Trending News: ಮನೆಗೆ ಬೆಂಕಿ ಬಿದ್ದಿದೆ ಎಂದು ಓಡೋಡಿ ಬಂದ ಅಗ್ನಿಶಾಮಕ ದಳ! ಬಂದು ನೋಡಿದಾಗ ಕಂಡದ್ದೇನು?

trending news firefighters had to rush to house on fire in new york halloween latest news

Trending News:  ನ್ಯೂಯಾರ್ಕ್‌ನ ಗ್ಲೆನ್ಸ್ ಫಾಲ್ಸ್‌ನಲ್ಲಿ ಹ್ಯಾಲೋವೀನ್ ಉತ್ಸಾಹಿಯೊಬ್ಬ ತನ್ನ ಮನೆಯಲ್ಲಿ ಬೆಂಕಿಯಂತಹ ಅಲಂಕಾರ ಮಾಡಿ, ಈ ಅಲಂಕಾರ ನೆರೆಹೊರೆಯಲ್ಲಿ ಸಾಕಷ್ಟು ಕೋಲಾಹಲವನ್ನು ಉಂಟುಮಾಡಿತು. ಇದು ಸ್ಥಳೀಯ ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿದ ಅವರು, ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಕೊನೆಗೆ ಬೇಸ್ತು ಬಿದ್ದ ಘಟನೆಯೊಂದು ನಡೆದಿದೆ.

 

ಕಿಟಕಿ ಮೂಲಕ ಮನೆಯನ್ನು ನೋಡಿದರೆ ಉರಿಯುತ್ತಿರುವ ಬೆಂಕಿಯ ತರಹ ಕಾಣುತಿತ್ತು. ಆದರೆ ಅಲ್ಲಿ ನಿಜವಾದ ಬೆಂಕಿ ಅಥವಾ ಅಪಾಯ ಏನೂ ನಡೆದಿರಲಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿಗೆ ಯಾವುದೇ ಬೆಂಕಿ ಕಂಡುಬಂದಿಲ್ಲ, ಬದಲಿಗೆ ಹ್ಯಾಲೋವೀನ್ ತಿಂಗಳ ಆರಂಭವನ್ನು ಗುರುತಿಸಲು ವಿಸ್ತಾರವಾದ ಸ್ಪೂಕಿ ಪ್ರದರ್ಶನವನ್ನು ಅಲ್ಲಿ ಮಾಡಲಾಗಿತ್ತು.

ಒಂದೆರಡು ಎಲ್ಇಡಿ ದೀಪಗಳು, ಬಾಕ್ಸ್ ಫ್ಯಾನ್, ಸಿಲ್ವರ್ ಶೀಟ್ ಮತ್ತು ಮಂಜು ಯಂತ್ರದಿಂದ ಈ ಚಮತ್ಕಾರವನ್ನು ರಚಿಸಲಾಗಿದ]ತ್ತು. ತಿಂಗಳಾಂತ್ಯದಲ್ಲಿ ಹ್ಯಾಲೋವೀನ್ ತನಕ ಪ್ರತಿ ಶುಕ್ರವಾರ ಮತ್ತು ಶನಿವಾರ ರಾತ್ರಿ ಡಿಸ್‌ಪ್ಲೇ ಇರುತ್ತದೆ ಎಂದು ಮಾಲೀಕರು ಹೇಳಿದ್ದಾರೆ ಎಂದು ವರದಿಯಾಗಿದೆ.

Leave A Reply

Your email address will not be published.