Pakistan Flag: ಮನೆಯ ಮೇಲೆ ಪಾಕಿಸ್ತಾನದ ಧ್ವಜ ಹಾರಾಟ! ತಂದೆ ಮಗನ ಬಂಧನ

Latest news Father and son arrested for flying Pakistan flag on house

Pakistan Flag: ಉಂಡ ಮನೆಗೆ ದ್ರೋಹ ಬಗೆಯುವ ಕೆಲಸ ಮಾಡುವುದು ಅಪರಾಧಕ್ಕೆ ಸಮ. ಅಂತೆಯೇ ಭಾರತ ನೆಲದಲ್ಲಿ ಇದ್ದು, ಭಾರತದ ಶತ್ರು ರಾಷ್ಟ್ರವನ್ನು ಪ್ರತಿನಿಧಿಸುವುದು ಅಕ್ಷಮ್ಯ ಅಪರಾಧವೇ ಸರಿ. ಅಂತೆಯೇ ಉತ್ತರ ಪ್ರದೇಶದ ಮೊರಾದಾಬಾದ್‌ನ ಮನೆಯೊಂದರಲ್ಲಿ ಪಾಕಿಸ್ತಾನದ ಧ್ವಜ (Pakistan Flag) ಹಾರಿಸಲಾಗಿದ್ದು, ಆ ಪ್ರದೇಶದಲ್ಲಿ ಕೋಲಾಹಲ ಉಂಟಾಗಿತ್ತು. ಜನರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಾಹಿತಿ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿ, ಮನೆಯಲ್ಲಿದ್ದ ಪಾಕಿಸ್ತಾನಿ ಧ್ವಜವನ್ನು ತೆಗೆದುಹಾಕಿದ್ದಾರೆ ಮತ್ತು ಅವರ ಮನೆಯಲ್ಲಿ ಪಾಕಿಸ್ತಾನಿ ಧ್ವಜವನ್ನು ಹಾರಿಸಿದ್ದ ರಯೀಸ್ ಮತ್ತು ಅವರ ಮಗ ಸಲ್ಮಾನ್ ಅವರನ್ನು ಬಂಧಿಸಿದ್ದಾರೆ.

ಮೂಲತಃ ಉತ್ತರ ಪ್ರದೇಶದ ಮೊರಾದಾಬಾದ್‌ನ ಭಗತ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬುರ್ಹಾನ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಾಹಿತಿ ಪ್ರಕಾರ, ಭಗತ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬುರ್ಹಾನ್‌ಪುರ ಗ್ರಾಮದಲ್ಲಿ ಬಟ್ಟೆ ಅಂಗಡಿ ನಡೆಸುತ್ತಿರುವ ರಯೀಸ್ ಮತ್ತು ಅವರ ಪುತ್ರ ಸಲ್ಮಾನ್, ಬಿಳಿ ಮತ್ತು ಹಸಿರು ಬಟ್ಟೆಯಿಂದ ಪಾಕಿಸ್ತಾನಿ ಧ್ವಜವನ್ನು ತಯಾರಿಸಿ ಮನೆಯ ಮೇಲ್ಛಾವಣಿಯ ಮೇಲೆ ಹಾಕಿದ್ದರು. ಈ ಧ್ವಜವನ್ನು ಕಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮನೆಯ ಮೇಲ್ಛಾವಣಿಯ ಮೇಲೆ ಪಾಕಿಸ್ತಾನದ ಧ್ವಜವನ್ನು ಸ್ಥಾಪಿಸಿರುವುದನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾದರು ಮತ್ತು ಯಾರೋ ಒಬ್ಬರು ಪಾಕಿಸ್ತಾನಿ ಧ್ವಜದ ವೀಡಿಯೊವನ್ನು ಮಾಡಿದ್ದಾರೆ ಮತ್ತು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾರೆ, ನಂತರ ಪೊಲೀಸರು ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡ ಮನೆಯಲ್ಲಿ ಹಾರಾಡುತ್ತಿದ್ದ ಪಾಕಿಸ್ತಾನದ ಧ್ವಜವನ್ನು ಕೆಳಗಿಳಿಸಿ, ರಯೀಸ್ ಹಾಗೂ ಆತನ ಪುತ್ರ ಸಲ್ಮಾನ್ ನನ್ನು ಬಂಧಿಸಲಾಯಿತು.

ಪೊಲೀಸರು, ಇಬ್ಬರೂ ಆರೋಪಿಗಳನ್ನು ಅವರ ಮನೆಯಲ್ಲಿ ಪಾಕಿಸ್ತಾನಿ ಧ್ವಜವನ್ನು ಹಾಕಲು ಕಾರಣವನ್ನು ಕೇಳಿದಾಗ ಯಾವುದೇ ಉತ್ತರವನ್ನು ನೀಡಿಲ್ಲ ಎಂದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಅವರ ವಿರುದ್ಧ ಭಗತ್‌ಪುರ ಪೊಲೀಸ್ ಠಾಣೆಯಲ್ಲಿ ಕಲಂ 153 ಎ ಮತ್ತು 153 ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

 

ಇದನ್ನು ಓದಿ: Karnataka Sene Protest: ವಿಮಾನ ಟಿಕೆಟ್ ಪಡೆದ ಕಾವೇರಿ ಹೋರಾಟಗಾರರು – ಏರ್ ಪೋರ್ಟ್ ಒಳಗೆ ನುಗ್ಗಿ ಮಾಡಿದ್ದೇನು ಗೊತ್ತೇ ?!

Leave A Reply

Your email address will not be published.