New SIM Rules: ಸಿಮ್ ಕಾರ್ಡ್ ಬಳಕೆದಾರರೇ ಗಮನಿಸಿ- ಅಕ್ಟೋಬರ್ ನಿಂದ ನೀವು ಈ ನಿಯಮಗಳನ್ನು ಪಾಲಿಸಲೇಬೇಕು
National news new sim card rules from October users must follow these rules
New SIM rules: ಮೊಬೈಲ್ ಬಳಕೆದಾರರೇ ಗಮನಿಸಿ, ಅಕ್ಟೋಬರ್ ನಿಂದ ಹೊಸ ನಿಯಮಗಳು ಜಾರಿಯಾಗಲಿದೆ. ಸಿಮ್ ಕಾರ್ಡ್ ಬಳಕೆದಾರರು ಈ ನಿಯಮಗಳನ್ನು ತಿಳಿದಿರಬೇಕು. ಸಿಮ್ ಕಾರ್ಡ್ ಗಳ ಮಾರಾಟಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ನಿಯಮಾವಳಿಗಳು(New SIM rules) ಜಾರಿಯಲ್ಲಿದ್ದರೂ ಕೆಲವು ಕಂಪನಿಗಳು ನಿರ್ಲಕ್ಷ್ಯ ಧೋರಣೆ ತಾಳುತ್ತಿವೆ. ಆದರೆ ಇನ್ನೂ ಅಕ್ಟೋಬರ್ 1ರಿಂದ ಹೊಸ ನಿಯಮಗಳನ್ನು ಪಾಲಿಸಬೇಕು ಎಂದು ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಆದೇಶ ಹೊರಡಿಸಿದೆ.
ಟೆಲಿಕಾಂ ಇಲಾಖೆ (DoT) ದೇಶದಲ್ಲಿ ಸಿಮ್ ಕಾರ್ಡ್‌ಗಳ ಖರೀದಿ, ಮಾರಾಟ ಮತ್ತು ಸಕ್ರಿಯ ಮಾಡುವ ಕುರಿತು ಹೊಸ ನಿಯಮಗಳನ್ನು(New SIM rules from DoT) ಜಾರಿಗೆ ತಂದಿದೆ. ಸ್ಪ್ಯಾಮ್ ಸಂದೇಶ ಕಳುಹಿಸುವಿಕೆ ಮತ್ತು ಸೈಬರ್ ವಂಚನೆಯನ್ನು ತಡೆಯುವ ನಿಟ್ಟಿನಲ್ಲಿ ಸಿಮ್ ಕಾರ್ಡ್‌ಗಳ ದುರುಪಯೋಗವನ್ನು ನಿಲ್ಲಿಸುವ ಸಲುವಾಗಿ DoT ಸಿಮ್ಸ್ ಬಲ್ಕ್ ಸೇಲ್ ನಿಷೇಧ ಹೇರುವುದಾಗಿ ಹೇಳಿದೆ. ಈ ಹೊಸ ನಿಯಮಗಳನ್ನು ಅಕ್ಟೋಬರ್ 1, 2023 ರಿಂದ ಜಾರಿಗೆ ತರಲಾಗಿದೆ.
ಈ ನಿಟ್ಟಿನಲ್ಲಿ ಎರಡು ಸುತ್ತೋಲೆಗಳನ್ನು ಹೊರಡಿಸಲಾಗಿದ್ದು, ಅವುಗಳಲ್ಲಿ ಏರ್‌ಟೆಲ್ ಮತ್ತು ಜಿಯೋದಂತಹ ಸೇವಾ ಪೂರೈಕೆದಾರ ಕಂಪನಿಗಳ ಸಿಮ್ ಬಳಕೆದಾರರಿಗೆ ಮತ್ತು ಇನ್ನೊಂದು ಹಾನಿಗೊಳಗಾದ ಸಿಮ್ ಕಾರ್ಡ್ ಅನ್ನು ಬದಲಾಯಿಸುವ ಸಂದರ್ಭ ಬಳಕೆದಾರರು ಮತ್ತೊಮ್ಮೆ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದೆ. ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ನಿಯಮಗಳನ್ನು ಪರಿಚಯಿಸಿರುವುದಾಗಿ DoT ಪ್ರಕಟಿಸಿದೆ. ಹೀಗಾಗಿ, ಕಟ್ಟುನಿಟ್ಟಾದ KYC ಮಾನದಂಡಗಳು ಕಡ್ಡಾಯವಾಗಿದ್ದು, ಸೇವಾ ಪೂರೈಕೆದಾರರು ತಮ್ಮ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವ ಅಂಗಡಿಗಳ ಪೂರ್ಣ KYC ಮಾಡಲು ಸೂಚನೆ ನೀಡಲಾಗಿದೆ.
ಇದನ್ನು ಪಾಲಿಸದೇ ಹೋದಲ್ಲಿ ಪ್ರತಿ ಅಂಗಡಿಯವರಿಗೆ 10 ಲಕ್ಷ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಇದರ ಜೊತೆಗೆ ಏರ್‌ಟೆಲ್ ಮತ್ತು ಜಿಯೋದಂತಹ ಕಂಪನಿಗಳು ತಮ್ಮ ಸಿಮ್ ಕಾರ್ಡ್‌ಗಳನ್ನು ಯಾರು ಮತ್ತು ಹೇಗೆ ಮಾರಾಟ ಮಾಡುತ್ತಿದ್ದಾರೆ ಎಂಬ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು DoT ಸೂಚನೆ ನೀಡಿದೆ. ಇದರ ಜೊತೆಗೆ , ಅಸ್ಸಾಂ, ಕಾಶ್ಮೀರ ಮತ್ತು ಈಶಾನ್ಯದಲ್ಲಿನ ಟೆಲಿಕಾಂ ಆಪರೇಟರ್‌ಗಳು ಔಪಚಾರಿಕ ಒಪ್ಪಂದಕ್ಕೆ ಪ್ರವೇಶಿಸುವ ಮೊದಲು ಅಂಗಡಿಗಳ ಪೊಲೀಸ್ ಪರಿಶೀಲನೆಯನ್ನು ಆರಂಭ ಮಾಡಲು ಸೂಚಿಸಲಾಗಿದೆ.
ಇದನ್ನೂ ಓದಿ: Karnataka: ಮತ್ತೊಂದು ರೈತ ಹೋರಾಟಕ್ಕೆ ಸಾಕ್ಷಿಯಾಗಲಿದೆ ಕರ್ನಾಟಕ – ರಾಜಭವನದತ್ತ ಹೊರಟ ತೆಂಗು ಬೆಳೆಗಾರರು