Madya Pradesh: ನಾವು ಮತ್ತೆ ಅಧಿಕಾರಕ್ಕೆ ಬಂದ್ರೆ ‘ಒಂದು ಮನೆಗೆ ಒಂದು ಉದ್ಯೋಗ’ ಗ್ಯಾರಂಟಿ- ಮಹತ್ವದ ಘೋಷಣೆ ಮಾಡಿತು ಈ ಪಕ್ಷ

madhya Pradesh news Job for each household in state CM Shivraj Singh chouhan promises

Shivraj Singh Chouhan: ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯಗಳು ಬಿರುಸುಗೊಂಡಿದ್ದು ಚುನಾವಣಾ ಮತ ಭೇಟೆಗೆರಾಜಕೀಯ ಪಕ್ಷಗಳು ನಾನಾ ರಂತಂತ್ರ ಹೆಣೆಯುತ್ತಿವೆ. ಇದೀಗ,ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌(Shivraj Singh Chouhan) ಅವರು ‘ಬಿಜೆಪಿ(BJP)ಮತ್ತೆ ಅಧಿಕಾರಕ್ಕೆ ಮರಳಿದರೆ, ಪ್ರತಿ ಮನೆಗೊಂದು ಉದ್ಯೋಗ ನೀಡಲಾಗುವ ಕುರಿತು ಆಶ್ವಾಸನೆ ನೀಡಿದ್ದಾರೆ.

Shivraj Singh Chouhan

ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ತೊಡೆದು ಹಾಕಲು ಬಿಜೆಪಿಯ ಚೌಹಾಣ್‌ ನೇತೃತ್ವದ ಸರ್ಕಾರ ಸೋತಿದೆ ಎಂದು ಟಾಂಗ್ ನೀಡುತ್ತಲೇ ಬರುತ್ತಿದೆ. ಇದರ ಬೆನ್ನಲ್ಲೇ ಶುಕ್ರವಾರ ಅಲಿರಾಜ್‌ಪುರ ಜಿಲ್ಲೆಯಲ್ಲಿ ನಡೆದ ರ್‍ಯಾಲಿಯಲ್ಲಿ ಚೌಹಾಣ್‌ ಅವರು ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೊಂದು ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ. ಸ್ವಸಹಾಯ ಗುಂಪುಗಳ ಮೂಲಕ ಇಲ್ಲವೇ ಉದ್ಯಮ ಕ್ರಾಂತಿ ಯೋಜನೆ ಮುಖಾಂತರ ಉದ್ಯೋಗ ನೀಡುವುದಾಗಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿಕೆ ನೀಡಿದ್ದಾರೆ.

‘ನಾನು ಮಧ್ಯಪ್ರದೇಶದ ಅಭಿವೃದ್ಧಿಯ ಸಲುವಾಗಿ ಮತ್ತು ಸಾರ್ವಜನಿಕರಿಗಾಗಿ ಮುಖ್ಯಮಂತ್ರಿಯಾದವನು, ಹೀಗಾಗಿ, ಜನರ ಜೀವನ ಮಟ್ಟ ಸುಧಾರಣೆ ಮಾಡುವ ಸಲುವಾಗಿ ಹಗಲು- ರಾತ್ರಿ ಶ್ರಮಿಸುವುದಾಗಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ನಾನು ರಾಜ್ಯದ ಜನರ ಕಷ್ಟಗಳನ್ನು ದೂರ ಮಾಡುತ್ತೇನೆ. ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಲ್ಲಿ, ಪ್ರತಿ ಕುಟುಂಬಕ್ಕೂ ಉದ್ಯೋಗ ಒದಗಿಸಲಾಗುತ್ತದೆ. ಈ ಮೂಲಕ ಇಲ್ಲಿನ ಜನರು ವಲಸೆ ಹೋಗುವ ಸಮಸ್ಯೆ ತಪ್ಪಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: BEML Group C Recruitment: ಐಟಿಐ ಪಾಸಾದವರಿಗೆ ಭರ್ಜರಿ ಸಿಹಿ ಸುದ್ದಿ! ಬಿಇಎಂಎಲ್ ನಲ್ಲಿ ಉದ್ಯೋಗಾವಕಾಶ!

Leave A Reply

Your email address will not be published.