದೆ. ಮಂಗಳೂರು ದಸರಾ(Mangaluru Dasara) ಕುದ್ರೋಳಿ ಶ್ರೀಕ್ಷೇತ್ರ ಭರದ ತಯಾರಿ ನಡೆಸುತ್ತಿದೆ. ದಸರಾ ಮೆರವಣಿಗೆ ಅ.25 ರಂದು ನಡೆಯಲಿದೆ. ಈ ಬಾರಿ ಮಂಗಳೂರು(Mangaluru)ದಸರಾದಲ್ಲಿ ಕ್ಷೇತ್ರದ ಆಡಳಿತ ಮಂಡಳಿ 60ಕ್ಕೂ ಅಧಿಕ ಟ್ಯಾಬ್ಲೋ ಮಂಡಳಿಗಳಿಗೆ ಅವಕಾಶ ನೀಡಿದೆ. ಏಳು ಕಿ. ಮೀ ಸಾಗುವ ದಸರಾ ಮೆರವಣಿಗೆಯಲ್ಲಿ ನಿಯಮ ಬದ್ಧವಾಗಿ ಟ್ಯಾಬ್ಲೋಗಳು ಇರಬೇಕೆಂದು ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಸೂಚಿಸಿದೆ.

ಶ್ರೀಕ್ಷೇತ್ರ ಕುದ್ರೋಳಿಯ ಕೋಶಾಧಿಕಾರಿ ಪದ್ಮರಾಜ್ ಆರ್ ಅವರು ತುಳುನಾಡಿನ ದೈವಗಳ ಟ್ಯಾಬ್ಲೊ, ಸ್ತಬ್ಧಚಿತ್ರಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ತುಳುನಾಡಿನಲ್ಲಿ ದೈವಗಳ ಬಗ್ಗೆ ಅಪಾರ ನಂಬಿಕೆಯಿದೆ. ಹೀಗಾಗಿ, ಭಕ್ತರ ನಂಬಿಕೆಗೆ ಘಾಸಿ ಆಗುವ ಹಾಗೆ ಯಾವುದೇ ಕಾರ್ಯವಾಗಬಾರದೆಂದು ದೈವಗಳನ್ನು ಅವಹೇಳನ ಮಾಡುವಂತಹ ಟ್ಯಾಬ್ಲೊಗಳಿಗೆ ಅವಕಾಶ ನೀಡಿಲ್ಲ ಎನ್ನಲಾಗಿದೆ. ಯಾವುದೇ ಜಾತಿ, ಧರ್ಮ, ಅವಮಾನ ಮಾಡುವ ರೀತಿಯ ಟ್ಯಾಬ್ಲೊಗಳಿಗೂ ಅವಕಾಶ ನೀಡಿಲ್ಲ.

ಈ ಬಾರಿ ಮಂಗಳೂರು ದಸರಾ ಸಾಮರಸ್ಯದ ದಸರಾಕ್ಕೆ ಸಾಕ್ಷಿಯಾಗಲಿದ್ದು, ಎಲ್ಲಾ ಜಾತಿ ಮತ, ಧರ್ಮದವರು ಈ ದಸರಾದಲ್ಲಿ ಭಾಗಿಯಾಗಲಿದ್ದಾರೆ. ಅದೇ ರೀತಿ, ಕ್ರೈಸ್ತ ಧರ್ಮದವರು ಸೇರಿದಂತೆ ಬೇರೆ ಬೇರೆ ಧರ್ಮದವರು ಅವರವರ ಟ್ಯಾಬ್ಲೊಗಳನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಲಿದ್ದಾರೆ.

ಇದನ್ನೂ ಓದಿ: Karnataka Education News: ವಿದ್ಯಾರ್ಥಿಗಳೇ ಗಮನಿಸಿ- ಫೆಬ್ರವರಿಯಿಂದ ನಿಮಗಿದೆ ಸಾಲು ಸಾಲು ಪರೀಕ್ಷೆ !! ಇಲ್ಲಿದೆ ಸಂಪೂರ್ಣ ವಿವರ

Leave A Reply