Canada PM Justin Trudeau:ದೇಶವನ್ನೇ ಹಾಳು ಮಾಡ್ತಿದ್ದೀಯಾ, ನಿನಗೆ ಹ್ಯಾಂಡ್‌ಶೇಕ್ ಬೇರೆ ಕೇಡು !! ಕೆನಡಾ ಪ್ರಧಾನಿಗೆ ಹೀಗಂದಿದ್ಯಾರು ?!

International news common man insulted for Canada PM Justin Trudeau latest news

Canada PM Justin Trudeau: ಟೊರೊಂಟೊದಲ್ಲಿ ಸಾಮಾನ್ಯ ವ್ಯಕ್ತಿಯೊಬ್ಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ (Canada PM Justin Trudeau) ಜೊತೆಗೆ ವಾಗ್ವಾದ ನಡೆಸಿದ ವೀಡಿಯೋ ವೈರಲ್ ಆಗಿದೆ.

 

ಪ್ರಧಾನಿ ಜಸ್ಟಿನ್ ಟ್ರೂಡೋ ಅವರು ಕೈ ಬೀಸುತ್ತಾ ತಮ್ಮ ಬೆಂಬಲಿಗರೊಂದಿಗೆ ಬರುವಾಗ ಮುಂದಿನಿಂದ ಬರುವವರಿಗೆ ಶುಭಾಶಯ ಹೇಳುತ್ತಾ ವ್ಯಕ್ತಿಯೊಬ್ಬನಿಗೆ ಕೈ ಕುಲುಕಲು ಮುಂದಾಗುತ್ತಾರೆ. ಈ ಸಂದರ್ಭ ಆ ವ್ಯಕ್ತಿ ನಾನು ನಿನ್ನೊಂದಿಗೆ ಹ್ಯಾಂಡ್ ಶೇಕ್ ಮಾಡಲಾರೆ ಎಂದು ಹೇಳಿದ್ದಾರೆ. ಈ ಘಟನೆ ಟೊರೊಂಟೊದಲ್ಲಿ (Toronto) ನಡೆದಿದ್ದು, ಟ್ರೂಡೋ ಅವರು ತಮ್ಮ ಬೆಂಬಲಿಗರಿಗೆ ಶೇಕ್ ಹ್ಯಾಂಡ್ (Shake Hands) ಮಾಡುತ್ತಿದ್ದ ಸಂದರ್ಭ ಒಬ್ಬ ವ್ಯಕ್ತಿ ಕೈಕುಲುಕಲು ನಿರಾಕರಿಸಿದ್ದು ಮಾತ್ರವಲ್ಲದೇ, ಜಸ್ಟೀನ್ ಸರ್ಕಾರ (Canada Government) ಹೇಗೆ ಜನರಿಗೆ ಹೊರೆಯಾಗಿದೆ ಎಂಬ ವಿವರಣೆ ಕೂಡ ನೀಡಿದ್ದಾನೆ.

”ನೀನು ದೇಶವನ್ನು ನಾಶ ಮಾಡ್ತಾ ಇದ್ದೀಯಾ ನಾನು ನಿನಗೆ ಹ್ಯಾಂಡ್ ಶೇಕ್ ಮಾಡಲ್ಲ ಹೋಗು…” ಎಂದು ಕೆನಡಾದ ವ್ಯಕ್ತಿಯೊಬ್ಬರು, ತಮ್ಮದೇ ಪ್ರಧಾನಿ ಜಸ್ಟಿನ್ ಟ್ರೂಡೋ (Canada PM Justin Trudeau) ಅವರಿಗೆ ಹೇಳಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ(Viral Video). ಆಗ ಟ್ರೂಡೋ, ಯಾಕೆ ಸರ್..? ಎಂದು ಪ್ರಶ್ನೆ ಮಾಡಿದ್ದು, ಆಗ ವ್ಯಕ್ತಿ, ನೀನು ಇಡೀ ದೇಶವನ್ನು ನಾಶ ಮಾಡುತ್ತಿದ್ದೀಯಾ? ದೇಶದಲ್ಲಿ ಯಾರಾದರೂ ಮನೆಯನ್ನು ಖರೀದಿಸಲು ಸಾಧ್ಯವಾಗುತ್ತಿದೆಯೇ?ನೀವು ಜನರ ಮೇಲೆ ಕಾರ್ಬನ್ ತೆರಿಗೆ ಹೇರುತ್ತಿದ್ದೀರಿ ಎಂದು ವ್ಯಕ್ತಿ ಪ್ರಶ್ನೆ ಮಾಡಿದ್ದಾನೆ.

ಈ ಪ್ರಶ್ನೆಗೆ ಉತ್ತರಿಸಿದ ಟ್ರುಡೋ, ವಸತಿ ವಿಷಯವು ಸಂಸದೀಯ ಸರ್ಕಾರದ ಜವಾಬ್ದಾರಿಯಲ್ಲ ಎಂದು ಹೇಳಿ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಇದರ ಜೊತೆಗೆ, ಟ್ರುಡೋ, ಕಾರ್ಬನ್ ತೆರಿಗೆಯಿಂದ ನಾವು ಏನು ಮಾಡುತ್ತಿದ್ದೇವೆ ಎಂಬುದು ನಿಮಗೆ ತಿಳಿದಿದೆಯೇ ?ಮಾಲಿನ್ಯಕ್ಕೆ ಬೆಲೆ ಕಟ್ಟಿ, ಆ ಹಣವನ್ನು ನಿಮ್ಮಂತಹ ಕುಟುಂಬಗಳಿಗೆ ಮರಳಿ ನೀಡುತ್ತಿದ್ದೇವೆ ಎಂದು ಸಮರ್ಥನೆ ನೀಡುವ ಪ್ರಯತ್ನ ಮಾಡಿದ್ದಾರೆ.

 

ಇದನ್ನು ಓದಿ: Sonu Gowda: ಮತ್ತೆ ಮಾಲ್ಡೀವ್ಸ್ ನ ಹಾಟ್ ಫೋಟೋಸ್‌ ಹರಿಬಿಟ್ಟ ಸೋನು ಗೌಡ: ಚಡ್ಡಿ ಎಲ್ಲಮ್ಮ? ಎಂದ ಫ್ಯಾನ್ಸ್

Leave A Reply

Your email address will not be published.