LPG Rate Hike: ಹಣದುಬ್ಬರ ಪರಿಣಾಮ, ಗ್ಯಾಸ್ ಬೆಲೆ ರೂ.3000 ಕ್ಕೆ ಏರಿಕೆ
business news record inflation gas cylinder crossed rs.3000 rate in pakistan latest news
LPG Rate Hike: ಭಾರತದಲ್ಲಿ ಹಣದುಬ್ಬರ ಕಡಿಮೆಯಾಗಲಿದೆ ಎನ್ನುವ ಮಾತೊಂದು ಸುಳಿದಾಡುತ್ತಿರುವ ಮಧ್ಯೆ, ಮತ್ತೊಂದೆಡೆ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಹಣದುಬ್ಬರ ಶೇ.31 ದಾಟಿರುವ ಕುರಿತು ವರದಿಯಾಗಿದೆ. ಇದು ಭಾರತಕ್ಕಿಂತ ಸುಮಾರು ಐದು ಪಟ್ಟು ಹೆಚ್ಚು ಎಂದು ವರದಿಯಾಗಿದೆ. ಇದರ ಪರಿಣಾಮ ಪಾಕಿಸ್ತಾನದಲ್ಲಿ (LPG Rate Hike) ಗ್ಯಾಸ್‌ಸಿಲಿಂಡರ್ ಬೆಲೆ ರೂ.3000 ರೂ ಆಗಿದೆ. ಪಾಕಿಸ್ತಾನ ಬೇಲ್‌ಔಟ್ ಪ್ಯಾಕೇಜ್ ಅಡಿಯಲ್ಲಿ IMF ನ ಷರತ್ತುಗಳನ್ನು ಪೂರೈಸುವ ಸಲುವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಇಂಧನ ಬೆಲೆ ಹೆಚ್ಚಳ ಮಾಡಲಾಗಿತ್ತು. ಇದೀಗ ಹಣದುಬ್ಬರ ನಾಲ್ಕು ತಿಂಗಳ ನಂತರ ಮೊದಲ ಬಾರಿಗೆ ಹೆಚ್ಚಾಗಿದೆ.
ದೇಶದ ತೈಲ ಮತ್ತು ಅನಿಲ ನಿಯಂತ್ರಣ ಪ್ರಾಧಿಕಾರ (ಒಜಿಆರ್‌ಎ) ಎಲ್‌ಪಿಜಿ ಬೆಲೆಯನ್ನು ಕೆಜಿಗೆ 20.86 ರೂ ಹೆಚ್ಚಿಸಿದೆ, ನಂತರ ಅದರ ಬೆಲೆ ಕೆಜಿಗೆ 260.98 ರೂ ಆಗಿದೆ. ಇದಲ್ಲದೆ, ದೇಶೀಯ ಸಿಲಿಂಡರ್ ಬೆಲೆಯನ್ನು ಪಾಕಿಸ್ತಾನ ರೂಪಾಯಿ 246.16 ರಷ್ಟು ಹೆಚ್ಚಿಸಲಾಗಿದೆ.
ಇದಾದ ನಂತರ, ಪಾಕಿಸ್ತಾನದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 3,079.64 ರೂ.ಗೆ ಆಗಿದೆ. ಡಾಲರ್ ಶೇಖರಣೆದಾರರು ಮತ್ತು ಕಳ್ಳಸಾಗಣೆದಾರರ ವಿರುದ್ಧ ಇತ್ತೀಚಿನ ಸರ್ಕಾರದ ಕ್ರಮದ ನಂತರ ಪಾಕಿಸ್ತಾನವು ಹಣದುಬ್ಬರದಿಂದ ಸ್ವಲ್ಪ ಪರಿಹಾರವನ್ನು ಪಡೆಯಬಹುದು.
ಇದನ್ನು ಓದಿ: Shivamogga: ಮಸೀದಿ ಮುಂದೆ ಗಣಪತಿಗೆ ನಡೆಯಿತು ಮಹಾ ಮಂಗಳಾರತಿ- ಮುಂದೆ ನಡೆದದ್ದೇ ವಿಚಿತ್ರ !!