Menstrual leave: ಈ ಕಾಲೇಜಿನ ಹೆಣ್ಣುಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್ : ಋತುಸ್ರಾವದ ರಜೆ ಘೋಷಣೆ ಮಾಡಿದ ಆಡಳಿತ ಸಂಸ್ಥೆ
Education news Madhya Pradesh news menstrual leave policy for female student in jabalpur
Menstrual leave: ಪ್ರತೀ ತಿಂಗಳು (Every Month) ವಿದ್ಯಾರ್ಥಿನಿಯರು ಪಿರಿಯಡ್ಸ್ (Menstrual) ಸಮಯದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಈ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ನೋವು ಅಸಹನೀಯವಾಗಿರುತ್ತದೆ.
ಮುಖ್ಯವಾಗಿ ಮಾಸಿಕ ಋತು ಸ್ರಾವದ ಸಮಯದಲ್ಲಿ ತಲೆನೋವು, ವಾಕರಿಕೆ, ಮೈಗ್ರೇನ್, ಮೂಡ್ ಸ್ವಿಂಗ್ಸ್, ದೇಹದ ಸೆಳೆತ ಮುಂತಾದ ಸಮಸ್ಯೆಗೆ ಕಾರಣವಾಗುತ್ತದೆ. ಈ ಕುರಿತು ಮಹತ್ವದ ಬೆಳವಣಿಗೆಯೊಂದರಲ್ಲಿ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಧರ್ಮಶಾಸ್ತ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವು ವಿವಿಯ ವಿದ್ಯಾರ್ಥಿನಿಯರಿಗೆ ಋತುಸ್ರಾವದ ರಜೆಗಳನ್ನು (Menstrual leave) ಅನುಮೋದಿಸಿದೆ. ಪ್ರಸಕ್ತ ಸೆಮಿಸ್ಟರ್‌ನಿಂದಲೇ ಈ ನಿಯಮ ಜಾರಿಯಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಹೌದು, ವಿದ್ಯಾರ್ಥಿನಿಯರಿಗೆ ಋತುಸ್ರಾವದ ರಜೆ ನೀಡಬೇಕು ಎಂಬುದು ಬಹು ಸಮಯದ ಬೇಡಿಕೆಯಾಗಿದ್ದು, ವಿದ್ಯಾರ್ಥಿನಿಯರ ಒಕ್ಕೂಟವೂ ಇದಕ್ಕೆ ಕಳೆದ ವರ್ಷದಿಂದಲೂ ಬೇಡಿಕೆ ಇಟ್ಟಿತ್ತು. ಈ ಹಿನ್ನೆಲೆಯಲ್ಲಿ ಪ್ರತಿ ಸೆಮಿಸ್ಟರ್‌ಗೆ 6 ರಜೆಗಳನ್ನು ನೀಡುತ್ತಿದ್ದು, ವಿದ್ಯಾರ್ಥಿನಿಯರು ಅವುಗಳನ್ನು ಋತುಸ್ರಾವದ ರಜೆಯನ್ನಾಗಿ ಬಳಸಿಕೊಳ್ಳಲು ವಿವಿಯ ಡೀನ್ ಸಮ್ಮತಿ ನೀಡಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ. ಸದ್ಯ ಈ ರಜೆಯು ವಿದ್ಯಾರ್ಥಿನಿಯರು ತಮ್ಮ ಆರೋಗ್ಯ ಸುಧಾರಿಸಿಕೊಳ್ಳಲು ಸಹಾಯವಾಗಬಲ್ಲದು.
ಇದನ್ನೂ ಓದಿ: ಅಜ್ಜಿಯ ತಿಥಿ ಕಾರ್ಯಕ್ಕೆ ಬಂದವರು ನಾಲೆಗೆ ಬಿದ್ದು ಸಾವು! ಒಂದೇ ಕುಟುಂಬದ ಮೂವರು ನೀರುಪಾಲು!