KSRTC: ಇನ್ಮುಂದೆ ಈ ಬಸ್ ಗಳಲ್ಲಿ ರಾಜ್ಯದಲ್ಲಿ ಮಹಿಳೆರಿಗೆ ಉಚಿತ ಪ್ರಯಾಣ ಇರೋದಿಲ್ಲ !!
No more free travel for women in these KSRTC buses in the state
KSRTC: ಇಡೀ ವಿಶ್ವದಲ್ಲೇ ಕರ್ನಾಟಕದ KSRTC ಬಸ್ ಗಳು ಪ್ರಸಿದ್ಧಿ ಪಡೆದಿವೆ. ಕೆಲವು ತಿಂಗಳ ಹಿಂದಷ್ಟೇ ಒಂದರ ಹಿಂದೆ ಒಂದಂತೆ ಹಲವು ಪ್ರಶಸ್ತಿಗಳನ್ನು ಸಂಸ್ಥೆ ಮುಡಿಗೇರಿಸಿಕೊಂಡಿದೆ. ಈ ಬೆನ್ನಲ್ಲೇ ಕೆಎಸ್‌ಆರ್‌ಟಿಸಿಯಲ್ಲಿ ಇಂದಿನಿಂದ ಪಲ್ಲಕ್ಕಿ ಉತ್ಸವ ಆರಂಭವಾಗಲಿದೆ.
ಹೌದು, ಪಲ್ಲಕ್ಕಿ ಬಸ್‌ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah)ಅವರು ವಿಧಾನಸೌಧದ ಮುಂಭಾಗದಲ್ಲಿ ಅಧಿಕೃತವಾಗಿ ಚಾಲನೆ ನೀಡಿದರು. 148 ಬಸ್‌ಗಳ ಪೈಕಿ 40 ನಾನ್ ಎಸಿ ಸ್ಲೀಪರ್ ಬಸ್ಗಳಾಗಿವೆ. ಕೆಎಸ್ಸಾರ್ಟಿಸಿಯಲ್ಲಿ ಇದೇ ಮೊದಲ ಬಾರಿಗೆ ನಾನ್ ಎಸಿ ಬಸ್‌ಗೆ ಬ್ಯಾಂಡ್ ಹೆಸರನ್ನು ಇಟ್ಟುಸೇವೆ ನೀಡಲಾಗುತ್ತಿದೆ.
ಅಂದಹಾಗೆ 40 ನಾನ್ ಎಸಿ ಸ್ಲೀಪರ್ ಹಾಗೂ 100 ನಗರ ಸಾರಿಗೆ ಬಸ್ಸುಗಳು, ಅಶೋಕ ಲೇಲ್ಯಾಂಡ್ ಕಂಪನಿಗೆ ಸೇರಿದ್ದು, ನಾಲ್ಕು ನಾನ್ ಎಸಿ ಸ್ಲೀಪರ್, ನಾಲ್ಕು ಎಸಿ ಸ್ಲೀಪರ್ ಬಸ್‌ಗಳು ಟಾಟಾ ಕಂಪನಿಯದ್ದಾಗಿವೆ. ಈ ಪೈಕಿ 44 ಎಸಿ ಸ್ಲೀಪರ್, ನಾಲ್ಕು ನಾನ್ ಎಸಿ ಸ್ಲೀಪರ್ ಬಸ್ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಇರುವುದಿಲ್ಲ. ಇದನ್ನು ಹೊರತುಪಡಿಸಿ ಉಳಿದ 100 ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿದೆ.
ಪಲ್ಲಕ್ಕಿ ವಿಶೇಷತೆ ಏನು?
* ಬಿಎಸ್-6 ತಂತ್ರಜ್ಞಾನದ ಮಾದರಿಯ ಎಚ್.ಪಿ.ಇಂಜಿನ್ ಅಳವಡಿಕೆ
* 11.3 ಮೀಟರ್ ಉದ್ದವಿರಲಿದೆ ನಾನ್ ಎಸಿ ಬಸ್
* ಹೈಟೆಕ್ ವಿನ್ಯಾಸದ 30 ಸ್ಲೀಪರ್ ಬರ್ತ್ ಸೀಟ್ಗಳು
* ಪ್ರತಿ ಸೀಟಿಗೂ ಮೊಬೈಲ್ ಹಾಗೂ ಲ್ಯಾಪ್ ಟಾಪ್ಗಳ ಚಾರ್ಜಿಂಗ್ ಹಾಗೂ ಮೊಬೈಲ್ ಸ್ಟ್ಯಾಂಡ್ ವ್ಯವಸ್ಥೆ
* ಸೀಟ್ ನಂಬರ್ ಮೇಲೆ ಎಲ್ಇಡಿ ಅಳವಡಿಕೆ
* ಓದಲು ಉತ್ತಮ ಬೆಳಕಿನ ಎಲ್ಇಡಿ ಲೈಟ್ ಅಳವಡಿಕೆ
* ಬಸ್ನಲ್ಲಿ ಆಡಿಯೋ ಸ್ವೀಕರ್ಗಳ ಮೂಲಕ ಜನರಿಗೆ ಮಾಹಿತಿ ನೀಡುವ ವ್ಯವಸ್ಥೆ
* ಡಿಜಿಟಲ್ ಗಡಿಯಾರ ಜತೆಗೆ ಎಲ್ಇಡಿ ಫ್ಲೋರ್
* ಪ್ರತಿ ಪ್ರಯಾಣಿಕರಿಗೆ ಚಪ್ಪಲಿ ಇಡಲು ಸ್ಥಳಾವಕಾಶದ ವ್ಯವಸ್ಥೆ
* ಪ್ರಯಾಣಿಕರಿಗೆ ತಲೆದಿಂಬಿನ ವ್ಯವಸ್ಥೆ
* ಚಾಲಕರಿಗೆ ಸಹಾಯವಾಗಲೂ ಬಸ್ ಹಿಂಭಾಗದಲ್ಲಿ ಹೈಟೆಕ್ ಕ್ಯಾಮರಾ ಅಳವಡಿಕೆ
* 40 ಬಸ್‌ಗಳ ಪೈಕಿ 30 ಬಸ್‌ಗಳು ರಾಜ್ಯದೊಳಗೆ, ಉಳಿದ 10 ಬಸ್‌ಗಳು ಬೆಂಗಳೂರಿನಿಂದ ಹೊರರಾಜ್ಯಗಳಿಗೆ ಸಂಚರಿಸಲಿವೆ.
ಕೆಎಸ್‌ಆರ್‌ಟಿಸಿಯಲ್ಲಿ ನಾನ್ ಎಸಿ ಸ್ಲೀಪರ್ ಬಸ್‌ಗಳು ಆರಂಭವಾಗಿ ಸಾಕಷ್ಟು ವರ್ಷಗಳಾಗಿದ್ದು, ಬಸ್‌ಗಳಿಗೆ ಯಾವುದೇ ಹೆಸರಿಟ್ಟು ಬ್ರ್ಯಾಂಡಿಂಗ್ ಮಾಡಿರಲಿಲ್ಲ. ಸದ್ಯ ಪಲ್ಲಕ್ಕಿ ಎಂಬ ಬ್ರ್ಯಾಂಡ್ ನೇಮ್ ಇಡಲಾಗಿದೆ. ಈ ಹೆಸರನ್ನು ಸ್ವತಃ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.