Karnataka Sene Protest: ವಿಮಾನ ಟಿಕೆಟ್ ಪಡೆದ ಕಾವೇರಿ ಹೋರಾಟಗಾರರು – ಏರ್ ಪೋರ್ಟ್ ಒಳಗೆ ನುಗ್ಗಿ ಮಾಡಿದ್ದೇನು ಗೊತ್ತೇ ?!

Karnataka Bandh Pro-Kannada activists enter airport premises to protest and five detained latest news

Karnataka Sene Protest: ತಮಿಳುನಾಡಿಗೆ ಕಾವೇರಿ ನೀರು(Cauvery Issue)ಹರಿಸುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ರಾಜಧಾನಿ ಬೆಂಗಳೂರು ಬಂದ್ ಗೆ (Bengaluru Band)ಕರೆ ನೀಡಿದ್ದವು. ಈ ನಡುವೆ, ರಾಜ್ಯಾದ್ಯಾಂತ ಇಂದು (ಶುಕ್ರವಾರ)29.09.23ರಂದು ತಮಿಳುನಾಡಿಗೆ ನೀರು ಹರಿಸಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆ ಕರೆ ನೀಡಿರುವ ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ರಾಜ್ಯದ ವಿವಿಧೆಡೆಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ.

 

ಕಾವೇರಿ ನೀರಿಗಾಗಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು, ರೈತ ಸಂಘಟನೆಗಳ ಹೋರಾಟ ಜೋರಾಗಿದ್ದು, ಈ ನಡುವೆ ಕೆಂಪೇಗೌಡ ಅಂತರಾಷ್ಟ್ರ ವಿಮಾನ ನಿಲ್ದಾಣಕ್ಕೂ ಪ್ರತಿಭಟನೆಯ ಕಿಚ್ಚು ಹಬ್ಬಿದೆ.ಐದು ಜನ ಕರ್ನಾಟಕ ಸೇನೆ ಕಾರ್ಯಕರ್ತರು ಇಂಡಿಗೋ 7731 ವಿಮಾನದ ಟಿಕೆಟ್ ಬುಕ್ ಮಾಡಿಕೊಂಡು ವಿಮಾನ ನಿಲ್ದಾಣದೊಳಗೆ ಪ್ರವೇಶಿಸಿ ಪ್ರತಿಭಟನೆ(Karnataka Sene Protest) ನಡೆಸಲು ಮುಂದಾಗಿದ್ದು, ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು(Police)ಕಾರ್ಯಕರ್ತರನ್ನು ತಡೆದು ಬಂಧಿಸಿದ ಘಟನೆ ವರದಿಯಾಗಿದೆ.

 

ಇದನ್ನು ಓದಿ: Student Brutal Murder: ಅವಾಚ್ಯ ಶಬ್ದಗಳಿಂದ ಬೈಗುಳ- ವಿದ್ಯಾರ್ಥಿಯನ್ನ ಬರ್ಬರವಾಗಿ ಕೊಚ್ಚಿ ಕೊಂದ ಪಾಪಿಗಳು

Leave A Reply

Your email address will not be published.