Home News Death News: ಪುಸ್ತಕಕ್ಕಾಗಿ ಬ್ಯಾಗಿಗೆ ಕೈ ಹಾಕಿ ಪ್ರಾಣ ಬಿಟ್ಟ ವಿದ್ಯಾರ್ಥಿ ?! ಕಾರಣವೇನು ಗೊತ್ತಾ?

Death News: ಪುಸ್ತಕಕ್ಕಾಗಿ ಬ್ಯಾಗಿಗೆ ಕೈ ಹಾಕಿ ಪ್ರಾಣ ಬಿಟ್ಟ ವಿದ್ಯಾರ್ಥಿ ?! ಕಾರಣವೇನು ಗೊತ್ತಾ?

Death News

Hindu neighbor gifts plot of land

Hindu neighbour gifts land to Muslim journalist

Death News: ಆಂಧ್ರಪ್ರದೇಶದಲ್ಲಿ ಪ್ರಕಾಶಂ ಜಿಲ್ಲೆಯ ಮಾರ್ಕಪುರಂ ಮಂಡಲದ ರಾಯವರಂ ZDP ಪ್ರೌಢಶಾಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿ ಪಕ್ಕದಲ್ಲಿದ್ದ ಪುಸ್ತಕದ ಚೀಲಕ್ಕೆ ಕೈ ಹಾಕಿ ಜೀವ ಕಳೆದುಕೊಂಡ ಘಟನೆ ವರದಿಯಾಗಿದೆ.ಮೃತ(Death)ದುರ್ದೈವಿಯನ್ನು ರವಿಕಿರಣ್ (14)ಎನ್ನಲಾಗಿದ್ದು, ಮಾರ್ಕಪುರಂ ಮಂಡಲದ ನಾಯ್ಡುಪಲ್ಲಿ ದಲಿತ ಕಾಲೋನಿಯ ನಿವಾಸಿಯಾಗಿದ್ದು, ಚೇಳು ಕಡಿತದಿಂದ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

ಶಾಲೆ ಮುಗಿದ ನಂತರ ರವಿಕಿರಣ್ ಪುಸ್ತಕಗಳನ್ನು ತೆಗೆಯಲು ಹೊರಟಾಗ ಬ್ಯಾಗ್‌ನೊಳಗೆ ಚೇಳು ಕಚ್ಚಿದೆ. ಈ ವಿಚಾರ ತಿಳಿದ ಶಾಲಾ ಮುಖ್ಯೋಪಾಧ್ಯಾಯ ತೋಟ ರಾಮಕೃಷ್ಣ ಅವರು ವಿದ್ಯಾರ್ಥಿ ರವಿಕಿರಣ್‌ನನ್ನು ಮಾರ್ಕಾಪುರದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪ್ರಥಮ ಚಿಕಿತ್ಸೆಯ ಬಳಿಕ ಉತ್ತಮ ಚಿಕಿತ್ಸೆಗಾಗಿ ಗುಂಟೂರು ಜಿಜಿಎಚ್‌ಗೆ ರವಾನಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭ ಗುರುವಾರ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾರ್ಕಾಪುರ ಗ್ರಾಮಾಂತರ ಎಸ್.ಎಸ್.ವೆಂಕಟೇಶ್ವರ ನಾಯ್ಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

ಇದನ್ನು ಓದಿ: Puttur: ದೈವರಾಧನೆ ವೇದಿಕೆಯಲ್ಲಿ ಪ್ರದರ್ಶನದ ಕಲೆಯಲ್ಲ – ನಂಬಿಕೊಂಡು ಬಂದ ವ್ಯವಸ್ಥೆಗೆ ಅಪಹಾಸ್ಯ ಸಲ್ಲದು !