Banking Time: ಬ್ಯಾಂಕ್ ಗಳ ಅವಧಿಯಲ್ಲಿ ಮಹತ್ವದ ಬದಲಾವಣೆ !! ಗ್ರಾಹಕರೇ.. ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್

Bank news Indian banking association announce change in banking time

Banking Time: ಬ್ಯಾಂಕಿಂಗ್ ಕೆಲಸದ ಸಮಯದಲ್ಲಿ (Banking Time) ಭಾರೀ ಬದಲಾವಣೆ ಮಾಡಲು ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗಿಗಳು ಮುಂದಾಗಿದ್ದಾರೆ. ಅಕ್ಟೋಬರ್ 1ರಿಂದಲೇ ಈ ಹೊಸ ನಿಯಮ ಜಾರಿಗೆ ತರಲು ಸ್ವತಃ ಬ್ಯಾಂಕಿಂಗ್ ಉದ್ಯೋಗಿಗಳ ಸಂಘಟನೆ ಮುಂದಾಗಿದೆ. ಗ್ರಾಹಕರೇ, ಈ ಬಗ್ಗೆ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್ !

ಬ್ಯಾಂಕ್‌ಗಳಲ್ಲಿ (bank) ಸಾಕಷ್ಟು ಸಂಖ್ಯೆಯ ಉದ್ಯೋಗಿಗಳನ್ನು ನೇಮಿಸಲು ಒತ್ತಾಯಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಮುಷ್ಕರಕ್ಕೆ ಸಿದ್ಧತೆ ನಡೆಸಿದೆ. ಈ ವೇಳೆ ತಮ್ಮ ಮೇಲೆ ಅನಗತ್ಯ ಹೊರೆ ಹೊರಿಸುತ್ತಿರುವ ಆರೋಪ ಮಾಡಿರುವ ‘ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ’ ನಾಳೆಯಿಂದಲೇ ಜಾರಿಗೆ ಬರುವಂತೆ ಬ್ಯಾಂಕಿಂಗ್ ಕೆಲಸದ ಅವಧಿಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ.

ಇದೀಗ ‘ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ’ ನೀಡಿರುವ ಸುತ್ತೋಲೆಯ ಪ್ರಕಾರ, ಅನೇಕ ಬ್ಯಾಂಕ್ ಶಾಖೆಗಳಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆ ಕಾರಣ ನೌಕರರು ಸಾಮಾನ್ಯವಾದ ಕಚೇರಿ ಸಮಯ ಮೀರಿ ಕೆಲಸ ಮಾಡಬೇಕಾಗಿದೆ. ಈ ಹಿನ್ನೆಲೆ ಸೂಕ್ತವಾಗಿ ಖಾಲಿ ಹುದ್ದೆಗಳ ಭರ್ತಿಗೆ ಒತ್ತಾಯ ಮಾಡುತ್ತಿದ್ದರೂ, ಬ್ಯಾಂಕ್ ಆಡಳಿತ ಮಂಡಳಿಗಳು ಮುಂದೆ ಬರದ ಕಾರಣ ಸಮಸ್ಯೆ ಸೃಷ್ಟಿಯಾಗಿದೆ. ಹಾಗೇ ಹೆಚ್ಚಿನ ಕೆಲಸದ ಹೊರೆಯು ಈಗ ಇರುವ ಉದ್ಯೋಗಿಗಳ ಮೇಲೆಯೇ ಬೀಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಹೀಗಾಗಿ ಅಕ್ಟೋಬರ್ 1, 2023 ರಿಂದ ಜಾರಿಗೆ ಬರುವಂತೆ ಬ್ಯಾಂಕ್ ಉದ್ಯೋಗಿಗಳು ಕಚೇರಿಯ ಅವಧಿ ಮೀರಿ ಕೆಲಸ ಮಾಡದಂತೆ ಕರೆ ನೀಡಲಾಗಿದೆ. ಆ ಪ್ರಕಾರ ಎಐಬಿಇಎ ಎಲ್ಲಾ ಸದಸ್ಯರಿಗೆ ನಿಯಮಿತ ಕಚೇರಿ ಸಮಯ ಅಂದ್ರೆ ಬೆಳಗ್ಗೆ 9.45 ರಿಂದ ಸಂಜೆ 4.45 ಮೀರಿ ಕೆಲಸ ಮಾಡದಂತೆ ಕರೆ ನೀಡಲಾಗಿದೆ.

ಇದನ್ನೂ ಓದಿ: Nitin Gadkari: ‘2024 ರ ಲೋಕಸಭಾ ಚುನಾವಣೆಯಲ್ಲಿ ಇದಾವುದು ಇರೋದಿಲ್ಲ, ನಾವು ಅದಾವುದನ್ನೂ ಹಾಕುವುದಿಲ್ಲ’ !! ಅಚ್ಚರಿಯ ಹೇಳಿಕೆ ನೀಡಿದ ನಿತಿನ್ ಗಡ್ಕರಿ !

Leave A Reply

Your email address will not be published.