Chitradurga: ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ರಾರಾಜಿಸಿದ ನಾಥೂರಾಮ್ ಗೋಡ್ಸೆ ಭಾವಚಿತ್ರ

Chitradurga Nathuram godse poster was shown in Hindu mahaganpati procession Latest News

Chitradurga: ಚಿತ್ರದುರ್ಗದಲ್ಲಿ(Chitradurga)ಇಂದು ನಡೆದ ಹಿಂದೂ ಮಹಾಗಣಪತಿ ಬೃಹತ್ ವಿಸರ್ಜನಾ ಶೋಭಾಯಾತ್ರೆ ಮೆರವಣಿಗೆಯಲ್ಲಿ ನಾಥೂರಾಮ್ ಗೋಡ್ಸೆ ಚಿತ್ರ ಪ್ರದರ್ಶನ ಮಾಡಿರುವ ವಿಚಾರ ವಿವಾದಕ್ಕೆ ಕಾರಣವಾಗಿದೆ.

 

ಹಿಂದೂ ಮಹಾಗಣಪತಿ 21 ದಿನಗಳ ಕಾಲ ಪೂಜೆ ಕೈಂಕರ್ಯಗಳನ್ನು ಮಾಡಲಾಗಿತ್ತು. ಇಂದು ಕೊನೆಯ ದಿನದ ಹಿಂದೂಮಹಾಗಣಪತಿ ಬೃಹತ್ ಶೋಭಾಯಾತ್ರೆ ಮೆರವಣಿಗೆ ನಡೆದಿದೆ. ಶೋಭಾಯಾತ್ರೆಯಲ್ಲಿ ಗಾಂಧೀಜಿ ಹಂತಕ ನಾಥುರಾಮ್ ಗೂಡ್ಸೆ ಚಿತ್ರ ಪ್ರದರ್ಶನ ಮಾಡಿರುವ ಹಿನ್ನೆಲೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಪರವಿರೋಧದ ಚರ್ಚೆಗಳು ಶುರುವಾಗಿವೆ.

ಚಿತ್ರದುರ್ಗದಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ಪ್ರತಿಷ್ಠಾಪಿಸಿದ ಹಿಂದೂ‌ ಮಹಾಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಕರ್ನಾಟಕದಾದ್ಯಂತ ಸಾಗರೋಪಾತಿಯಲ್ಲಿ ಜನರು ತುಂಬಿದ್ದರು. ಈ ಮೆರವಣಿಗೆಯಲ್ಲಿ ಕೆಲವರು ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ಚಿತ್ರ ಪ್ರದರ್ಶಿಸಲಾಗಿದೆ. ಈ ನಡುವೆ, ಕೆಲವರು ಕೋಮು ಘರ್ಷಣೆಯಲ್ಲಿ ಹತ್ಯೆಯಾದ ಶರತ್ ಮಡಿವಾಳ್ ಶಿವಮೊಗ್ಗದ ಮೃತ ಹರ್ಷನ ಭಾವಚಿತ್ರ ಪ್ರದರ್ಶಿಸಿದ ಘಟನೆ ನಡೆದಿದೆ. ಈ ನಡುವೆ, ಕೆಲವರು ನಾಥೂರಾಮ್ ಗೋಡ್ಸೆ ಭಾವಚಿತ್ರ ತೋರಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

 

ಇದನ್ನು ಓದಿ: ಮದುವೆಯ ದಿನದಂದೇ ವಧು ಕಂಡಳು ವರನ ಅರೆ ನಗ್ನ ರೂಪ! ಮೋಸದಾಟಕ್ಕೆ ಕುಗ್ಗಿ ಹೋದ ವಧು ಮಾಡಿದ್ದೇನು ಗೊತ್ತೇ?

Leave A Reply

Your email address will not be published.