ವಿಟ್ಲ: ಸೇತುವೆಗೆ ಬೈಕ್ ಡಿಕ್ಕಿ ಹೊಡೆದು 40 ಅಡಿ ಆಳದ ನದಿಗೆ ಬಿದ್ದ ಸವಾರ !

Latest news accident news Vitla bike hit the bridge and the rider fell into the river

Vitla: ಬೈಕೊಂದು ಸೇತುವೆಗೆ ಡಿಕ್ಕಿ ಹೊಡೆದು ಅದರಲ್ಲಿದ್ದ ಸವಾರನೋರ್ವ ನಲುವತ್ತು ಅಡಿ ಆಳದ ನದಿಗೆ ಬಿದ್ದಿರುವ ಘಟನೆಯೊಂದು ನಡೆದಿದ್ದು, ನಂತರ ಅಲ್ಲಿನ ಸ್ಥಳೀಯ ಯುವಕರು ರಕ್ಷಿಸಿರುವ ಘಟನೆಯೊಂದು ನಡೆದಿದೆ. ಈ ಘಟನೆ ವಿಟ್ಲಪಡ್ನೂರು ಗ್ರಾಮದ ಕೊಡಂಗಾಯಿಯಲ್ಲಿ ನಡೆದಿದೆ. ಹರ್ಷವರ್ಧನ ಭಟ್‌ (55) ತಮ್ಮ ಬೈಕಿನಲ್ಲಿ ವಿಟ್ಲದತ್ತ ತಮ್ಮ ಕೆಲಸಕ್ಕೆಂದು ಶನಿವಾರ ಬೆಳಗ್ಗೆ ನಾಲ್ಕು ಗಂಟೆಗೆ ತನ್ನ ಬೈಕಿನಲ್ಲಿ ಹೊರಟಿದ್ದರು.

 

ಈ ಸಂದರ್ಭದಲ್ಲಿ ವಿಟ್ಲ(Vitla)-ಸಾಲೆತ್ತೂರು ರಸ್ತೆಯ ಕೊಡಂಗಾಯಿ ಸೇತುವೆಯ ತಡೆಗೋಡೆಗೆ ಬೈಕ್‌ ಡಿಕ್ಕಿ ಹೊಡೆದಿದ್ದು, ಸವಾರ ಹರ್ಷವರ್ಧನ ಅವರು 40 ಅಡಿ ಆಳದ ನದಿಗೆ ಬಿದ್ದಿದ್ದಾರೆ.

ಕೂಡಲೇ ಅಲ್ಲಿದ್ದ ಸ್ಥಳೀಯರು ಅಪಘಾತ ಸಂಭವಿಸಿದ್ದನ್ನು ಗಮನಿಸಿ, ಸವಾರನನ್ನು ಹುಡುಕಲು ಪ್ರಾರಂಭಿಸಿದ್ದಾರೆ. ನಂತರ ಅವರಿಗೆ ಹೊಳೆ ಮಧ್ಯೆ ಓರ್ವ ವ್ಯಕ್ತಿ ಜೋರಾಗಿ ಕೂಗಾಡುತ್ತಿರುವ ಶಬ್ದ ಕೇಳಿಸಿದ್ದು, ತಕ್ಷಣ ನದಿಗೆ ಯುವಕರು ಹಾರಿ ಆ ವ್ಯಕ್ತಿಯನ್ನು ಮೇಲಕ್ಕೆತ್ತಿ ಜೀವ ಉಳಿಸಿದ್ದಾರೆ.

ನಂತರ ಮುಸಲ್ಮಾನ ಬಾಂಧವ ಯುವಕರು ಗಾಯಾಳುವನ್ನು ಉಪಚರಿಸಿದ್ದು, ಆಟೋ ಮೂಲಕ ಮನೆಗೆ ತಲುಪಿಸಿ ಮಾನವೀಯತೆ ಮರೆದಿದ್ದಾರೆ. ಗಾಯಾಳು ಹರ್ಷವರ್ಧನ ಅವರ ಮನೆಯವರು ಯುವಕರ ಕೆಲಸಕ್ಕೆ ಮನಃಪೂರ್ವಕವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

 

ಇದನ್ನು ಓದಿ:  Virat And Anushka: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಕಿಂಗ್​ ಕೊಹ್ಲಿ-ಅನುಷ್ಕಾ ದಂಪತಿ

Leave A Reply

Your email address will not be published.