Mangaluru: ಕೊರಗ ಭಾಷೆಯಲ್ಲಿ ಮೂಡಿಬಂದ ವಿವಾಹ ಆಮಂತ್ರಣ ಪತ್ರಿಕೆ! ಅಳಿವಿನಂಚಿನ ಭಾಷೆ ಹಾಗೂ ದೇಸಿ ಭಾಷೆಯ ಆಹ್ವಾನ ಪತ್ರಿಕೆಗೆ ಮೆಚ್ಚುಗೆಯ ಮಹಾಪೂರ!
Mangalore news koraga community couples wedding invitation card in koraga language
Koraga language : ಮದುವೆ (Marriage)ಎಂಬುದು ಎರಡು ಜೋಡಿಯ ಬೆಸೆಯುವ ಕೊಂಡಿ ಮಾತ್ರವಲ್ಲ ಎರಡು ಕುಟುಂಬವನ್ನು ಒಟ್ಟಾಗಿಸುವ ಸುಂದರ ಬಂಧ. ಮದುವೆ ಎಂದರೆ ಸಹಜವಾಗಿ ವಧು ವರರ ಪಾಲಿಗೆ ವಿಶೇಷವಾದ ದಿನವಾಗಿದ್ದು, ಅವಿಸ್ಮರಣೀಯ ಆನಂದವನ್ನು ಉಂಟು ಮಾಡುತ್ತವೆ. ಮಂಗಳೂರಿನ (Mangaluru)ಜೋಡಿಯೊಂದು ತಮ್ಮ ಮದುವೆ ಆಹ್ವಾನವನ್ನು ಕೊರಗ ಭಾಷೆಯಲ್ಲಿ(Koraga language )ಪ್ರಕಟಿಸಿದ್ದಾರೆ. ಈ ಮೂಲಕ ಅಳಿವಿನಂಚಿನ ಭಾಷೆಯನ್ನು ಉಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಕರಾವಳಿ ಭಾಗದಲ್ಲಿ ತುಳು (Tulu)ಎಂಬುದು ಕೇವಲ ಒಂದು ಭಾಷೆ ಆಗಿರದೇ ಜನರನ್ನು ಬೆರೆಸುವ ಕೊಂಡಿಯಂತೆ ಆಗಿಬಿಟ್ಟಿದೆ. ಇದೇ ರೀತಿ ಕರಾವಳಿಯಲ್ಲಿ ಬಳಕೆಯಲ್ಲಿರುವ ಭಾಷೆಯಲ್ಲಿ ಕೊರಗ ಭಾಷೆ ಕೂಡ ಒಂದಾಗಿದ್ದು, ಇದು ಮಂಗಳೂರು ಭಾಗದ ಅತೀ ಹಿಂದುಳಿದ ಸಮುದಾಯದಲ್ಲಿ ಭಾಷೆ ಜೀವಂತವಾಗಿದೆ. ಇದೇ ರೀತಿ ಪ್ರತಿ ಭಾಷೆಯ ಉಳಿವಿಗೆ ಕೂಡ ಭಾಷೆಯ ಬಳಕೆ ಮಹತ್ತರ ಪಾತ್ರ ವಹಿಸುತ್ತದೆ. ಸದ್ಯ, ಕೊರಗ ಸಮುದಾಯದ ಮದುವೆಯ ಆಹ್ವಾನ ಪತ್ರಿಕೆಯೊಂದು ಕೊರಗ ಭಾಷೆಯಲ್ಲಿ ಪ್ರಕಟಗೊಂಡಿದ್ದು, ಲಿಪಿ ಕನ್ನಡವಾದರೂ ಸಂಪೂರ್ಣ ಮದುವೆಯ ಆಮಂತ್ರಣ ವಿವರ ಕೊರಗ ಭಾಷೆಯ ಶೈಲಿಯಲ್ಲಿದೆ. ಮಂಗಳೂರಿನ ಕೋಡಿಬೆಟ್ಟುವಿನ ಅಕ್ಷತಾ ಹಾಗೂ ಬಾರ್ಕೂರಿನ ಅಮಿತ್ ಕುಮಾರ್ ಅವರ ವಿವಾಹ ನವೆಂಬರ್ 19ರಂದು ಮಂಗಳೂರಿನಲ್ಲಿ ನಿಗದಿಯಾಗಿದ್ದು, ಈ ಮದುವೆಯ ವಿವರಗಳು ಕೊರಗ ಭಾಷೆಯಲ್ಲಿ ಪ್ರಕಟಗೊಂಡಿದೆ.
ದಕ್ಷಿಣ ಕನ್ನಡ ಕಾಸರಗೋಡು ಒಳಗೊಂಡಂತೆ ಈ ಪ್ರದೇಶದಲ್ಲಿ ನೆಲೆಗೊಂಡ ಕೊರಗ ಸಮುದಾಯ ‘ಕೊರಗ’ ಭಾಷೆಯನ್ನು ಬಳಕೆ ಮಾಡುತ್ತಾರೆ. ಇದೇ ಕೊರಗ ಭಾಷೆಯಲ್ಲಿ ಮದುವೆ ಆಮಂತ್ರಣ ಪತ್ರಿಕೆಯನ್ನು ಅಚ್ಚು ಹಾಕಿಸಲಾಗಿದೆ. ಇದನ್ನು ಕನ್ನಡಪರ ಚಿಂತಕರು ಜೊತೆಗೆ ಉಪನ್ಯಾಸಕರಾಗಿರುವ ಅರುಣ್ ಜೋಳದ ಕೂಡ್ಲಿಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ದೇಸಿ ಭಾಷೆಯಲ್ಲಿ ಆಹ್ವಾನ ಪತ್ರಿಕೆ ನೀಡಿರುವುದು ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ: ತನ್ನ ಮಗನ ಕೊಂದು, ತಲೆಯನ್ನು ಕುದಿಸಿ ತಿಂದ ಪಾಪಿ ತಾಯಿ! ಕಾರಣ?