Bar at Home: ಮದ್ಯಪ್ರಿಯರಿಗೊಂದು ಭರ್ಜರಿ ಸಿಹಿ ಸುದ್ದಿ! ಇನ್ನು ಮನೆಯಲ್ಲಿ ಬಾರ್ ತೆರೆಯಬಹುದು, ಏನಿದು ಹೊಸ ಸುದ್ದಿ ಅಂತೀರಾ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!
national news uttarakhand news people can open bar at open latest news
Bar at Home: ಮದ್ಯಪ್ರಿಯರಿಗೆ ರಾಜ್ಯ ಸರಕಾರವೊಂದು ಭರ್ಜರಿ ಗಿಫ್ಟ್‌ವೊಂದನ್ನು ನೀಡಿದೆ. 2023-24 ರ ಅಬಕಾರಿ ನೀತಿಯ ಪ್ರಕಾರ ಉತ್ತರಾಖಂಡದ ಮದ್ಯಪ್ರಿಯರಿ ಬಗ್ಗೆ ವಿಶೇಷ ಗಮನ ನೀಡಲಾಗಿದ್ದು, ಈ ರಾಜ್ಯದ ಜನರು ತಮ್ಮ ತಮ್ಮ ಮನೆಗಳಲ್ಲಿ ತಮ್ಮ ಇಷ್ಟದ ಮದ್ಯವನ್ನು ದೊಡ್ಡ ಪ್ರಮಾಣದಲ್ಲಿ ಇಟ್ಟುಕೊಳ್ಳಲು ರಾಜ್ಯ ಸರಕಾರ ಅನುಮತಿ ನೀಡಿದೆ. ಆದರ ಈ ಕೆಲಸ ಮಾಡಲು ಅವರು ಮೊದಲು ಪರವಾನಗಿ ತೆಗೆದುಕೊಳ್ಳಬೇಕು. ಅನಂತರ ಅವರು ತಮ್ಮ ಮನೆಯಲ್ಲಿ ಬಾರ್ (Bar at Home) ತೆರೆಯಬಹುದು. ಈ ರಾಜ್ಯದ ಜನರು ಸುಮಾರು ಐವತ್ತು ಲೀಟರ್‌ವರೆಗೆ ಮದ್ಯವನ್ನು ಇಡಲು ಅನುಮತಿಯನ್ನು ಸರಕಾರ ನೀಡಿದೆ.
ಈ ಪರವಾನಗಿಗಾಗಿ, ಪರವಾನಗಿದಾರರು ವಾರ್ಷಿಕವಾಗಿ 12,000 ರೂ.ಗಳನ್ನು ಅಬಕಾರಿ ಇಲಾಖೆಗೆ ಪಾವತಿಸಬೇಕಾಗುತ್ತದೆ.
ಈ ಘೋಷಣೆಯ ನಂತರ ಮನೆಗಳಲ್ಲಿ ಬಾರ್ ಮಾಡಲು ಹಲವು ಅರ್ಜಿಗಳು ಬರಲು ಪ್ರಾರಂಭವಾಗಿದೆ ಎಂದು ವರದಿಯಾಗಿದೆ. 50 ಲೀಟರ್ ಮದ್ಯದಲ್ಲಿ 9 ಲೀಟರ್ ದೇಶ ನಿರ್ಮಿತ ಮದ್ಯ, 18 ಲೀಟರ್ ವಿದೇಶಿ ಮದ್ಯ, 9 ಲೀಟರ್ ವೈನ್ ಮತ್ತು 15.6 ವರೆಗೆ ಬಿಯರ್ ಇಟ್ಟುಕೊಳ್ಳಲು ಅನುಮತಿ ನೀಡಲಾಗಿದೆ. ಮನೆಯ ಬಾರ್‌ನಲ್ಲಿ ಸಿವಿಲ್ ಮದ್ಯವನ್ನು ಮಾತ್ರ ಇಡಡಲು ಅನುಮತಿ ನೀಡಲಾಗಿದೆ.
ಅಬಕಾರಿ ನೀತಿ 2023-24ರ ಅಡಿಯಲ್ಲಿ, ಒಬ್ಬ ವ್ಯಕ್ತಿಯು ಪರವಾನಗಿ ಪಡೆದರೂ 50 ಲೀಟರ್‌ಗಿಂತ ಹೆಚ್ಚು ಮದ್ಯವನ್ನು ಮನೆಯಲ್ಲಿ ಇಟ್ಟುಕೊಂಡರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು. ಜನರು ತಮ್ಮ ಮನೆಗಳಲ್ಲಿ ತಯಾರಿಸಿದ ಬಾರ್‌ಗಳಿಂದ ಮದ್ಯವನ್ನು ಮಾರಾಟ ಮಾಡಲು ಅನುಮತಿ ಇಲ್ಲ.
ಜಿಲ್ಲಾ ಅಬಕಾರಿ ಅಧಿಕಾರಿ ಡೆಹ್ರಾಡೂನ್ ರಾಜೀವ್ ಚೌಹಾಣ್ ಮಾತನಾಡಿ, ಹೋಮ್ ಬಾರ್ ಪರವಾನಗಿ ಪಡೆಯಲು ಅರ್ಜಿದಾರರ ವಯಸ್ಸು 21 ವರ್ಷಕ್ಕಿಂತ ಹೆಚ್ಚಿರಬೇಕು. ಇದರೊಂದಿಗೆ, ಅರ್ಜಿದಾರರು ಕಳೆದ 5 ವರ್ಷಗಳಿಂದ ಐಟಿಆರ್ ಅನ್ನು ಸಲ್ಲಿಸಿರಬೇಕು. ಅಂತಹವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದಾಗ, ಜಿಲ್ಲೆಯ ಜಿಲ್ಲಾಧಿಕಾರಿಗಳು ಅವರಿಗೆ ಪರವಾನಗಿ ನೀಡುತ್ತಾರೆ.
ಇದನ್ನು ಓದಿ: Sullia: KVG ಎಂ.ಎಸ್ ರಾಮಕೃಷ್ಣ ಕೊಲೆ ಪ್ರಕರಣ- ಡಾ.ರೇಣುಕಾ ಪ್ರಸಾದ್ ಸೇರಿ ಐವರಿಗೆ ಶಿಕ್ಷೆ ಪ್ರಕಟ!