Home National Shocking News For BPL Card Holders: ನೀವು BPL ರೇಷನ್ ಕಾರ್ಡ್ ಹೊಂದಿದ್ದೀರಾ ?!...

Shocking News For BPL Card Holders: ನೀವು BPL ರೇಷನ್ ಕಾರ್ಡ್ ಹೊಂದಿದ್ದೀರಾ ?! ಹಾಗಿದ್ರೆ ಸರ್ಕಾರದಿಂದ ಬಂತು ನೋಡಿ ಶಾಕಿಂಗ್ ನ್ಯೂಸ್ !!

Hindu neighbor gifts plot of land

Hindu neighbour gifts land to Muslim journalist

Ration Card: ರಾಜ್ಯ ಹಾಗೂ ಕೇಂದ್ರ ಸರ್ಕಾರ ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಏಳಿಗೆಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಿ ಜನರಿಗೆ ಬೆಂಬಲವಾಗಿ ನಿಂತಿವೆ. ಇವುಗಳಲ್ಲಿ ಪಡಿತರ ವಿತರಣೆ(Ration Card)ಕೂಡ ಒಂದಾಗಿದೆ. ಇದೀಗ, ‘BPL ಕಾರ್ಡ್’ದಾರರಿಗೆ ಶಾಕಿಂಗ್ ನ್ಯೂಸ್ ಪ್ರಕಟವಾಗಿದೆ.

ಕಾಂಗ್ರೆಸ್ (Congress) ಐದು ಗ್ಯಾರೆಂಟಿಗಳ ಮೂಲಕ ಐತಿಹಾಸಿಕ ಗೆಲುವು ಸಾಧಿಸಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಚುನಾವಣಾ ಪೂರ್ವ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಶತಾಯಗತಾಯ ಪ್ರಯತ್ನ ನಡೆಸು ತ್ತಿದೆ.ರಾಜ್ಯ ಸರ್ಕಾರದ ಖಾತರಿ ಯೋಜನೆಯ ಪ್ರಯೋಜನ ಪಡೆಯಲು ಮುಂದಿನ ದಿನಗಳಲ್ಲಿ ಹೆಚ್ಚಿನ ಫಲಾನುಭವಿಗಳು ಸೇರ್ಪಡೆಯಾಗುವ ನಿರೀಕ್ಷೆಯಿದೆ. ಬಡತನ ರೇಖೆಗಿಂತ ಕೆಳಗಿನ ಕಾರ್ಡ್‌ಗಳ ದುರುಪಯೋಗ ತಡೆಯಲು ಸರ್ಕಾರ ಮಹತ್ತರ ಕ್ರಮ ಕೈಗೊಳ್ಳಲು ಮುಂದಾಗಿದೆ. ಹೀಗಾಗಿ, ಬಿಪಿಎಲ್ ಕಾರ್ಡ್‌ಗಳನ್ನು(BPL Card)ವಿಭಜಿಸಲು ಅನುವು ಮಾಡಿಕೊಡದಂತೆ ಹಣಕಾಸು ಇಲಾಖೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸೂಚಿಸಿದೆ.

ಸದ್ಯ, ಕರ್ನಾಟಕದಲ್ಲಿ 1.2 ಕೋಟಿ ಬಿಪಿಎಲ್ ಕಾರ್ಡ್‌ಗಳಿದ್ದು ಈ ಮೂಲಕ ಅನ್ನಭಾಗ್ಯ, ಗೃಹಲಕ್ಷ್ಮಿ (Annabhagya, Gruhalakshmi) ಅಡಿಯಲ್ಲಿ ಕುಟುಂಬದ ಮುಖ್ಯಸ್ಥರಿಗೆ ಹಣ ಒದಗಿಸಲಾಗುತ್ತಿದೆ.ಹೀಗಾಗಿ, ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಬಿಪಿಎಲ್ ಕಾರ್ಡ್‌ಗಳನ್ನು (BPL Card) ವಿಭಜಿಸಲು ಅನುವು ಮಾಡಿಕೊಡದಂತೆ ಹಣಕಾಸು ಇಲಾಖೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಒತ್ತಾಯ ಮಾಡಿದೆ. ಈಗಿರುವ ಮಾನ್ಯ ಕಾರ್ಡ್‌ನಲ್ಲಿ ಈಗಾಗಲೇ ಹೆಸರಿರುವ ಕುಟುಂಬದ ಸದಸ್ಯರಿಗೆ ಹೊಸ ಕಾರ್ಡ್‌ಗಳನ್ನು ಫ್ರೀಜ್ ಮಾಡುವಂತೆ ನಾವು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯನ್ನು ಒತ್ತಾಯ ಮಾಡಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೊಸ ಪಡಿತರ ಚೀಟಿಗಾಗಿ ಬಾಕಿ ಉಳಿದಿರುವ 2.96 ಲಕ್ಷ ಅರ್ಜಿಗಳನ್ನು ಇತ್ಯರ್ಥ ಮಾಡಲು ಅಧಿಕಾರಿಗಳಿಗೆ ಸೆ.. 29 ರಂದು ಸರ್ಕಾರಿ ಆದೇಶ ನೀಡಿದೆ.

ಇದನ್ನೂ ಓದಿ: Bangalore Crime: ಪಿಯು ಹುಡುಗನಿಗೆ ಹೈಸ್ಕೂಲ್ ಟೀಚರ್ ಮೇಲೆ ಲವ್! ಓದು ಬಿಟ್ಟು ಪಾರ್ಕ್ ಗೆ ಹೋದರು ಲವರ್ಸ್, ಭಾವೀ ಗಂಡನ ಕೈಗೆ ಸಿಕ್ಕಿ ಬಿದ್ದ ಇಬ್ಬರು, ಮುಂದೇನಾಯ್ತು?