Train Accident: ಬಿಹಾರದಲ್ಲಿ ಮತ್ತೊಂದು ಭೀಕರ ರೈಲು ದುರಂತ, ಹಳಿತಪ್ಪಿದ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್

Another terrible train accident in Bihar

Train Accident: ಬಿಹಾರದ ಬಕ್ಸರ್ ಜಿಲ್ಲೆಯ ರಘುನಾಥಪುರ ರೈಲು ನಿಲ್ದಾಣದ ಸಮೀಪ ಬುಧವಾರ ರಾತ್ರಿ 9.30 ಕ್ಕೆ ನಾರ್ತ್ ಈಸ್ಟ್ ಸೂಪರ್ಫಾಸ್ಟ್ ರೈಲಿನ ಹಲವು ಬೋಗಿಗಳು ಹಳಿತಪ್ಪಿದ್ದು, ಅಪಘಾತದಲ್ಲಿ (Train Accident)ಕನಿಷ್ಠ ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದಾರೆ ಮತ್ತು 70 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಬಿಹಾರದ ಬಕ್ಸರ್ ಜಿಲ್ಲೆಯ ಬಳಿ ದೆಹಲಿಯಿಂದ ಗುವಾಹಟಿಗೆ ಹೊರಟಿದ್ದ ನಾರ್ತ್ ಈಸ್ಟ್ ಎಕ್ಸ್ ಪ್ರೆಸ್‌ ರೈಲು 12506 ನಂಬರಿನ ರೈಲು ರಘುನಾಥಪುರ ರೈಲು ನಿಲ್ದಾಣದ ಬಳಿ ರಾತ್ರಿ 9:30 ಕ್ಕೆ ಹಳಿತಪ್ಪಿತು ಎಂದು ರೈಲ್ವೆ ಅಧಿಕಾರಿಯೊಬ್ಬರು ಮಾಧ್ಯಮ ಕ್ಕೆ ತಿಳಿಸಿದ್ದಾರೆ.

ಸದ್ಯ ನಾರ್ತ್ ಈಸ್ಟ್ ಸೂಪರ್ಫಾಸ್ಟ್ ರೈಲಿನ ಆರು ಬೋಗಿಗಳು ಪಲ್ಟಿಯಾಗಿ ಟ್ರ್ಯಾಕ್ ಮೇಲೆ ಬಿದ್ದಿವೆ ಎಂದು ವರದಿಯಾಗಿದೆ. ರೈಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು, ಅಸ್ತವ್ಯಸ್ತಗೊಂಡಿದ್ದಕ್ಕೆ ಪ್ರಯಾಣಿಕರು ಗಾಬರಿಗೊಂಡು ವೀಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಪಘಾತ ಮಾಹಿತಿ ತಿಳಿದ ತಕ್ಷಣವೇ ರೈಲ್ವೆ ಮತ್ತು ನಿರ್ವಹಣಾ ಅಧಿಕಾರಿಗಳೊಂದಿಗೆ ವೈದ್ಯಕೀಯ ತಂಡ ಸ್ಥಳಕ್ಕೆ ತೆರಳಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೂ ಸ್ಥಳೀಯ ಬಕ್ಸರ್ ಸಂಸದರೂ ಆಗಿರುವ ಕೇಂದ್ರ ಸಚಿಚ ಅಶ್ವಿನಿ ಕುಮಾರ್ ಚೌಬೆ ಅವರು ರೈಲು ಹಳಿತಪ್ಪಿದ ಬಗ್ಗೆ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ಹೋಗಿದ್ದಾರೆ.

ಇನ್ನು ಬಿಹಾರ ರೈಲ್ವೆ ಅಪಘಾತಕ್ಕೆ ಸಂಬಂಧಿಸಿದಂತೆ, ಜನರಿಗೆ ಮಾಹಿತಿ ನೀಡಲು ಭಾರತೀಯ ರೈಲ್ವೆ ಸಹಾಯವಾಣಿ ಸಂಖ್ಯೆಗಳನ್ನೂ ನೀಡಿದೆ.
ಪಾಟ್ನಾ ಸಹಾಯವಾಣಿ- 9771449971
ಡಣಾಪುರ ಸಹಾಯವಾಣಿ- 8905697493
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್- 9794849461, 8081206628
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ವಾಣಿಜ್ಯ ನಿಯಂತ್ರಣ- 8081212134

ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ತಕ್ಷಣವೇ ಹಳಿಯನ್ನು ಮೊದಲಿನ ಸ್ಥಿತಿಗೆ ತರಲಾಗುವುದು. ಹಳಿ ತಪ್ಪಲು ಮೂಲ ಕಾರಣವೇನೆಂದು ತಿಳಿಯುತ್ತೇವೆಂದು ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಟ್ವೀಟ್ ಮಾಡಿದ್ದಾರೆ.

ಮುಖ್ಯವಾಗಿ ರೈಲು ಅಪಘಾತದಿಂದಾಗಿ ಇದೇ ಮಾರ್ಗದಲ್ಲಿ ಚಲಿಸಬೇಕಿದ್ದ 2 ರೈಲು ಕ್ಯಾನ್ಸಲ್ ಆಗಿವೆ, ಜೊತಗೆ 21 ಕ್ಕೂ ಹೆಚ್ಚು ರೈಲುಗಳ ಮಾರ್ಗಗಳನ್ನು ಬೇರೆ ಮಾರ್ಗಕ್ಕೆ ಬದಲಿಸಲಾಗಿದೆ.

 

 

ಇದನ್ನು ಓದಿ: ಮಂಗಳೂರು: ಕಳ್ಳತನ ನಡೆದು ವರ್ಷದ ಬಳಿಕ ಕಣ್ಣೆದುರೇ ಕಾಣಿಸಿದ ಬೈಕ್ !! ಕೊರಗಜ್ಜನಿಗೆ ಹರಕೆ ಹೇಳಿದ್ದ ಬೈಕ್ ಮಾಲಿಕನ ಅಮ್ಮ!!!

Leave A Reply

Your email address will not be published.