Gruhalakshmi Scheme: ಮಹಿಳೆಯರೆ ಗಮನಿಸಿ- ಇದೊಂದು ಕಂಡೀಷನ್ ಪಾಲಿಸಿದ್ರೆ ಮಾತ್ರ ನಿಮಗೆ ಗೃಹಲಕ್ಷ್ಮೀಯ ಹಣ ಸಿಗುತ್ತೆ !
Latest news new condition in Gruhalakshmi Scheme
Gruhalakshmi Scheme: ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರಕಾರವು ‘ಗೃಹಲಕ್ಷ್ಮಿ’ ಯೋಜನೆ (Gruhalakshmi Scheme) ಆರಂಭಿಸಿದೆ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ತಿಂಗಳಿಗೆ 2,000 ರೂಪಾಯಿ ಸಿಗುತ್ತದೆ. ಸದ್ಯ ಗೃಹಲಕ್ಷ್ಮಿ’ ಯೋಜನೆಯ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ. ಇದೊಂದು ಕಂಡೀಷನ್ ಪಾಲಿಸಿದ್ರೆ ಮಾತ್ರ ನಿಮಗೆ ಗೃಹಲಕ್ಷ್ಮೀಯ ಹಣ ಸಿಗುತ್ತೆ !
ಈಗಾಗಲೇ ಮೊದಲ ಹಾಗೂ ಎರಡನೇ ತಿಂಗಳ ಗೃಹಲಕ್ಷ್ಮೀ 2000 ರೂ ಹಣವನ್ನು ಸರ್ಕಾರ ಜಮಾ ಮಾಡಲಾಗಿದೆ. ನೀವು ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಗೆ ಅರ್ಜಿ ಸಲ್ಲಿಸಿದ್ದು, ಖಾತೆಗೆ ಹಣ ಜಮಾ ಆಗಿಲ್ಲವಾದರೆ ಅಂತಹ ಮಹಿಳೆಯರು ಖಾತೆಗೆ ಸಂಬಂಧ ಪಟ್ಟಂತೆ ಈ ಕೆಲಸವನ್ನು ತಪ್ಪದೇ ಮಾಡಬೇಕಾಗುತ್ತದೆ.
ರೇಷನ್ ಕಾರ್ಡ್ (Ration Card) ಸಕ್ರಿಯವಾಗಿದ್ದಾಗ ಮಾತ್ರ ಸರ್ಕಾರದ ಯೋಜನೆಗಳ ಹಣವನ್ನು ಪಡೆಯಲು ಸಾಧ್ಯವಾಗಿದೆ. ಹೀಗಾಗಿ ಮೊದಲಿಗೆ ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಿ ರೇಷನ್ ಕಾರ್ಡ್ ಸಕ್ರಿಯರಾಗಿದ್ದೆಯಾ ಎಂದು ಖಚಿತ ಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ.
ಮೊದಲಿಗೆ ಮಾಹಿತಿ ಕಣಜ ವೆಬ್ ಸೈಟ್ ಗೆ www.mahitikanaja.karnataka.gov.in ಗೆ ಕ್ಲಿಕ್ ಮಾಡುವ ಮೂಲಕ ಭೇಟಿಕೊಡಬೇಕು. ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಎಂಟ್ರಿ ಮಾಡಿ ನಿಮ್ಮ ಜಿಲ್ಲೆ ಸೆಲೆಕ್ಟ್ ಮಾಡಬೇಕು. ನಂತರದಲ್ಲಿ ರೇಷನ್ ಕಾರ್ಡ್ ಕುರಿತ ಸಂಪೂರ್ಣ ಮಾಹಿತಿ ಸ್ಕ್ರೀನ್ ಮೇಲೆ ಬರುತ್ತದೆ. ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿ, ನ್ಯಾಯಬೆಲೆ ಅಂಗಡಿ ಮತ್ತು ರೇಷನ್ ಕಾರ್ಡ್ ಸ್ಥಿತಿಯ ಬಗ್ಗೆ ಮಾಹಿತಿಯು ನಿಮಗೆ ಕಾಣಸಿಗುತ್ತದೆ. ಇಲ್ಲಿ ರೇಷನ್ ಕಾರ್ಡ್ ಸ್ಥಿತಿ ಸಕ್ರಿಯವಾಗಿದ್ದರೆ ಸಕ್ರಿಯ ಎಂದು ಡಿಸ್ಪ್ಲೇ ಮೇಲೆ ಕಾಣಿಸುತ್ತದೆ.
ರೇಷನ್ ಕಾರ್ಡ್ (Ration Card), ಆಧಾರ್ ಕಾರ್ಡ್ (Aadhar Card) ಮತ್ತು ಬ್ಯಾಂಕ್ ವಿವರ (Bank Details) ದಲ್ಲಿ ಮಾಹಿತಿಗಳು ಹೊಂದಾಣಿಕೆ ಆಗಿರಬೇಕು. ಆಧಾರ್ ಲಿಂಕ್ (Aadhar Link) ಮಾತ್ರವಲ್ಲ ಸೀಡಿಂಗ್ ಆಗಿ NPCI ಮ್ಯಾಪಿಂಗ್ ಕೂಡ ಆಗಿರುವುದು ಕಡ್ಡಾಯವಾಗಿದೆ