Mangaluru Crime: ಮಂಗಳೂರು ಉದ್ಯಮಿ ಆತ್ಮಹತ್ಯೆ ಪ್ರಕರಣ : ಮಹತ್ವದ ವಿಚಾರ ಪತ್ತೆ ಹಚ್ಚಿದ ಪೊಲೀಸರು!!! ಆತ್ಮಹತ್ಯೆ ಹಿಂದೆ ಇದೆ ಹಲವು ಕಾರಣ
Dakshina Kannada news businesses man Mundkur Ramdas kamath unnatural death case police got clue
Mundkur Ramdas kamath : ಮಂಗಳೂರಿನ ಪ್ರತಿಷ್ಠಿತ ಉದ್ಯಮಿ ಮುಂಡ್ಕೂರು ರಾಮದಾಸ್ ಕಾಮತ್( Mundkur Ramdas kamath)ಅವರ ಅಸಹಜ ಸಾವಿನ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮಹತ್ವದ ಮಾಹಿತಿಯೊಂದು ದೊರಕಿದೆ. ಎಸಿಪಿ ಮಹೇಶ್‌ಕುಮಾರ್ ಅವರ ನೇತೃತ್ವದಲ್ಲಿ ತನಿಖೆ ಮಾಡುತ್ತಿರುವ ಪೊಲೀಸ್ ತಂಡಕ್ಕೆ ಕಾಮತ್ ಅವರ ಸಾವಿಗೂ ಹಣಕಾಸು ವ್ಯವಹಾರಕ್ಕೂ ಏನೋ ಸಂಬಂಧವಿದೆ ಎಂಬ ಮಾಹಿತಿ ದೊರಕಿದೆ ಎನ್ನಲಾಗಿದೆ.
ಇದೊಂದು ಆತ್ಮಹತ್ಯೆ ಪ್ರಕರಣವೆಂದು ಮೊದಲು ಭಾವಿಸಲಾಗಿತ್ತು. ಈ ಬಗ್ಗೆ ಅವರ ಸಮುದಾಯದವರೇ ಅನುಮಾನ ವ್ಯಕ್ತಪಡಿಸಿದ್ದರು. ನಂತರ ಈ ಜವಾಬ್ದಾರಿಯನ್ನು ಎಸಿಪಿ ಮಹೇಶ್ ಕುಮಾರ್ ಅವರಿಗೆ ನೀಡಲಾಗಿತ್ತು. ಹಣಕಾಸಿನ ವ್ಯವಹಾರ ನಡೆಸಿ ವಂಚಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ, ಈ ಕುರಿತು ಮಾಹಿತಿ ದೊರಕಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಕೆಲ ವಾರಗಳ ಹಿಂದೆ ಪತ್ನಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಎಂ.ಆರ್.ಕಾಮತ್ ಅವರ ಮೃತದೇಹ ಫ್ಲ್ಯಾಟ್‌ನಲ್ಲಿ ಪತ್ತೆಯಾಗಿತ್ತು. ಇಬ್ಬರು ಉದ್ಯಮಿಗಳನ್ನು ಈಗಾಗಲೇ ವಿಚಾರಣೆಗೆ ಒಳಪಡಿಸಲಾಗಿದ್ದು, ಅವರ ಮೊಬೈಲ್‌ಗಳನ್ನು ವಶಪಡಿಸಕೊಳ್ಳಲಾಗಿದೆ. ಕಾಮತ್ ಅವರ ಸಾವಿಗೂ ಮುನ್ನ ಯಾರೆಲ್ಲ ಅವರನ್ನು ಭೇಟಿಯಾಗಿದ್ದರು, ಕರೆ ಮಾಡಿದ್ದರು ಎಂಬುವುದನ್ನು ಆಧರಿಸಿ ತನಿಖೆ ನಡೆಸಲಾಗುತ್ತದೆ ಎಂದು ಕಮಿಷನರ್ ತಿಳಿಸಿದ್ದಾರೆ.
ಕಾಮತ್ ಅವರು ಕೆಲವೊಂದು ಆಸ್ತಿಗಳನ್ನು ಬಾಡಿಗೆ ರೂಪದಲ್ಲಿ ನೀಡಿದ್ದು, ಅದನ್ನು ನೋಡುವಂತೆ ಪರಿಚಯಸ್ಥರಿಗೆ ನೋಡಿಕೊಳ್ಳಲು ಬಿಟ್ಟಿದ್ದರು. ಅದರಲ್ಲಿ ಕೆಲವರು ನೀಡಬೇಕಾದ ಹಣವನ್ನು ನೀಡಿರಲಿಲ್ಲ. ಕೋವಿಡ್ ಸಮಯದಲ್ಲಿ ಎಲ್ಲಾ ವಿಧದ ವ್ಯವಹಾರಗಳಿಗೆ ಏಟು ಬಿದ್ದಿದ್ದರಿಂದ ಇದನ್ನು ಗಂಭೀರವಾಗಿ ಕಾಮತ್ ಅವರನ್ನು ತೆಗೆದುಕೊಂಡಿರಲಿಲ್ಲ. ಆದರೆ ಪರಿಸ್ಥಿತಿ ಮೊದಲಿನ ಸ್ಥಿತಿಗೆ ಬಂದರೂ ಅವರಿಗೆ ದೊರಕಬೇಕಾದ ಹಣ ಸಿಕ್ಕಿರಲಿಲ್ಲ. ಇದು ಅವರನ್ನು ಚಿಂತೆಗೆ ದೂಡಿದ್ದವು. ಬಾಡಿಗೆ ಬಾರದಿದ್ದಾಗ ಕಟ್ಟಡಗಳನ್ನು ತಮ್ಮ ಸ್ವಾಧಿನಕ್ಕೆ ಪಡೆಯಲು ಮುಂದಾಗಿದ್ದಾರೆ. ಈ ಮಧ್ಯೆ ಅವರು ಮೃತಪಟ್ಟಿದ್ದಾರೆ.