Areca Nut Farming: ನಿಮ್ಮ ತೋಟದ ಅಡಿಕೆ ಗಿಡಗಳಿಗೆ ಕಾಂಡ ಸೀಳೋ ಸಮಸ್ಯೆಯೇ ?! ಇಲ್ಲಿದೆ ನೋಡಿ ಪರಿಹರಿಸೋ ಸುಲಭ ಮಾರ್ಗ !

Solution to stem splitting problem for Areca nut trees

Areca Nut Farming: ಹಲವೆಡೆ ಅಡಿಕೆ ಕೃಷಿ (Areca Nut Farming) ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ವಾರ್ಷಿಕ ಬೆಳೆ ಆಗಿರುವ ಇದರಲ್ಲಿ ಸರಿಯಾದ ಫಸಲು ಸಿಕ್ಕರೆ ಲಕ್ಷ ಲಕ್ಷ ಹಣ ಗಳಿಸಬಹುದು. ಒಂದು ಎಕರೆ ಜಮೀನು ಇದ್ರೂ ನೀವು ಅಡಿಕೆಯನ್ನು ಬೆಳೆಯಬಹುದು. ಅದರಿಂದಲೂ ಹೆಚ್ಚಿನ ಲಾಭ ಇದೆ. ಆದರೆ, ಅಡಿಕೆ ನಾನಾ ರೋಗಗಳು ಮುಗಿಬೀಳುತ್ತವೆ. ನಿಮ್ಮ ತೋಟದ ಅಡಿಕೆ ಗಿಡಗಳಿಗೆ ಕಾಂಡ ಸೀಳೋ ಸಮಸ್ಯೆ ಇದ್ದರೆ ಇಲ್ಲಿದೆ ನೋಡಿ ಪರಿಹರಿಸೋ ಸುಲಭ ಮಾರ್ಗ !

ಮಧ್ಯಾಹ್ನದ ಸೂರ್ಯನ ಬಿಸಿಲು ತುಂಬಾ ತಾಪಮಾನದಿಂದ ಇರುವ ಕಾರಣ ಅಡಿಕೆ (Areca Nut) ಕಾಂಡ ಸಂಪೂರ್ಣ ಹಾನಿಯಾಗಿ ಬಿಡುತ್ತದೆ. ಆಗ ಅಡಿಕೆಯ ಕಾಂಡ ಹಸಿರು (Green) ಬಣ್ಣದಿಂದ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಅಲ್ಲದೆ, ಈ ಗಿಡಕ್ಕೆ ರೋಗನಿರೋಧಕ ಶಕ್ತಿ ಕಡಿಮೆ ಇದ್ದು, ಬಹಳ ಬೇಗ ಇತರ ರೋಗ ರುಜಿನಕ್ಕೆ ತುತ್ತಾಗಲಿದೆ. ಹಾಗಾಗಿ ಈ ಸಮಸ್ಯೆಯಿಂದ ಹೊರಬರಲು ಇಲ್ಲಿದೆ ನೋಡಿ ಸುಲಭ ಮಾರ್ಗ.

ಸಾಮಾನ್ಯವಾಗಿ ಚಳಿಗಾಲ ಮುಗಿಯುತ್ತ ಬೇಸಿಗೆ ಕಾಲ ಸಮೀಪಿಸಿದಂತೆ ಅಡಿಕೆ (Areca Nut) ಬುಡಕ್ಕೆ ಸುಣ್ಣವನ್ನು ಲೇಪಿಸುತ್ತಾರೆ. ಇದರಿಂದ ಕಾಂಡ ಬೀರಿಯುವುದನ್ನು ತಪ್ಪಿಸಬಹುದು. ಪಶ್ಚಿಮಾಭಿಮುಖ ಅಥವಾ ಪೂರ್ವ ಪಶ್ಚಿಮಕ್ಕೆ ಅಡಿಕೆ ಗಿಡ (Areca Nut Plant) ನೆಟ್ಟರೆ ಅದಕ್ಕೆ ಸುಣ್ಣ ಲೇಪನ ಮಾಡುವುದು ಬಹಳ ಮುಖ್ಯ. ಸುಣ್ಣದಿಂದ ಸೂರ್ಯನ ಶಾಖ ಕಡಿಮೆ ಮಾಡುವ ಜೊತೆಗೆ ಕಾಂಡಕ್ಕೂ ಕೂಡ ತಂಪಾಗೆ ಇರಲಿದೆ. ಪೂರ್ತಿ ಸುಣ್ಣವೇ ಹಾಕಬಾರದು. ಮೈದಾಹಿಟ್ಟು, ಬೆಲ್ಲ ಹಾಗೂ ಶಿಲೀಂಧ್ರ ನಾಶಕ ಮಿಶ್ರಣ ಮಾಡಿ ಕಾಂಡಕ್ಕೆ ಹಾಗೂ ಅಡಿಕೆ ಮರಕ್ಕೆ ಸ್ವಲ್ಪ ಲೇಪನ ಮಾಡಬೇಕು. ಇದು ಕಾಂಡದ ಹಾನಿ ತಡೆಯಲಿದೆ.

ಗಿಡಗಳಿಗೆ ಬಿಸಿಲು ಬರದಂತೆ ನೆರಳಿಗಾಗಿ ಸಸಿ ನೆಡಬೇಕು. ಹಾಗೂ ಬಿಸಿಲು ಅಧಿಕ ಬೀಳುವ ಪ್ರದೇಶದಲ್ಲಿ ಅಡಿಕೆ ಮತ್ತು ತೆಂಗಿನ ಸೋಗೆಯನ್ನು ಮರಕ್ಕೆ ಕಟ್ಟಬೇಕು. ಈ ಮೂಲಕ ಅಡಿಕೆ ಬೆಳೆಗೆ ಕಾಂಡ ಸೀಳುವ ಸಮಸ್ಯೆಗೆ ನೀವು ಈ ಪರಿಹಾರ ಕ್ರಮ ಅನುಸರಿಸಬಹುದಾಗಿದೆ.

 

ಇದನ್ನು ಓದಿ: Good News for Farmers : ರೈತರೇ ನಿಮಗಿದೋ ಭರ್ಜರಿ ಸುದ್ದಿ, ಸಾಲದ ಹೊರೆಯಿಂದ ಸಿಗಲಿದೆ ಬಿಗ್ ರಿಲೀಫ್ !!

Leave A Reply

Your email address will not be published.