Shikhar Dhawan: ‘ಅದು’ ಬೇಕೇ ಬೇಕೆಂದು ಖ್ಯಾತ ಟೀಂ ಇಂಡಿಯಾ ಆಟಗಾರನಿಗೆ ಪತ್ನಿಯಿಂದಲೇ ಚಿತ್ರಹಿಂಸೆ- ಕಾಟ ತಾಳಲಾರದೆ ಡೈವೋರ್ಸ್ ಕೊಟ್ಟ ಧವನ್ !!

Sports news cricketer shikhar Dhawan granted divorce from his wife latest news

Shikhar Dhawan: ಟೀಂ ಇಂಡಿಯಾ (Team India) ಕಂಡ ಬೆಸ್ಟ್‌ ಓಪನರ್‌ (Best Opener) ಶಿಖರ್‌ ಧವನ್‌ (Shikhar Dhawan) ಅವರು ಕ್ರಿಕೆಟ್‌ನಲ್ಲಿ ಗಬ್ಬರ್‌ ಅಂತ ಕರೆಸಿಕೊಂಡಿದ್ದು ಅಲ್ಲದೇ, ಈತ ಬ್ಯಾಟಿಂಗ್‌ಗೆ ಬಂದ್ರೆ ಬೌಲರ್‌ಗಳು ಬೌಲಿಂಗ್‌ ಮಾಡುವುದಕ್ಕೆ ಭಯ ಪಡುತ್ತಿದ್ದರು. ಆದರೆ ಇಂದು ಟೀಂನಲ್ಲಿ ಶಿಖರ್‌ ಧವನ್‌ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ.

 

ಇತ್ತೀಚೆಗೆ ಕ್ರಿಕೆಟಿಗರ ಬದುಕಿನಲ್ಲಿ ಇತ್ತೀಚೆಗೆ ಡಿವೋರ್ಸ್ ಕೇಸ್‌ಗಳು ಹೆಚ್ಚುತ್ತಿದೆ. ಇದೀಗ ಶಿಖರ್‌ ಧವನ್‌ ಬದುಕಲ್ಲೂ ಇದೇ ನಡೆದಿದೆ. ಶಿಖರ್ ಧವನ್ ಅವರಿಗೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ (Family Court) ಪತ್ನಿ ಆಯೇಷಾ ಮುಖರ್ಜಿಯಿಂದ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಂಗಿಕರಿಸಿದೆ.

2012 ರಲ್ಲಿ ಶಿಖರ್ ಧವನ್ ಹಾಗೂ ಆಯೇಷಾ ಮುಖರ್ಜಿ ಮದುವೆಯಾಗಿದ್ದರು. ಈ ದಂಪತಿಗೆ ಜೋರಾವರ್ ಎಂಬ ಮಗನಿದ್ದಾನೆ. ಆಯೇಷಾಗೆ ಇದು ಎರಡನೇ ಮದುವೆಯಾಗಿದ್ದು, ಶಿಖರ್ ಗಿಂತ 10 ವರ್ಷ ದೊಡ್ಡವರು. ಆಯೇಷಾ ಮತ್ತು ಆಕೆಯ ಮೊದಲ ಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನ್ಯಾಯಾಲಯವು ಧವನ್‌ಗೆ ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ತನ್ನ ಮಗನನ್ನು ಭೇಟಿಯಾಗುವ ಹಕ್ಕನ್ನು ನೀಡಿದ್ದು, ಮಗನೊಂದಿಗೆ ವೀಡಿಯೊ ಕರೆ ಮೂಲಕ ಮಾತುಕತೆ ನಡೆಸುವುದಕ್ಕೂ ಅನುಮತಿ ನೀಡಿದೆ.

ಮದುವೆಗೂ ಮುಂಚೆ ಶಿಖರ್‌ ಧವನ್‌ ಜೊತೆ ಭಾರತದಲ್ಲೇ ವಾಸಿಸುವುದಕ್ಕೆ ಆಯೇಷಾ ಒಪ್ಪಿಕೊಂಡಿದ್ದರು. ಮದುವೆಯಾದ ಬಳಿಕ ಆಯೇಷಾ ಇಲ್ಲಿ ಇರೋದಕ್ಕೆ ತಗಾದೆ ತೆಗೆದಿದ್ದರು. ಮದುವೆಯಾಗಿ ಒಂದು ಗಂಡು ಮಗು ಆದ ಮೇಲೆ ಆಕೆ ಆಸ್ಟ್ರೇಲಿಯಾದಲ್ಲೇ ವಾಸಿಸುವುದಾಗಿ ಶಿಖರ್‌ ಧವನ್‌ಗೆ ಒತ್ತಡ ಹೇರಿದ್ದರು. ಮಗನನ್ನು ಕೂಡ ಆಸ್ಟ್ರೇಲಿಯಾಗೇ ಕರೆದುಕೊಂಡು ಹೋಗಿದ್ದರು. ಇತ್ತ ಶಿಖರ್‌ ಏಕಾಂಕಿಯಾಗಿ ಜೀವನ ನಡೆಸುತ್ತಿದ್ದರು.

ಶಿಖರ್‌ ಧವನ್‌ನ ಆಸ್ಟ್ರೇಲಿಯನ್ ಆಸ್ತಿಗಳಲ್ಲಿ 99% ರಷ್ಟು ಮಾಲೀಕತ್ವವನ್ನು ಆಯೇಷಾ ಬೇಡಿಕೆಯಿಟ್ಟು ಸ್ವಾಧೀನಪಡಿಸಿಕೊಂಡಿದ್ದಾರೆ.
ಇಷ್ಟಾದರೂ ಸುಮ್ಮನಾಗದ ಆಯೇಷಾ ಶಿಖರ್‌ ಧವನ್‌ ಬಗ್ಗೆ ಸಾಕಷ್ಟು ದೂರು ನೀಡಿದ್ದರು. ಬಿಸಿಸಿಐಗೂ ಈ ಬಗ್ಗೆ ದೂರು ನೀಡಿದ್ದರು. ಶಿಖರ್‌ ಧವನ್‌ಗೆ ಅವಮಾನಿಸುವ ಕೆಲಸವನ್ನು ಮಾಡುತ್ತಿದ್ದರು. ಆದರೂ ಯಾರಿಗೂ ಹೇಳಲಾಗದ ಪರಿಸ್ಥಿತಿಯಲ್ಲಿ ಶಿಖರ್‌ ಧವನ್‌ ಜೀವನ ನಡೆಸುತ್ತಿದ್ದರು.

ನಂತರ 2020 ರಲ್ಲಿ, ಆಯೇಷಾ ಮತ್ತು ಅವರ ಮಗ ದೀರ್ಘಾವಧಿಯ ವಾಸ್ತವ್ಯಕ್ಕಾಗಿ ಭಾರತಕ್ಕೆ ಬಂದರು. ಆದರೆ ಆಯೇಷಾ ಹಾಗೂ ಮೊದಲ ಪತಿಯ ಇಬ್ಬರು ಹೆಣ್ಣುಮಕ್ಕಳು ಆಸ್ಟ್ರೇಲಿಯಾದಲ್ಲಿಯೇ ಇದ್ದರು. ಆಕೆಯ ಹಿಂದಿನ ಮದುವೆಯಿಂದ ತನ್ನ ಹೆಣ್ಣುಮಕ್ಕಳಿಗೆ ಮಾಸಿಕ AU $15,500 ಕಳುಹಿಸುವಂತೆ ಧವನ್‌ಗೆ ಟಾರ್ಚರ್‌ ನೀಡುತ್ತಿದ್ದರಂತೆ.

ವಿಚ್ಛೇದನ ಅರ್ಜಿಯಲ್ಲಿ ಪತ್ನಿ ವಿರುದ್ಧ ಧವನ್ ಮಾಡಿರುವ ಎಲ್ಲಾ ಆರೋಪಗಳನ್ನು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಹರೀಶ್ ಕುಮಾರ್ ಸಾಕ್ಷಿಗಳ ಆಧಾರದ ಮೇಲೆ ನ್ಯಾಯ ಸಮ್ಮತವಾಗಿದೆ ಎಂದು ತೀರ್ಪು ನೀಡಿದ್ದಾರೆ. ಆದರೆ ಧವನ್ ಅವರ ಪತ್ನಿ ಮೇಲಿನ ಆರೋಪಗಳ ವಿರುದ್ಧ ಸಮರ್ಥಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಕೌಟುಂಬಿಕ ನ್ಯಾಯಾಲಯ ಹೇಳಿದೆ. ತಾನು ತನ್ನ ಪತ್ನಿಯಿಂದ ದೂರವಾಗಬೇಕು ಎಂದು ಧವನ್ ವಿಚ್ಛೇದನ ಅರ್ಜಿಯಲ್ಲಿ ಹೇಳಿದ್ದರು. ಆದರೆ ದಂಪತಿಯ ಮಗನ ಶಾಶ್ವತ ಬಂಧನದ ಕುರಿತು ಯಾವುದೇ ಆದೇಶವನ್ನು ನೀಡಲು ನ್ಯಾಯಾಲಯ ನಿರಾಕರಿಸಿದೆ.

ಆದರೆ ಧವನ್‍ಗೆ ತನ್ನ ಮಗನನ್ನು ಭೇಟಿ ಮಾಡಲು ಮತ್ತು ವೀಡಿಯೋ ಕರೆ ಮೂಲಕ ಮಾತನಾಡುವ ಹಕ್ಕನ್ನು ಕೋರ್ಟ್ ನೀಡಿದೆ. ಪ್ರಸ್ತುತ ಆಯೇಷಾ ಅವರು ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ಎರಡರ ಪೌರತ್ವವನ್ನು ಅವರು ಹೊಂದಿದ್ದಾರೆ.

ಇದನ್ನೂ ಓದಿ: Raj Kundra: ಬಟ್ಟೆ ತೆಗೆಯೋ ಬಗ್ಗೆ ಕಾಮಿಡಿ ಮಾಡಿದ ರಾಜ್ ಕುಂದ್ರ! ವೇದಿಕೆಯಲ್ಲೇ 18+ ಜೋಕ್ ಹೇಳಿದ ಶಿಲ್ಪಾ ಶೆಟ್ಟಿ ಪತಿ

Leave A Reply

Your email address will not be published.