Alvas Job Fair: ಬೃಹತ್‌ ಆಳ್ವಾಸ್‌ ಉದ್ಯೋಗ ಮೇಳ; 200ಕ್ಕೂ ಅಧಿಕ ಕಂಪೆನಿಗಳು ಭಾಗಿ!

Dakshina Kannada employment news Alvas Job Fair on next weekend latest updates

Alvas Job Fair: : ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳೇ ಗಮನಿಸಿ, ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ. ಅಕ್ಟೋಬರ್‌ನಲ್ಲಿ ಬೃಹತ್‌ ಆಳ್ವಾಸ್‌ ಉದ್ಯೋಗ ಮೇಳ ನಡೆಯಲಿದ್ದು, 200ಕ್ಕೂ ಅಧಿಕ ಕಂಪೆನಿಗಳು ಭಾಗಿಯಾಗಲಿವೆ. ದಕ್ಷಿಣ ಕನ್ನಡದ (Dakshina Kannada)ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುವ ಬೃಹತ್ ಉದ್ಯೋಗ ಮೇಳ (Alvas Job Fair) ‘ಆಳ್ವಾಸ್ ಪ್ರಗತಿ-2023ʼ ಅಕ್ಟೋಬರ್ 6 ಹಾಗೂ 7ರಂದು ಮೂಡುಬಿದಿರೆಯ ವಿದ್ಯಾಗಿರಿ ಕಾಲೇಜು ಆವರಣದಲ್ಲಿ ನಡೆಯಲಿದೆ.

ಅಕ್ಟೋಬರ್ 6 ಮತ್ತು 7 ರಂದು ಮೂಡಬಿದ್ರೆ ಆಳ್ವಾಸ್ ನಲ್ಲಿ ನಡೆಯುವ ಬೃಹತ್ ಉದ್ಯೋಗ ಮೇಳದ ಪ್ರಯೋಜನವನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಯುವಜನತೆ ಪಡೆದುಕೊಳ್ಳಬಹುದು. ಅ.6 ರಂದು ಬೆಳಿಗ್ಗೆ 7 ಗಂಟೆಗೆ ಪುತ್ತೂರು (Puttur)ಶಾಸಕರ ಕಚೇರಿಯಿಂದ ಬಸ್ ಹೊರಡಲಿದ್ದು, ಆಕಾಂಕ್ಷಿಗಳು ಶಾಸಕರ ಕಚೇರಿಯನ್ನು ಭೇಟಿಯಾಗಿ ಹೆಸರು ನೋಂದಾವಣೆ ಮಾಡಿಕೊಳ್ಳಲು ಅನುವು ಮಾಡಿಕೊಡಲಾಗಿದೆ. ಈ ಉದ್ಯೋಗ ಮೇಳಕ್ಕೆ ಪುತ್ತೂರಿನಿಂದ ಬರಲು ಉಚಿತ ಬಸ್ ವ್ಯವಸ್ಥೆ ಮಾಡಿರುವ ಕುರಿತು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾಹಿತಿ ನೀಡಿದ್ದಾರೆ.

ಮೆಕ್ಯಾನಿಕ್, ಇಲೆಕ್ನಿಕ್, ಐಟಿಐ, ಡಿಪ್ಲೊಮಾ ವಿದ್ಯಾಭ್ಯಾಸ ಮಾಡಿದವರಿಗೆ 2000 ಹುದ್ದೆಗಳಿದ್ದು, ಈ ಕೋರ್ಸುಗಳನ್ನು ಮಾಡಿದವರಿಗೆ ಸೇರಿದಂತೆ ಇತರ ಡಿಗ್ರಿ, ಮಾಸ್ಟರ್ ಡಿಗ್ರಿಯಾದವರಿಗೂ ಸಾವಿರಾರು ಉದ್ಯೋಗಾವಕಾಶವಿದೆ. ಇದರ ಜೊತೆಗೆ ವಿದೇಶಿ ಕಂಪೆನಿಗಳು ಮೇಳದಲ್ಲಿ ಭಾಗವಹಿಸುತ್ತಿದೆ.ಪುತ್ತೂರು ಗ್ರಾಮೀಣ ಭಾಗದ ನಿರುದ್ಯೋಗಿ ವಿದ್ಯಾವಂತ ಯುವಕರು ಇದರಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬಹುದು. ಪುತ್ತೂರು ಸೇರಿದಂತೆ ಜಿಲ್ಲೆಯಾಧ್ಯಂತ ಮೆಸ್ಕಾಂ ನಲ್ಲಿ ಆಸಕ್ತಿ ಇರುವ ಮಂದಿಗೆ ವಿದ್ಯುತ್ ಕಂಬ ಹತ್ತುವ ತರಬೇತಿಯನ್ನು ನೀಡಿ ಅವರಿಗೆ ಉದ್ಯೋಗಾವಕಾಶ ಕಲ್ಪಿಸಲಾಗುತ್ತದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ವೈದ್ಯಕೀಯ, ಅರೆ ವೈದ್ಯಕೀಯ, ಇಂಜಿನಿಯರಿಂಗ್, ಕಲಾ, ವಾಣಿಜ್ಯ, ವಿಜ್ಞಾನ, ನರ್ಸಿಂಗ್‌, ಐಟಿಐ, ಡಿಪ್ಲೋಮಾ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.

ಆಳ್ವಾಸ್ ಪ್ರಗತಿ 2023ರಲ್ಲಿ ಈವರೆಗೆ 165 ಕಂಪೆನಿಗಳು ನೋಂದಾಯಿಸಿಕೊಂಡಿದ್ದು, ಹೆಚ್ಚುವರಿಯಾಗಿ 37 ಕಂಪೆನಿಗಳು ಉದ್ಯೋಗಾವಕಾಶ ಕಲ್ಪಿಸಲಿದೆ. ಒಟ್ಟಾರೆಯಾಗಿ ಈ ಬಾರಿ 200 ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಕೊಲ್ಲಿ ರಾಷ್ಟ್ರಗಳಿಂದ ಮೂರು ಕಂಪೆನಿಗಳು ಭಾಗವಹಿಸಲಿದೆ. ಇದನ್ನು ಹೊರತುಪಡಿಸಿ ಉಳಿದಂತೆ ಇಂಜಿನಿಯರಿಂಗ್‌ನಲ್ಲಿ 80ಕ್ಕೂ ಅಧಿಕ ಅಧಿಕ ಕಂಪೆನಿಗಳು, ಉತ್ಪಾದನಾ ವಲಯದಲ್ಲಿ 40+, ಐಟಿಯಲ್ಲಿ 18+ ಕಂಪೆನಿಗಳು ಭಾಗಿಯಾಗಲಿದೆ.

ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಕಂಪೆನಿಗಳ ಬಗ್ಗೆ ಹಾಗೂ ನವೀಕೃತ ಮಾಹಿತಿಗಳನ್ನು ಅಧಿಕೃತ ವೆಬ್‌ಸೈಟ್ www.alvaspragati.com ನಲ್ಲಿ ಪರಿಶೀಲಿಸಬಹುದು. ಆಳ್ವಾಸ್ ಪ್ರಗತಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳು-http://www.alvaspragati.com/candidateRegistrationPage#top ನಲ್ಲಿ ಕಡ್ಡಾಯವಾಗಿ ಉಚಿತ ಆನ್‌ಲೈನ್ ನೋಂದಣಿ ಮಾಡಬೇಕು. ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅಭ್ಯರ್ಥಿಗಳು 5ರಿಂದ 10 ಪಾಸ್‌ಪೋರ್ಟ್ ಭಾವಚಿತ್ರಗಳು, ಅಂಕಪಟ್ಟಿಗಳು (ಛಾಯಾಪ್ರತಿಗಳು), ಆನ್‌ಲೈನ್ ನೋಂದಣಿಯ ನಂಬರ್ ಹಾಗೂ ಐಡಿಯನ್ನು ಒಳಗೊಂಡಿರಬೇಕು. ಹೊರ ಜಿಲ್ಲೆಯಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ಅ.5 ರಿಂದ ವಸತಿ ವ್ಯವಸ್ಥೆ ಮಾಡಲಾಗುತ್ತದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9008907716, 9663190590, 7975223865 ಯನ್ನು ಸಂಪರ್ಕಿಸಬಹುದು.

 

ಇದನ್ನು ಓದಿ: Daily horoscope 03/10/2023: ಇಂದು ಬಾಲ್ಯ ಸ್ನೇಹಿತರ ಭೇಟಿ, ವ್ಯಾಪಾರದಲ್ಲಿ ಲಾಭ ಈ ರಾಶಿಯವರಿಗೆ!!

1 Comment
  1. ecommerce says

    Wow, wonderful blog layout! How long have you ever been blogging for?
    you make running a blog look easy. The total look of your site
    is excellent, as neatly as the content! You can see similar here ecommerce

Leave A Reply

Your email address will not be published.