THLS USB Night Light: ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಕೇವಲ 25 ರೂ.ಗಳ ಯುಎಸ್ ಬಿ ಲ್ಯಾಂಪ್! ದುಬಾರಿ ಲ್ಯಾಂಪ್ ಗೆ ಹೇಳಿ ಬೈ ಬೈ !

USB Light is now available for just Rs.25

THLS USB Night Light: ಸಾಮಾನ್ಯವಾಗಿ ನೈಟ್ ಲ್ಯಾಂಪ್ ಗಳು ಬಹಳ ದುಬಾರಿಯಾಗಿರುತ್ತವೆ. ಅದರಲ್ಲೂ ಎಲ್ಇಡಿ ಲೈಟ್ ಬೆಲೆ ದುಬಾರಿ ಆಗಿರುತ್ತೆ. ಆದರೆ ಇನ್ನು ಮುಂದೆ ಉತ್ತಮ ಬೆಳಕು ನೀಡುವ ಕಡಿಮೆ ಬೆಲೆಯ ಲೈಟ್ ನ್ನು ನೀವು ಖರೀದಿಸಬಹುದು. ಹೌದು, ಇಲ್ಲಿದೆ ಬೆಸ್ಟ್ ಆಯ್ಕೆ. ಕಡಿಮೆ ಬೆಲೆಯನ್ನು ಪಾವತಿಸುವ ಮೂಲಕ ಈ ನೈಟ್ ಲ್ಯಾಂಪ್ ಅನ್ನು ನೀವು ಖರೀದಿಸಬಹುದು.

 

ರಾತ್ರಿ ಮಲಗುವಾಗ ಕೋಣೆಯಲ್ಲಿ ಮಂದ ಬೆಳಕನ್ನು ಇಷ್ಟಪಡುವವರಿಗೆ, ಜೊತೆಗೆ ಮನೆಯಲ್ಲಿ ಮಕ್ಕಳಿದ್ದಾಗ ನೈಟ್ ಲ್ಯಾಂಪ್ ಅನಿವಾರ್ಯ. ಇದೀಗ ನಿಮ್ಮ ಬಜೆಟ್ ಕಡಿಮೆಯಿದ್ದು, ಕಡಿಮೆ ಬಜೆಟ್‌ನಲ್ಲಿಯೇ ಉತ್ತಮ ನೈಟ್ ಲ್ಯಾಂಪ್ ಖರೀದಿಸಬೇಕು ಎಂದಿದ್ದರೆ THLS USB Night Light ನ್ನು ಖರೀದಿಸಿ.

THLS USB Night Light ಅದರ ವಿಶೇಷತೆ :
ಇದು ರಾತ್ರಿ ಹೊತ್ತು ಎಷ್ಟು ಬೆಳಕಿನ ಅಗತ್ಯವಿರುತ್ತದೆಯೋ ಅಷ್ಟೇ ಬೆಳಕನ್ನು ನೀಡುತ್ತದೆ. ಅಲ್ಲದೆ ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಈ ಲೈಟ್ ಎರಡು ಬಣ್ಣಗಳ ಆಯ್ಕೆಗಳಲ್ಲಿ ಬರುತ್ತವೆ. ಅವುಗಳನ್ನು ಚಾರ್ಜರ್‌ನಿಂದ ರನ್ ಮಾಡಬಹುದು ಅಥವಾ ನೀವು ಅವುಗಳನ್ನು ಪವರ್ ಬ್ಯಾಂಕ್‌ನಿಂದ ರನ್ ಮಾಡಬಹುದು.

ಗ್ರಾಹಕರು ಈ ಲ್ಯಾಂಪ್ ಅನ್ನು 15ರಿಂದ 25 ರೂಗಳಲ್ಲಿ ಖರೀದಿಸಬಹುದು. ಇದು ಮಿತವ್ಯಯಕಾರಿಯಾಗಿರುವುದೇ ಮಾರುಕಟ್ಟೆಯಲ್ಲಿ ಇದರ ಬೇಡಿಕೆ ಹೆಚ್ಚಾಗಲು ಕಾರಣ. ಈ ಲ್ಯಾಂಪ್ ಅನ್ನು ನೀವು ಅಮೆಜಾನ್‌ನಲ್ಲಿ ಕೂಡ ಖರೀದಿಸಬಹುದು.

THLS USB Night Light ಎಲ್ ಇ ಡಿ ಲೈಟ್ ನ ಗಾತ್ರವು ಸರಿಸುಮಾರು 2 ಸೆಂಟಿಮೀಟರ್ ನಷ್ಟಿದೆ. ಆದರೆ ಅದು ನೀಡುವ ಬೆಳಕು ನೋಡಿದರೆ ಆಶ್ಚರ್ಯವಾಗುತ್ತದೆ. ರಾತ್ರಿ ದೀಪಕ್ಕಾಗಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಲು ನಿಮಗೆ ಇಷ್ಟವಿಲ್ಲದಿದ್ದರೆ, ಇದು ನಿಮಗೆ ಉತ್ತಮ ಆಯ್ಕೆಯಾಗಬಹುದು.

 

ಇದನ್ನು ಓದಿ: ಬಿಹಾರದಲ್ಲಿ ಮತ್ತೊಂದು ಭೀಕರ ರೈಲು ದುರಂತ, ಹಳಿತಪ್ಪಿದ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್

Leave A Reply

Your email address will not be published.