Dairy farming: ಹಸು, ಎಮ್ಮೆ ಸಾಕಿ ಹೈನುಗಾರಿಕೆ ನಡೆಸೋರಿಗೆ ಭರ್ಜರಿ ಸುದ್ದಿ – ಬೆಳ್ಳಂಬೆಳಗ್ಗೆಯೇ ಸರ್ಕಾರ ಕೊಡ್ತು ಸಖತ್ ಗುಡ್ ನ್ಯೂಸ್ !
Good news for cow and buffalo dairy farmers
Dairy farming : ಹಸು, ಎಮ್ಮೆ ಸಾಕಿ ಹೈನುಗಾರಿಕೆ (Dairy farming) ನಡೆಸೋರಿಗೆ ಭರ್ಜರಿ ಸುದ್ದಿ ಇಲ್ಲಿದೆ. ಬೆಳ್ಳಂಬೆಳಗ್ಗೆಯೇ ಸರ್ಕಾರ ಸಖತ್ ಗುಡ್ ನ್ಯೂಸ್ ಕೊಟ್ಟಿದೆ. ಹೌದು, ಇದೀಗ ಕರ್ನಾಟಕ ರಾಜ್ಯ ಸರ್ಕಾರ ಎಮ್ಮೆ ಮತ್ತು ಹಸು ಖರೀದಿ (cow purchase) ಮಾಡಿ ಹೈನುಗಾರಿಕೆ ಮೂಲಕ ಹೆಚ್ಚು ಆದಾಯ ಗಳಿಸುವಂತೆ (Income) ರೈತರಿಗೆ ಸಬ್ಸಿಡಿ ಸಾಲ (Subsidy loan) ಸೌಲಭ್ಯಗಳನ್ನು ಒದಗಿಸುತ್ತಿದೆ. 75% ವರೆಗೆ ಸರ್ಕಾರ ಸಬ್ಸಿಡಿ ನೀಡುತ್ತಿದೆ.
ಇತ್ತೀಚಿನ ದಿನಗಳಲ್ಲಿ ಉತ್ತಮ ತಳಿಯ ಹಸು ಅಥವಾ ಎಮ್ಮೆ ಖರೀದಿ ಮಾಡಲು ದುಬಾರಿ ಆಗುತ್ತಿರುವ ಕಾರಣ ಹೈನುಗಾರಿಕೆ ಮಾಡುವ ರೈತರಿಗೆ ಸರಿಯಾಗಿ ಹೈನುಗಾರಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇದನ್ನ ಮನಗಂಡ ರಾಷ್ಟ್ರೀಯ ಡೈರಿ ಅಭಿವೃದ್ಧಿ ನಿಗಮ ಮತ್ತು ಡೈರಿ ಸೇವೆ 50 ರಿಂದ 70%ವರೆಗೆ ಹಸು ಖರೀದಿಗೆ ಸಬ್ಸಿಡಿ ನೀಡಲು ನಿರ್ಧರಿಸಿದೆ.
ಹಸು ಖರೀದಿಗೆ ಡೈರಿ ನಿಗಮದ ಬಳಿ ಸಲಹೆ ಪಡೆಯಬಹುದು. ಯಾವ ತಳಿ ಉತ್ತಮ ಎಂಬುದರ ಬಗ್ಗೆ ಅವರು ನಿಮಗೆ ಸಲಹೆ ನೀಡುತ್ತಾರೆ. ಪರಿಶಿಷ್ಟ ಜಾತಿ (SC/ST) ಮತ್ತು ಪಂಗಡದವರಿಗೆ 75% ಹಾಗೂ ಸಾಮಾನ್ಯರಿಗೆ 50% ವರೆಗೆ ಹಸು ಖರೀದಿಗೆ ಸಬ್ಸಿಡಿ ಸಿಗುತ್ತದೆ ಎನ್ನಲಾಗಿದೆ.