Tirupathi Temple: ತಿರುಪತಿ ದೇವಸ್ಥಾನದ ಬಸ್‌ ಕದ್ದೊಯ್ದ 20 ರ ಹರೆಯದ ಯುವಕ! ಚಾಲಕನ ಪ್ರಾರ್ಥನೆಗೆ ವರ ಕೊಟ್ಟ ತಿಮ್ಮಪ್ಪ!! ಯುವಕ ಪತ್ತೆ, ಬಸ್‌ ಎಲ್ಲಿತ್ತು ಗೊತ್ತೇ?

TTD Tirupathi tirumala bus stealed by 20 year old boy latest news

ಲಕ್ಷಾಂತರ ಮಂದಿ ಭೇಟಿ ನೀಡುವ ಶ್ರೀಮಂತ ದೇವಸ್ಥಾನವೇ ತಿರುಪತಿ ದೇವಸ್ಥಾನ. ಹಾಗೆ ಬಂದವರಲ್ಲಿ ಓರ್ವ ಇಪ್ಪತ್ತರ ಹರೆಯದ ಯುವಕ ಕೂಡಾ ತಿಮ್ಮಪ್ಪನ ದರ್ಶನ ಪಡೆದು ಜನ್ಮ ಪಾವನವಾಯಿತೆಂದುಕೊಂಡಿದ್ದಾನೆ.
ಈ ಯುವಕನ ಹೆಸರೇ ನಿಲಾವರ್‌ ವಿಷ್ಣು. ಈತ ತಿರುಮಲ ದೇವಸ್ಥಾನದ ಟ್ರಸ್ಟ್‌ನ ಸಿಬ್ಬಂದಿಗಳನ್ನೆಲ್ಲ ಕರೆದುಕೊಂಡೊಯ್ಯುವ ಬಸ್‌ ಚಾಲಕನೋರ್ವನ ಸ್ನೇಹ ಬೆಳೆಸಿದ್ದು, ಇಬ್ಬರೂ ಆತ್ಮೀಯವಾಗಿ ಮಾತನಾಡಿದ್ದಾರೆ. ನೋಡಲು ಬಾಲಕನಂತಿದ್ದ ನಿಲಾವರ್‌ಗೆ ಬಸ್‌ ಚಾಲಕ ಊಟ ಕೊಡಿಸಿ, ಕೊನೆಗೆ ಮನೆಗೆ ಮರಳಲು ಹಣ ಕೂಡಾ ನೀಡಿದ್ದಾನೆ.

ಆದರೆ ಸೆ.24ರಂದು ತಿರುಮಲ ಟ್ರಸ್ಟ್‌ನ ಎಲೆಕ್ಟ್ರಿಕ್‌ ಬಸನ್ನು ಈ ಯುವಕ ಕದ್ದೊಯ್ದಿದ್ದಾನೆ. ಮಿನಿಬಸ್ಸನ್ನು ಚಲಾಯಿಸಿಕೊಂಡು ಹೋದ ಯುವಕ ನಾಪತ್ತೆಯಾಗಿದ್ದು, ಇತ್ತ ಕಡೆ ಬಸ್‌ ಚಾಲಕ ಗಾಬರಿಗೊಂಡಿದ್ದಾನೆ. ನಾನು ನಿಲ್ಲಿಸಿದ ಬಸ್‌ ಕಾಣೆಯಾಗಿದೆ ಎಂದು ಈತ ತಿರುಮಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ. ಸಿಸಿಟಿವಿ ದೃಶ್ಯ ನೋಡಿದ ಪೊಲೀಸರು ಯುವಕ ಬಸ್‌ ಕದ್ದೊಯ್ದಿರುವುದು ಕಂಡು ಬಂದಿದೆ.

ಬಸ್‌ ದೇವಸ್ಥಾನದ್ದಾಗಿರುವುದರಿಂದ ಅದರ ಜವಾಬ್ದಾರಿ ಚಾಲಕನದ್ದು, ಹೀಗಾಗಿ ಆ ಗಾಡಿಯ ಸಂಪೂರ್ಣ ಮೊತ್ತ ಭರಿಸಲು ಹೇಳಿದರೆ, ಕೆಲಸದಿಂದ ಅಮಾನತು ಮಾಡಿದರೆ ಏನು ಮಾಡುವುದು ಎಂಬ ಆತಂಕದಲ್ಲಿದ್ದ ಬಸ್‌ ಚಾಲಕ ಕೊನೆಗೆ ತಿರುಪತಿ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಮಾಡಿದ್ದಾನೆ. ಬಸ್‌ ದೊರಕಿ, ಯುವಕನ ಬಂಧನವಾಗಲಿ ನನ್ನ ಕೆಲಸಕ್ಕೆ ತೊಂದರೆಯಾಗದಿರಲಿ ಎಂದು ಮನಃಸ್ಪೂರ್ತಿಯಾಗಿ ಬೇಡಿಕೊಂಡಿದ್ದಾನೆ. ಈತನ ಭಕ್ತಿಯ ಬೇಡಿಕೆ ತಿಮ್ಮಪ್ಪನಿಗೆ ಕೇಳಿದೆ. ಪವಾಡವೆಂಬಂತೆ ಯುವಕ ಮತ್ತೆ ಅದೇ ತಿರುಪತಿ ಬಸ್‌ ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ. ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಬಸ್ಸನ್ನು ಎಲ್ಲಿ ಬಿಟ್ಟಿದ್ದು ಎಂದು ಕೇಳಿದಾಗ ಆತ ನಾನು ನಾಯುಡುಪೇಟೆಯಲ್ಲಿ ಬಿಟ್ಟಿದ್ದಾನೆ ಎಂದು ಹೇಳಿದ್ದಾನೆ. ಆದರೆ ಈತ ಮತ್ತೆ ಯಾಕೆ ತಿರುಪತಿ ಬಸ್‌ ನಿಲ್ದಾಣಕ್ಕೆ ಬಂದ ಎಂದು ಪ್ರಶ್ನೆ ಮಾಡಿದರೆ ಗೊತ್ತಿಲ್ಲ ಎನ್ನುವ ಮಾತನ್ನು ಹೇಳಿದ್ದಾನೆ.

 

ಇದನ್ನು ಓದಿ: Crime News:ಗೆಳೆಯ ಕೇಳಿದನೆಂದು ತನ್ನ ಮನದರಸಿಯನ್ನೇ ಕೊಟ್ಟ ಸ್ನೇಹಿತ! ಇದೇನು ತ್ಯಾಗ ಅಂದ್ಕೊಂಡ್ರ, ಅಲ್ಲ ಆಮೇಲೆ ಆದದ್ದು ಭಯಾನಕ!!!

Leave A Reply

Your email address will not be published.