Drought relief: ರೈತರೇ, ಬರಪರಿಹಾರ ಬೇಕು ಅಂದ್ರೆ ಕೂಡಲೇ ಈ ಕೆಲಸ ಮಾಡಿ !

Farmers need drought relief do this work immediately

Drought relief: ಕೇಂದ್ರದಿಂದ ಬರ (Drought relief) ಪರಿಶೀಲನೆ ಮಾಡಲು ರಾಜ್ಯಕ್ಕೆ ಸುಮಾರು 30 ಜನರನ್ನು ಕಳಿಸಿಕೊಟ್ಟಿದೆ. ಇದರಲ್ಲಿ ಮತ್ತೆ ಮುಖ್ಯಮಂತ್ರಿಗಳು ಅವರೊಂದಿಗೆ ಸಭೆ ನಡೆಸಿ ಮತ್ತು ಬೇರೆ ಬೇರೆ ಜನರಿಗೆ ಬೇರೆ ಬೇರೆ ಪ್ರದೇಶಗಳಲ್ಲಿ ಬರ ಸಮೀಕ್ಷೆ ಮಾಡಲು ಕಳುಹಿಸಿದ್ದಾರೆ. ಯಾವ ಯಾವ ಪ್ರದೇಶಗಳಲ್ಲಿ ನಿಜವಾಗಿಯೂ ಮಳೆಯಾಗಿಲ್ಲ ಮತ್ತು ಬೆಳೆಗಳು ಯಾವ ಹಂತದಲ್ಲಿವೆ ಎಂಬುದನ್ನು ಪರಿಶೀಲನೆ ಮಾಡಿ ಕೇಂದ್ರದ ಎನ್ ಡಿ ಆರ್ ಎಫ್(NDRF) ಮಾನದಂಡಗಳನ್ನು ಪಾಲಿಸಿ ಬರ ಘೋಷಣೆ ಮಾಡಲಾಗುತ್ತದೆ.

ಈಗಾಗಲೇ ಬಾಗಲಕೋಟೆ, ಬಳ್ಳಾರಿಯಲ್ಲಿ ಬಹಳಷ್ಟು ತಾಲೂಕುಗಳು ಬರಗಾಲ ಪಟ್ಟಿಯಲ್ಲಿ ಬರಬಹುದು ಎಂದು ಎರಡು ದಿನಗಳ ಸಮೀಕ್ಷೆ ಪ್ರಕಾರ ತಿಳಿದು ಬಂದಿದೆ. ನಂತರ ಉಳಿದ ಜಿಲ್ಲೆಗಳಲ್ಲಿಯೂ ಸಮೀಕ್ಷೆ ನಡೆಯುತ್ತಿದೆ. ಆದರೆ ಇನ್ನೂ ಪ್ರತ್ಯೇಕವಾದ ಯಾವ ತಾಲೂಕುಗಳು ಬರ ಪಟ್ಟಿಯಲ್ಲಿ ಬರಬಹುದು ಎಂದು ತಿಳಿಸಿಲ್ಲ. ಆದರೆ ಇನ್ನೆರಡು ಮೂರು ದಿನಗಳಲ್ಲಿ ಅದರ ಮಾಹಿತಿಯು ಲಭ್ಯವಾಗುತ್ತದೆ. ರೈತರೇ, ಬರ ಪರಿಹಾರಬೇಕು ಅಂದ್ರೆ ಕೂಡಲೇ ಈ ಕೆಲಸ ಮಾಡಿ!!!.

ಬೆಳೆ ಸಮೀಕ್ಷೆ ಸರಿಯಾದ ರೀತಿಯಲ್ಲಿ ಮಾಡಬೇಕು. ಪ್ರತಿಯೊಂದು ಬೆಳೆ ದಾಖಲೆಗಳನ್ನು ಸರಿಯಾಗಿ ನಮೂದಿಸಿ. ಒಂದು ವೇಳೆ ನಿಮ್ಮಲ್ಲಿ ಪ್ರಸ್ತುತ ಇರುವ ಬೆಳೆಯು ಮತ್ತು ಬೆಳೆ ಸಮೀಕ್ಷೆಯಲ್ಲಿ ಬರೆದಿರುವ ಬೆಳೆಯು ವಿಸ್ತೀರ್ಣ ಆಗಲಿ ಅಥವಾ ಬೆಳೆಯನ್ನೇ ಬದಲಾವಣೆಯಾಗಿಕೊಂಡರೆ ಖಂಡಿತವಾಗಿಯೂ ಈ ಬರಗಾಲದ ಪರಿಹಾರ ಆಗಿರಬಹುದು ಮತ್ತು ಬೆಳೆ ವಿಮೆ ಆಗಿರಬಹುದು 2 ಸೌಲಭ್ಯಗಳಿಂದ ನೀವು ವಂಚಿತರಾಗಬಹುದು.

ರೈತರ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಮಾಹಿತಿಯನ್ನು ರೈತರೇ ದಾಖಲಿಸಬಹುದಾಗಿದೆ. ಸದರಿ ಬೆಳ ಸಮೀಕ್ಷೆ ಮಾಹಿತಿಯನ್ನು ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಬೆಂಬಲ ಬೆಲೆ, ಕೃಷಿ ಸಾಲ ಸೌಲಭ್ಯ ಮತ್ತು ಸರ್ಕಾರದ ವಿವಿಧ ಯೋಜನೆಗಳಡಿ ಸವಲತ್ತುಗಳನ್ನು ರೈತರಿಗೆ ಒದಗಿಸಲು ಮತ್ತು RTC ಯಲ್ಲಿ ಬೆಳೆ ಮಾಹಿತಿ ಅಳವಡಿಸಲು ಬಳಸಲಾಗುತ್ತದೆ.

ಬರ ಪರಿಹಾರಕ್ಕೆ ಈ ರೀತಿ ಮಾಡಿ :-

• ಈ ಲಿಂಕ್ https://play.google.com/store/apps/details?id=com.csk.farmer23_24.cropsurvey ಬಳಸಿ ಪ್ಲೇ ಸ್ಟೋರ್ ನಲ್ಲಿ ಮೊದಲು ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
• ಅಲ್ಲಿ ತೋರಿಸುವ ಮುಖಪುಟದಲ್ಲಿ ತಮ್ಮ ಆಧಾರ್ ಕಾರ್ಡ್ ನ ಮೂಲಕ EKYC ಪ್ರಕ್ರಿಯೆ ಪೂರ್ಣಗೊಳಿಸಿ. ನೊಂದಾಯಿಸಿಕೊಂಡು ತಮ್ಮ ಜಮೀನಿನ ವಿವರಗಳನ್ನು ನಿಮ್ಮ ಹೊಲದ ಸರ್ವೆ ನಂಬರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬೇಕು.
• ತಮ್ಮ ಜಮೀನುಗಳಿಗೆ ತೆರಳಿ ಸಂಬಂಧಪಟ್ಟ ಸರ್ವೆ ನಂಬರ್ ನಲ್ಲಿ ಬೆಳೆದಿರುವ ಬೆಳೆಗಳ ಛಾಯಾಚಿತ್ರಗಳನ್ನು ತೆಗೆದು ಅಪ್ ಲೋಡ್ ಮಾಡಬೇಕು.
• ನಿಮ್ಮ ಬೆಳೆ ಸಮೀಕ್ಷೆಯ ಛಾಯಾಚಿತ್ರವು ಸರಿಯಾಗಿದ್ದು, ಬರಗಾಲ ಸಮೀಕ್ಷೆಯ ತಂಡವು ಇದಕ್ಕೆ ಅನುಮತಿ ಕೊಟ್ಟರೆ ಮಾತ್ರ ನಿಮಗೆ ಬೆಳೆ ಹಾನಿ ಬೆಳೆಯುವ ಇಂತಹ ಪರಿಹಾರ ಹಣ ಜಮಯಾಗುತ್ತವೆ.

 

ಇದನ್ನು ಓದಿ: Bank loans: ಬ್ಯಾಂಕ್ ನಲ್ಲಿ ಸಾಲ ಮಾಡಿರೋರಿಗೆಲ್ಲಾ ಬಂತು ಹೊಸ ರೂಲ್ಸ್ !! ಬೆಳ್ಳಂಬೆಳಗ್ಗೆಯೇ ಹೊರ ಬಿತ್ತು ಹೊಸ ಸೂಚನೆ !

Leave A Reply

Your email address will not be published.