Delhi: ವಿಮಾನ ಮೇಲೇರಿದಂತೆ ಮಗುವಿಗೆ ಶುರುವಾಯ್ತು ಉಸಿರಾಟದ ಸಮಸ್ಯೆ- ಪಕ್ಕದಲ್ಲೇ ಇದ್ದ ವೈದ್ಯರು ಮಾಡಿದ್ದೇನು ?!

Delhi news Baby facing breathing problem in mid air on flight saved by two doctors

Delhi: ಪವಾಡ ಅಂದರೆ ಇದೇ ಇರಬೇಕೇನೋ!! ರಾಂಚಿ-ದೆಹಲಿ(Delhi)ನಡುವಿನ ವಿಮಾನದಲ್ಲಿ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿಗೆ ಪ್ರಯಾಣಿಸುವ ವೇಳೆ ತೀವ್ರ ಉಸಿರಾಟದ ಸಮಸ್ಯೆ ಉಲ್ಬಣವಾಗಿ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯರು(Doctors)ಚಿಕಿತ್ಸೆ ನೀಡಿ ಜೀವ ರಕ್ಷಣೆ ಮಾಡಿದ ಅಪರೂಪದ ಘಟನೆ ವರದಿಯಾಗಿದೆ.

Delhi

 

ವಿಮಾನ ಹಾರಾಟದಲ್ಲಿದ್ದ ಸಂದರ್ಭ ಚಿಕಿತ್ಸೆಗಾಗಿ ರಾಂಚಿಯಿಂದ ಮಗುವನ್ನು(Child)ದೆಹಲಿಯ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ವಿಮಾನದಲ್ಲಿ ಮಗುವಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಈ ವೇಳೆ ಮಗುವಿನ ತಾಯಿ ಏನು ಮಾಡಬೇಕೆಂದು ತಿಳಿಯದೇ ವಿಮಾನದ ಸಿಬ್ಬಂದಿ ವಿಚಾರ ತಿಳಿಸಿದ್ದು, ವಿಮಾನ ಸಿಬ್ಬಂದಿಗಳು ಯಾರಾದರೂ ವೈದ್ಯರಿದ್ದರೆ ಮಗುವಿನ ರಕ್ಷಣೆಗೆ ನೆರವಾಗುವಂತೆ ಮನವಿ ಮಾಡಿದ್ದಾರೆ. ಅದೃಷ್ಟವಶಾತ್ ಅದೇ ವಿಮಾನದಲ್ಲಿ ಸಂಚರಿಸುತ್ತಿದ್ದ ಐಎಎಸ್ ಅಧಿಕಾರಿಯಾದ ಜಾರ್ಖಂಡ್ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ಡಾ.ನಿತಿನ್ ಕುಲಕರ್ಣಿ ಮತ್ತು ರಾಂಚಿಯ ಸದರ್ ಆಸ್ಪತ್ರೆಯ ಡಾ.ಮೊಝಮ್ಮಿಲ್ ಫೆರೋಜ್ ಮಗುವಿನ ರಕ್ಷಣೆಗೆ ಮುಂದಾಗಿದ್ದಾರೆ.

ವಯಸ್ಕರಿಗೆ ಬಳಸುವ ಮಾಸ್ಕ್ ಬಳಸಿ ಆಮ್ಲಜನಕ ಪೂರೈಕೆಗೆ ವ್ಯವಸ್ಥೆ ಮಾಡಿದ್ದು, ಮೊದಲ 15-20 ನಿಮಿಷಗಳು ಬಹಳ ನಿರ್ಣಾಯಕವಾಗಿತ್ತು. ಆನಂತರ, ಮಗುವಿನ ಪೋಷಕರ ಬಳಿ ಇದ್ದ ಚುಚ್ಚುಮದ್ದನ್ನು ವೈದ್ಯರು ನೀಡಿ ಚಿಕಿತ್ಸೆ ನೀಡಿದ್ದಾರೆ. ಅವರ ಬಳಿ ಇಟ್ಟುಕೊಂಡಿದ್ದ ಚುಚ್ಚುಮದ್ದು ಬಹಳ ಸಹಕರಿಯಾಯಿತು ಎಂದು ವೈದ್ಯರು ತಿಳಿಸಿದ್ದಾರೆ. ಕೊನೆಗೆ ಮಗುವಿನ ಕಣ್ಣುಗಳು ಸಹಜ ಸ್ಥಿತಿಗೆ ಬಂದಿರುವುದನ್ನು ವೈದ್ಯರು ಖಾತ್ರಿ ಪಡಿಸಿದ್ದಾರೆ. ವಿಮಾನ ಲ್ಯಾಂಡ್ ಆದ ನಂತರ ವೈದ್ಯಕೀಯ ತಂಡವು ಮಗುವನ್ನು ಆರೈಕೆ ಮಾಡಿದ್ದು, ಡಾ.ಮೊಝಮ್ಮಿಲ್ ಫೆರೋಜ್ ಹಾಗೂ ಡಾ.ನಿತಿನ್ ಕುಲಕರ್ಣಿ ಅವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: Karnataka: ಮತ್ತೊಂದು ರೈತ ಹೋರಾಟಕ್ಕೆ ಸಾಕ್ಷಿಯಾಗಲಿದೆ ಕರ್ನಾಟಕ – ರಾಜಭವನದತ್ತ ಹೊರಟ ತೆಂಗು ಬೆಳೆಗಾರರು

Leave A Reply

Your email address will not be published.