Beach Restaurant: ಇನ್ಮೇಲೆ ರೆಸ್ಟೋರೆಂಟ್​​ಗಳಲ್ಲಿ ಈ ಮೆನು ಕಡ್ಡಾಯ – ಸರ್ಕಾರದಿಂದ ಬಂತು ಮಹತ್ವದ ಆದೇಶ

this menu is mandatory in restaurants Ordered by the government

Beach Restaurant: ನಾವು ನಮ್ಮ ರಾಜ್ಯದ ಶ್ರೀಮಂತ ಪಾಕವಿಧಾನಗಳನ್ನು ದೇಶಕ್ಕೆ ಮತ್ತು ವಿದೇಶಗಳಿಗೆ ತಿಳಿಸಬೇಕು. ಈ ಬಗ್ಗೆ ಇತ್ತೀಚೆಗೆ ಕ್ಯಾಬಿನೆಟ್​​ನಲ್ಲೂ ಚರ್ಚೆ ನಡೆಸಲಾಗಿತ್ತು. ಆದ್ದರಿಂದ ಇನ್ಮುಂದೆ ಹೋಟೆಲ್ ಗಳು (Beach Restaurant) ಅದೊಂದು ಊಟವನ್ನು ಕಡ್ಡಾಯವಾಗಿ ನೀಡಲೇ ಬೇಕು. ಹಾಗಂತ ಗೋವಾ ಸರ್ಕಾರ ಆದೇಶ ನೀಡಿದೆ. ಈಗ ಕರಾವಳಿ ರಾಜ್ಯದ ಪ್ರಮುಖ ಆಹಾರವಾದ ಮೀನು ಕರಿ ಮತ್ತು ಅನ್ನವನ್ನು ಇತರ ಭಾರತೀಯ ಮತ್ತು ಅಂತಾರಾಷ್ಟ್ರೀಯ ಪಾಕಪದ್ಧತಿಗಳೊಂದಿಗೆ ಕಡ್ಡಾಯವಾಗಿ ನೀಡಬೇಕಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಹೇಳಿದ್ದಾರೆ.

ಹೌದು, ಗೋವಾದ ಕಡಲ ತೀರಗಳಲ್ಲಿನ ಮಸಾಲೆಗಳು, ತೆಂಗಿನಕಾಯಿ ಹಾಕಿ ಮಾಡಿದ ಆಹಾರಗಳು ಹೆಚ್ಚು ರುಚಿಕರ ಮತ್ತು ಮಸಾಲೆಯುಕ್ತ ಅಡುಗೆಗಳನ್ನು ಈ ಮೆನುಗಳಲ್ಲಿ ಕಡ್ಡಾಯವಾಗಿ ಸೇರಿಸಬೇಕು. ಗೋವಾದ ಪಾಕಪದ್ಧತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಇದು ರಾಜ್ಯದ ಹೊಸ ಪಾಕ ನೀತಿಯ ಭಾಗವಾಗಿದೆ. ಇದರ ಜತೆಗೆ ದೇಶ- ವಿದೇಶದಲ್ಲಿ ನಮ್ಮ ಆಹಾರ ಪರಿಚಯವಾಗಬೇಕು, ಅದಕ್ಕಾಗಿ ನಿಮ್ಮ ರೆಸ್ಟೋರೆಂಟ್ ಮೆನುಗಳಲ್ಲಿ ಮೀನು ಕರಿ-ಅನ್ನ ಸೇರಿಸಿ ಎಂದು ರೋಹನ್ ಖೌಂಟೆ ನಿನ್ನೆ ಅಕ್ಟೋಬರ್ 8 ರ ಭಾನುವಾರ ತಿಳಿಸಿದ್ದಾರೆ.

ಇದುವರೆಗೂ ಸಮುದ್ರದ ಉದ್ದಕ್ಕೂ ಇರುವ ಗುಡಿಸಲಿನಲ್ಲಿ ಉತ್ತರ ಭಾರತೀಯ ಆಹಾರವನ್ನು ನೀಡಲಾಗುತ್ತಿತ್ತು. ಆದರೆ ಈ ಸ್ಥಳಗಳಲ್ಲಿ ಗೋವಾದ ಭಕ್ಷ್ಯಗಳು ಲಭ್ಯವಿರಲಿಲ್ಲ. ಮೀನು ಕರಿ-ಅನ್ನ ಸೇರಿದಂತೆ ಗೋವಾದ ಆಹಾರವನ್ನು ಪ್ರದರ್ಶನ ಹಾಗೂ ಬಡಿಸಲು ಸರ್ಕಾರವು ಈಗ ಷ್ಯಾಕ್‌ಗಳಿಗೆ ಕಡ್ಡಾಯಗೊಳಿಸಿದೆ ಎಂದು ಹೇಳಿದರು.

“ನಾವು ನಮ್ಮ ಶ್ರೀಮಂತ ಅನ್ನಿಸುವ ಗೋವಾದ ವಿಶಿಷ್ಟ ಪಾಕಪದ್ಧತಿಯನ್ನು ಪ್ರವಾಸಿಗರಿಗೆ ಪರಿಚಯಿಸಬೇಕಾಗಿದೆ. ಇತ್ತೀಚೆಗೆ ಕ್ಯಾಬಿನೆಟ್ ಅಂಗೀಕರಿಸಿದ ಷ್ಯಾಕ್‌ ನೀತಿಯು, ಕಡಲತೀರಗಳಲ್ಲಿ ಅಕ್ರಮ ಹಾಕಿಂಗ್ ಮತ್ತು ಮಾರಾಟದ ಸವಾಲನ್ನು ಎದುರಿಸಲು ಉದ್ದೇಶಿಸಿದೆ. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಬಂಧಿಸಿದಾಗ ಅನೇಕ ಮಹಿಳೆಯರು ಬೀಚ್‌ಗಳಲ್ಲಿ ಅಕ್ರಮ ಕಳ್ಳಭಟ್ಟಿ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ” ಎಂದು ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಸರ್ಕಾರದ ಹೊಸ ನೀತಿಯ ಪ್ರಕಾರ ಎಲ್ಲ ರೆಸ್ಟೋರೆಂಟ್​​ಗಳಲ್ಲಿ ಗೋವಾದ ಆಹಾರಗಳನ್ನು ನೀಡುವಂತೆ ವ್ಯವಸ್ಥೆ ಮಾಡಬೇಕು. ಇದರ ಜತೆಗೆ ಅಕ್ರಮವಾಗಿ ಕಳ್ಳಭಟ್ಟಿ ಮತ್ತು ಮಧ್ಯ ಮಾರಾಟ ಮಾಡುವವರ ವಿರೋಧ ಕ್ರಮಕೈಗೊಳ್ಳವಂತೆ ಹೇಳಿದೆ.

ಇದೀಗ ಗೋವಾದ ಹೋಟೆಲ್‌ಗಳು ಸರಾಸರಿ ಶೇ. 80 ರಷ್ಟು ಆಕ್ಯುಪೆನ್ಸಿಯನ್ನು ದಾಖಲಿಸುತ್ತಿವೆ. ಹೋಟೆಲ್‌ನವರು ಆಕ್ಯುಪೆನ್ಸಿಯ ಬಗ್ಗೆ ಸಂತೋಷವಾಗಿದ್ದಾರೆ. ಪ್ರವಾಸೋದ್ಯಮವನ್ನು ಉತ್ತೇಜಿಸಲು ರಾಜ್ಯವು ಪ್ರಯತ್ನಗಳನ್ನು ಹೆಚ್ಚಿಸಬೇಕಾಗಿದೆ, ಇದಕ್ಕಾಗಿ ಇಲಾಖೆ ಮತ್ತು ಇತರ ಮಧ್ಯಸ್ಥಗಾರರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಪ್ರವಾಸೋದ್ಯಮ ಸಚಿವರು ಹೇಳಿದ್ದಾರೆ. ಇನ್ನು ಗೋವಾದ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಮೂಲಸೌಕರ್ಯಗಳ ಬಗ್ಗೆ ಹಾಗೂ ಬೀಚ್​​ಗಳಲ್ಲಿ, ಪ್ರವಾಸೋದ್ಯಮ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ದುಡಿಯುತ್ತಿದೆ ಎಂದು ಹೇಳಿದ್ದಾರೆ.

 

ಇದನ್ನು ಓದಿ: Chitradurga: ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ರಾರಾಜಿಸಿದ ನಾಥೂರಾಮ್ ಗೋಡ್ಸೆ ಭಾವಚಿತ್ರ

Leave A Reply

Your email address will not be published.