ಮಂಗಳೂರು: ಮುಸ್ಲಿಂ ಯುವಕನ ಮೇಲೆ ದೈವದ ಆವಾಹನೆ!

Mangalore news Pili chamundi daiva came upon the Muslim youth in nemotsava

Pili chamundi daiva : ತುಳುನಾಡಿನಲ್ಲಿ ದೈವದ ಆಚರಣೆಗಳಿಗೆ ವಿಶೇಷ ನಂಬಿಕೆಯಿದೆ. ಕೊರಗಜ್ಜನ ಬಗ್ಗೆ ಅನೇಕ ಸುದ್ದಿಗಳು ಹರಿದಾಡುವುದುಂಟು. ತುಳುನಾಡಿನ ಜನರು ದೇವರು ಕೈ ಬಿಟ್ಟರು ಕೂಡ ದೈವ ಎಂದಿಗೂ ನಮ್ಮನ್ನು ಬಿಡುವುದಿಲ್ಲ ಎಂಬ ಮಟ್ಟಿಗೆ ಜನರಲ್ಲಿ ದೈವದ ಬಗ್ಗೆ ವಿಶೇಷ ನಂಬಿಕೆಯಿದೆ. ಇದರ ನಡುವೆ, ಮಂಗಳೂರಿನ (Mangaluru) ಬಜ್ಪೆ ಸಮೀಪದ ಪೆರ್ಮುದೆಯಲ್ಲಿ (Permude)18 ವರ್ಷದ ಮುಸ್ಲಿಂ ಯುವಕನ (Muslim Youth) ಮೈ ಮೇಲೆ ದೈವ ಆವಾಹನೆಯಾದ ಘಟನೆ ನಡೆದಿದೆ ಎನ್ನಲಾಗಿದೆ.

ಮೂವತ್ತು ವರ್ಷಗಳ ಹಿಂದೆ ಪ್ರತಿಷ್ಠಿತ ಕಂಪನಿಯೊಂದು ಮಂಗಳೂರಿನ ಬಜ್ಪೆ ಸಮೀಪದ ಪೆರ್ಮುದೆ ವ್ಯಾಪ್ತಿಯಲ್ಲಿ ಭೂಸ್ವಾಧೀನ ಮಾಡಿಕೊಂಡಿದೆ. ಭೂಸ್ವಾಧೀನದಲ್ಲಿ ಪಿಲಿಚಾಮುಂಡಿ ದೈವದ (Pili chamundi Daiva) ಗಡುವಾಡು ಸ್ಥಳ ಕಂಪನಿಯ ಪಾಲಾಗಿತ್ತು. ಇದರ ನಡುವೆ, ಇಲ್ಲಿನ ಭಕ್ತರು ದೈವವನ್ನು ಪೆರ್ಮುದೆಯ ಸೋಮನಾಥಧಾಮಕ್ಕೆ ಸ್ಥಳಾಂತರ ಮಾಡಿದ್ದರು., ಗಡು ಸ್ಥಳದಲ್ಲಿ ಹದಿನೆಂಟು ವರ್ಷಗಳಿಂದ ಆರಾಧನೆ ನಿಂತು ಹೋದ ಬಳಿಕ ಕಂಪನಿಗೆ ಮತ್ತು ಗ್ರಾಮಸ್ಥರಿಗೆ ಅನೇಕ ಕಷ್ಟ ಕಾರ್ಪಣ್ಯಗಳು ತಲೆದೋರಿದ್ದವು. ಗ್ರಾಮಸ್ಥರಿಗೆ,ಕಂಪೆನಿಗೆ ನಿರಂತರ ಸಮಸ್ಯೆಗಳು ಕಂಡು ಬಂದಿತ್ತು.

 

 

ಭೂ ಸ್ವಾಧೀನ ಪಡೆದುಕೊಂಡಿದ್ದ ಕಂಪನಿ ಈ ಜಾಗದಲ್ಲಿ ದೈವಸ್ಥಾನ ನಿರ್ಮಿಸಿ ಅರ್ಚಕರಿಂದ ತ್ರಿಕಾಲ ಪೂಜಾ ಕೈಂಕರ್ಯ ನಡೆಸುತ್ತಿದೆ. ಹೀಗಿದ್ದರೂ ಕೂಡ ಕಂಪನಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿತ್ತು. ಇದರ ನಡುವೆಯೇ ಎರಡು ತಿಂಗಳ‌ ಹಿಂದೆ ದೈವಸ್ಥಾನದ ಆವರಣ ಗೋಡೆ ನಿರ್ಮಾಣದ ವೇಳೆ ಅಲ್ಲಿದ್ದ ಒಡಿಶಾ ಮೂಲದ ಮುಸ್ಲಿಂ ಯುವಕನ ಮೈ ಮೇಲೆ ದೈವಾವೇಷವಾಗಿತ್ತು. ಈ ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಊರಿನವರು ಪೆರ್ಮುದೆ ಸೋಮನಾಥೇಶ್ವರ ದೇವಸ್ಥಾನದಲ್ಲಿ ಪ್ರಶ್ನಾ ಚಿಂತನೆ ಕೇಳಿದ್ದರು. ಹೀಗೆ ಪ್ರಶ್ನೆ ಕೇಳಿದ ಸಂದರ್ಭ ದೈವ ಪ್ರಶ್ನೆಯಲ್ಲಿ ಗಡುವಾಡು ಸ್ಥಳದಲ್ಲಿ ದೈವಕ್ಕೆ ನೇಮೋತ್ಸವ ಮಾಡಲು ಸೂಚನೆ ಕೊಡಲಾಗಿದೆ. ಈ ಸೂಚನೆಯ ಮೇರೆಗೆ ಹದಿನೆಂಟು ವರ್ಷದ ಬಳಿಕ ಪಿಲಿಚಾಮುಂಡಿ ದೈವಕ್ಕೆ ನೇಮೋತ್ಸವ ಮಾಡಲು ಗ್ರಾಮಸ್ಥರು ತೀರ್ಮಾನ ಕೈಗೊಂಡಿದ್ದಾರೆ.

ಇದನ್ನೂ ಓದಿ: Pitru Paksha: ಪಿತೃಪಕ್ಷದಲ್ಲಿ ಈ 3 ವಸ್ತುಗಳನ್ನು ಖರೀದಿಸಿದ್ರೆ ಮಹಾನ್ ಪಾಪ ಮಾಡಿದಂತೆ !! ನೀವೇನಾದರೂ ಖರಿದಿಸಿದ್ರಾ?!

Leave A Reply

Your email address will not be published.