Darshan Dhruva Sarja: ದರ್ಶನ್‌ರನ್ನು ಮಾತನಾಡಿಸದ ಧ್ರುವ – ಅಸಲಿ ವಿಚಾರ ಬಿಚ್ಟಿಟ್ಟ ಪ್ರಥಮ್‌

Latest news video of Dhruva Sarja not talking to actor Darshan has gone viral

Darshan Dhruva Sarja: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ನಿರಂತರ ಅನ್ಯಾಯ ವಿರೋಧಿಸಿ, ಚಿತ್ರನಟರು ಕೂಡ ಪ್ರತಿಭಟಿಸಿದ್ದಾರೆ. ಆದರೆ ಕಾವೇರಿ ಹೋರಾಟದ ದಿನ ಒಂದೇ ವೇದಿಕೆ ಮೇಲಿದ್ದರೂ ನಟ ದರ್ಶನ್‌ ಅವರನ್ನು ಧ್ರುವ ಸರ್ಜಾ ಮಾತನಾಡಿಸಿರಲಿಲ್ಲ (Darshan Dhruva Sarja) . ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ, ಇಬ್ಬರ ನಡುವೆ ಯಾವುದೂ ಸರಿ ಇಲ್ಲ ಎಂಬ ಗಾಸಿಪ್ ಹರಡಿತ್ತು . ಇದೀಗ ಇದರ ಹಿಂದಿನ ಅಸಲಿ ವಿಚಾರ ಬಹಿರಂಗವಾಗಿದೆ.

ಕಳೆದ ಶುಕ್ರವಾರ ಕಾವೇರಿ ಹೋರಾಟಕ್ಕೆ ಇಡೀ ಕನ್ನಡ ಚಿತ್ರೋದ್ಯಮ ಬೆಂಬಲ ನೀಡಿದ್ದು, ಅಲ್ಲಿ ಕನ್ನಡದ ಘಟಾನುಘಟಿ ಕಲಾವಿದರಾದ ಶಿವರಾಜ್‌ಕುಮಾರ್‌, ದರ್ಶನ್‌, ಶರಣ್‌, ಧ್ರುವ ಸರ್ಜಾ, ಶ್ರೀಮುರಳಿ ವಸಿಷ್ಠ ಸಿಂಹ, ಸೇರಿ ಸಾಕಷ್ಟು ಮಂದಿ ಭಾಗವಹಿಸಿದ್ದರು.

ಆದರೆ ಈ ಹೋರಾಟದಲ್ಲಿ ಇನ್ನೊಂದು ಗಮನ ಸೆಳೆದ ವಿಚಾರ ಏನೆಂದರೆ, ನಟ ಧ್ರು ಸರ್ಜಾ ಕೊಂಚ ಮಂಕಾಗಿದ್ದರು. ಮುಖದಲ್ಲಿ ಸಣ್ಣ ನಗುವೂ ಕಾಣದೇ ಸಪ್ಪಾಗಿದ್ದರು. ವೇದಿಕೆ ಮೇಲೆಯೂ ಅಷ್ಟಾಗಿ ಲವಲವಿಕೆ ಅವರಿಂದ ಕಾಣಿಸಲಿಲ್ಲ. ವೇದಿಕೆ ಮೇಲಿದ್ದ ಶಿವಣ್ಣನನ್ನು ಮಾತನಾಡಿಸಿದ್ದನ್ನು ಬಿಟ್ಟರೇ, ಯಾರನ್ನೂ ಮಾತನಾಡಿಸುವ ಗೋಜಿಗೆ ಹೋಗಿರಲಿಲ್ಲ ಧ್ರುವ. ದರ್ಶನ್‌ ಅವರ ಆಗಮನವಾದರೂ, ಧ್ರುವ ಕುಳಿತ ಸೀಟಿನಿಂದ ಮೇಲೆಳಲಿಲ್ಲ. ಧ್ರುವ ಅವರ ಈ ವರ್ತನೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

ಅಭಿಮಾನಿಗಳ ಪ್ರಕಾರ ವೇದಿಕೆಯಲ್ಲಿ ಹೀಗೆ ಧ್ರುವ ಸುಮ್ಮನೆ ಕುಳಿತಿದ್ದೇ ತಡ, ದರ್ಶನ್‌ ಮತ್ತು ಧ್ರುವ ಸರ್ಜಾ ನಡುವೆ ಯಾವುದೂ ಸರಿಯಿಲ್ಲ ಎಂಬ ಚರ್ಚೆ ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಾಯಿತು. ದರ್ಶನ್‌ ಅಭಿಮಾನಿಗಳು ಧ್ರುವ ಅವರ ನಡೆ ಕಂಡು ಕಿಡಿಕಾರುತ್ತಿದ್ದರು. ಬೆಳೆಯುವಾಗ ಬೇಕಾದರು, ಬೆಳೆದಾದ ಮೇಲೆ ಬೇಡವಾದರು ಎಂದು ಧ್ರುವಗೆ ಟೀಕೆ ಮಾಡುತ್ತಿದ್ದರು. ಇತ್ತ ಈ ಬಗ್ಗೆ ಸ್ವತಃ ಧ್ರುವ ಉತ್ತರಿಸಲಿಲ್ಲ. ದರ್ಶನ್‌ ಆಗಮನವಾಗುತ್ತಿದ್ದಂತೆ, ಕೆಲಹೊತ್ತು ವೇದಿಕೆ ಮೇಲೆ ಕಾಣಿಸಿಕೊಂಡು, ಹೊರಟೇ ಹೋದರು. ಆದರೆ, ಧ್ರುವ ಹೀಗೆ ಮಂಕಾಗಿದ್ದಕ್ಕೆ ಕಾರಣ ಏನಿರಬಹುದು ಎಂದು ಪ್ರಥಮ್ ರಿವೀಲ್ ಮಾಡಿದ್ದಾರೆ.

ಈ ಬಗ್ಗೆ ಭಾನುವಾರ ರಾತ್ರಿ, ಚಿರಂಜೀವಿ ಸರ್ಜಾ ನಟನೆಯ ರಾಜಮಾರ್ತಾಂಡ ಸಿನಿಮಾದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಪ್ರಥಮ್‌, ಅಂದು ಹೋರಾಟದ ವೇದಿಕೆ ಮೇಲೆ ಧ್ರುವ ಮಂಕಾಗಿದ್ದು ಏಕೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ.

ಪ್ರಥಮ್ ಹೇಳಿದಂತೆ, ಧ್ರುವ ಆವತ್ತು ಸಪ್ಪಾಗಿರುವುದಕ್ಕೆ ಕಾರಣ ಅವರ ಅಭಿಮಾನಿಯೊಬ್ಬರ ಸಾವು. ಧ್ರುವ ಸರ್ಜಾ ಅವರ ದೊಡ್ಡ ಅಭಿಮಾನಿಯಾಗಿದ್ದ ರಘುನಾಥ ಭಜಂತ್ರಿ, ಬಂದ್‍ಗಿಂತ ಒಂದು ದಿನ ಮುಂಚಿತವಾಗಿ ತೀರಿ ಹೋದರು. ಹಾಸನ ಮಾರ್ಗವಾಗಿ ಬೇಗೂರಿನಿಂದ ಬರುವಾಗ ಅಪಘಾತದಲ್ಲಿ ಕಾರು-ಬಸ್ಸಿನ ನಡುವೆ ಅಪಘಾತ ಸಂಭವಿಸಿತು. ರಘುನಾಥ್ ಭಜಂತ್ರಿ ಅವರಿಗೆ ಒಂದು ಚಿತ್ರ ನಿರ್ದೇಶನ ಮಾಡುವ ಆಸೆ ಇತ್ತು. ಧ್ರುವ ಅವರನ್ನು ಭೇಟಿ ಮಾಡುವ ಆಸೆಯೂ ಇತ್ತು. ಈ ವಿಷಯವನ್ನು ಧ್ರುವ ಅವರಿಗೂ ಹೇಳಿದ್ದೆ. ಹುಟ್ಟುಹಬ್ಬದ ದಿನ ಕರೆದುಕೊಂಡು ಬರುವುದಕ್ಕೆ ಧ್ರುವ ಹೇಳಿದ್ದರು. ಆದರೆ, ಅಷ್ಟರಲ್ಲಿ ರಘುನಾಥ್‍ ನಿಧನರಾದರು.

ಅವರನ್ನು ಕೊನೆಯ ಒಂದು ಬಾರಿ ನೋಡುವುದು, ಸೆಲ್ಫಿ ತೆಗೆಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ ಈ ವಿಷಯ ಧ್ರುವ ಅವರನ್ನು ತುಂಬಾ ಕಾಡಿದೆ. ಅದೇ ವಿಷಯವನ್ನು ನೆನಪಿಸಿಕೊಂಡು ಕೊರಗುತ್ತಿದ್ದಾರೆ. ಅವರಲ್ಲಿ ಯಾವ ಚೈತನ್ಯವೂ ಇರಲಿಲ್ಲ. ಬಹಳ ಡಿಪ್ರೆಸ್‍ ಆಗಿಬಿಟ್ಟಿದ್ದರು. ಮೂರು ದಿನಗಳ ಕಾಲ ಅವರು ಅನುಭವಿಸಿದ ನೋವು ನನಗ ಮಾತ್ರ ಗೊತ್ತು. ಕಾವೇರಿ ಬಂದ್‍ ದಿನ ಅವರ ಮುಖದಲ್ಲಿ ನಗುವಿಲ್ಲ, ಚೈತನ್ಯವಿಲ್ಲ. ಇದು ಎಷ್ಟೋ ಜನರಿಗೆ ಗೊತ್ತಿಲ್ಲ. ತಮಗೆ ಬೇಕಾಗಿದ್ದನ್ನು ವ್ಯಾಖ್ಯಾನಿಸುತ್ತಾರೆ. ಇವತ್ತಿಗೂ ಅದೇ ನೋವಿನಲ್ಲಿದ್ದಾರೆ. ಆದ್ದರಿಂದ ಅದಕ್ಕೆ ಬೇರೆ ವಿಚಾರಗಳನ್ನು ನೇತು ಹಾಕಬೇಡಿ’ ಎಂದಿದ್ದಾರೆ ಪ್ರಥಮ್.‌

Leave A Reply

Your email address will not be published.