M P Renukacharya: ಕಾಂಗ್ರೆಸ್ ಸೇರ್ಪಡೆ ವಿಚಾರ- ಬಿಗ್ ಅಪ್ಡೇಟ್ ಕೊಟ್ಟ ಎಂ ಪಿ ರೇಣುಕಾಚಾರ್ಯ !!

Karnataka Political news M P Renukacharya gave a big update about Congress joining issue

M P Renukacharya: ಕೆಲವು ತಿಂಗಳಿಂದ ರಾಜ್ಯ ರಾಜಕೀಯದಲ್ಲಿ ಬಿಜೆಪಿಯ ಪ್ರಬಲ ನಾಯಕ, ಮಾಜಿ ಶಾಸಕ ಹಾಗೂ ಬಿ ಎಸ್ ಯಡಿಯೂರಪ್ಪನವರ ಪರಮಾಪ್ತರಾಗಿರುವ ಎಂಪಿ ರೇಣುಕಾಚಾರ್ಯ(M P Renukacharya) ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ವಿಚಾರ ಭಾರಿ ಸದ್ದು ಮಾಡಿತ್ತು. ಆದರೀಗ ಈ ಕುರಿತು ಸ್ವತಃ ರೇಣುಕಾಚಾರ್ಯ ಅವರೇ ಸ್ಪಷ್ಟೀಕರಣ ನೀಡಿದ್ದಾರೆ.

ಲೋಕಸಭಾ ಚುನಾವಣೆ(Parliament election)ಹೊತ್ತಲ್ಲೇ ರಾಜ್ಯದಲ್ಲಿ ಹಾಗೂ ದೇಶದ ರಾಜಕೀಯದಲ್ಲಿ ಪಕ್ಷಾಂತರದ ವಿಚಾರಗಳು ಭಾರಿ ಸದ್ದು ಮಾಡುತ್ತಿವೆ. ರಾಜ್ಯದಲ್ಲಿ ಈಗಾಗಲೇ ಕೆಲವು ನಾಯಕರು ಬಿಜೆಪಿಯಿಂದ(BJP) ಕಾಂಗ್ರೆಸ್ಗೆ, ಕಾಂಗ್ರೆಸ್(Congress) ನಿಂದ ಜೆಡಿಎಸ್(JDS) ಗೆ ಪಕ್ಷಾಂತರ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅದರಲ್ಲೂ ಕೂಡ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ಎರಡು ಪಕ್ಷದ ನಾಯಕರಲ್ಲಿ ಭಿನ್ನಾಭಿಪ್ರಾಯ ಮೂಡಿ ಕೆಲವು ನಾಯಕರು ಕಾಂಗ್ರೆಸ್ ಸೇರಲು ಮುಂದಾಗುತ್ತಿದ್ದಾರೆ. ಇನ್ನು ಕೆಲವು ತಿಂಗಳಿಂದ ಬಿಜೆಪಿಯ ಪ್ರಬಲ ನಾಯಕ ಹಾಗೂ ಮಾಜಿ ಶಾಸಕರಾಗಿರುವಂತಹ ಎಂಪಿ ರೇಣುಕಾಚಾರ್ಯ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ವಿಚಾರ ಭಾರಿ ಸದ್ದು ಮಾಡಿತ್ತು. ಆದರೆ ಈಗ ಈ ಕುರಿತು ಸ್ವತಃ ರೇಣುಕಾಚಾರ್ಯ ಅವರೇ ಸ್ಪಷ್ಟೀಕರಣ ನೀಡಿದ್ದಾರೆ.

ಹೌದು, ಬಿಜೆಪಿಯಲ್ಲಿ ಹೀನಾಯವಾಗಿ ಸೋಲುಂಡ ಬಳಿಕ ಎಂಪಿ ರೇಣುಕಾಚಾರ್ಯ ಅವರು ಚಂಚಲ ರೀತಿಯ ಮನಸ್ಸನ್ನು ಉಳ್ಳವರಾಗಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಅಲ್ಲದೆ ಸೋತ ಬಳಿಕ ಅವರು ಬಿಜೆಪಿ ಕೆಲವೊಂದು ನಾಯಕರ ವಿರುದ್ದ ಹಾಗೂ ಹೈಕಮಾಂಡ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಈ ಕುರಿತು ಬಿಜೆಪಿ ಅವರಿಗೆ ಶೋಕಾಸ್ ನೋಟಿಸ್ ಕೂಡ ನೀಡಿತ್ತು. ಇದಾದ ಬಳಿಕ ಕಾಂಗ್ರೆಸ್ಸಿನ ಮಾಸ್ ಲೀಡರ್ ಆಗಿರುವಂತಹ ದಾವಣಗೆರೆಯ ಪ್ರಬಲ ನಾಯಕ, ಶಾಸ ಶಾಮನೂರು ಶಿವಶಂಕರಪ್ಪನವರ ಮನೆಗೆ ರೇಣುಕಾಚಾರ್ಯ ಭೇಟಿ ನೀಡಿ, ಅವರೊಂದಿಗೆ ಹಾಗೂ ಅವರ ಮಗ, ಸದ್ಯ ದಾವಣಗೆರೆಯ ಉಸ್ತುವಾರಿ ಸಚಿವರಾದ ಮಲ್ಲಿಕಾರ್ಜುನ ಅವರೊಂದಿಗೆ ಗೌಪ್ಯ ಮಾತುಕತೆ ನಡೆಸಿದ್ದರು ಎನ್ನಲಾಗಿದ್ದು, ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಇದು ಇನ್ನೂ ಇಂಬು ನೀಡಿತ್ತು. ಆದರೀಗ ಈ ಎಲ್ಲಾ ಗೊಂದಲಗಳಿಗೆ ಅವರು ತೆರೆ ಎಳೆದಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದವರು ‘ಈ ಸುದ್ದಿಯನ್ನು ನೀವು ಹಬ್ಬಿಸುತ್ತಿರುವುದು’ ಎಂದು ಮಾಧ್ಯಮಗಳ ಮೇಲೆ ಆಕ್ರೋಶಗೊಂಡರು. ಬಳಿಕ ಮಾತನಾಡಿದಂತಹ ಅವರು ‘2010-11ರ ಸುಮಾರಿನಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದರು. ಆ ಸಮಯದಲ್ಲಿ ಅವರೊಂದಿಗೆ ಕಾರ್ಯಕ್ರಮಕ್ಕೆ ಹೊರಟಿದ್ದೆ. ಆಗ ಜೊತೆಗೆ ಬಂದಂತಹ ಶಾಮನೂರ ಶಿವಶಂಕರಪ್ಪನವರು ನನ್ನನ್ನು ಕರೆದು ಬಾರೋ ಸ್ವಾಮಿ ನಾನು ದಾವಣಗೆರೆಗೆ ಹೊರಟಿದ್ದೇನೆ. ಒಟ್ಟಿಗೆ ಹೋಗೋಣ ಬಾ ಎಂದು ಹೇಳಿದರು. ಆದರೆ ನಾನು ಇಲ್ಲ ಸ್ವಾಮಿ ಯಡಿಯೂರಪ್ಪನವರೊಂದಿಗೆ ಹೋಗಬೇಕು ಕಾರ್ಯಕ್ರಮ ಇದೆ ಎಂದು ಉತ್ತರಿಸಿದೆ. ಅದಕ್ಕೆ ಸಿಟ್ಟುಗೊಂಡ ಶಾಮನೂರು ಶಿವಶಂಕರಪ್ಪನವರು ಯಾವಾಗಲೂ ಅವರೊಂದಿಗೆ ಓಡಾಡುತ್ತಿರುತ್ತೀಯ ಈ ಸಾರಿ ನನ್ನೊಂದಿಗೆ ಬಾ ಎಂದು ಅವರ ವಿಮಾನದಲ್ಲಿ ದಾವಣಗೆರೆಗೆ ಕರೆದುಕೊಂಡು ಬಂದರು. ಹಾಗಿದ್ದರೆ ನಾನು ಕಾಂಗ್ರೆಸ್ ಸೇರಿದ ಲೆಕ್ಕವೇ. ಸೇರುವುದಿದ್ದರೆ ಅಂದೇ ಸೇರಬಹುದಿತ್ತಲ್ಲಾ? ಎಂದು ಹೇಳಿದರು.

ಬಳಿಕ ಮಾತನಾಡಿದ ಅವರು ‘ನಾನು ಒಬ್ಬ ಕಾಂಗ್ರೆಸ್ ನಾಯಕನ ಮನೆಗೆ ಹೋಗಿಲ್ಲ. ನಮ್ಮ ದಾವಣಗೆರೆಯಾಗಿ ಜಿಲ್ಲಾ ಉಸ್ತುವಾರಿ ಸಚಿವರ ಮನೆಗೆ ಹೋಗಿದ್ದೇನೆ. ಸಿಎಂ ಸಿದ್ದರಾಮಯ್ಯ ಇರಬಹುದು, ಡಿಕೆ ಶಿವಕುಮಾರ್ ಇರಬಹುದು ಹಾಗೂ ಸಚಿವ ಮಲ್ಲಿಕಾರ್ಜುನ್ ಅವರಿರಬಹುದು ಅವರೆಲ್ಲರೂ ಆಡಳಿತ ಪಕ್ಷದ ಒಂದು ಅಂಗವಿದ್ದಂತೆ. ಹಾಗಾಗಿ ಕೆಲಸ ಕಾರ್ಯಗಳ ಬಗ್ಗೆ ಅವರೊಂದಿಗೆ ಚರ್ಚಿಸಲು ಅವರು ಇರುವ ಸ್ಥಳಗಳಿಗೆ ಅಥವಾ ಅವರ ಮನಗಳಿಗೆ ಭೇಟಿ ನೀಡಬೇಕಾಗುತ್ತದೆ. ಇದು ಒಂದು ಪ್ರೀತಿಯ ಮಾತುಕತೆಯಾಗಿತ್ತು. ನಾನು ಸುಮ್ಮನೆ ಅವರ ಮನೆಗೆ ಹೋಗಿಲ್ಲ. ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ಹೋಗಿದ್ದೆ. ಭದ್ರ ನಾಲೆಗಳಿಗೆ ನೀರು ಹರಿಸುವ ಬಗ್ಗೆ ಹಾಗೂ ಅಡಕೆ ಬೆಳೆಗೆ ಪರಿಹಾರ ಕೇಳುವ ಬಗ್ಗೆ ನಾನು ಹೋಗಿದ್ದೆ. ಅವರು ಪ್ರೀತಿಯಿಂದ ಮಾತನಾಡಿದರು ನಾನು ಪ್ರೀತಿಯಿಂದ ಮಾತನಾಡಿದೆ. ಅಲ್ಲದೆ ಅವರ್ಯಾರೂ ಕಾಂಗ್ರೆಸ್ ಗೆ ಬನ್ನಿ ಎಂದೂ ಕರೆಯಲಿಲ್ಲ. ಹೀಗಾಗಿ ನೀವು ಮಾಧ್ಯಮಗಳು ಸುಖಾ ಸುಮ್ಮನೆ ಈ ವಿಚಾರಗಳನ್ನು ತಿರುಗಿ ಕಾಂಗ್ರೆಸ್ ಸೇರುತ್ತಾರೆ ಬಿಜೆಪಿ ಬಿಡುತ್ತಾರೆ ಎಂದು ಹೇಳುವುದು ಸರಿಯಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಇದನ್ನೂ ಓದಿ: Gruha jyothi scheme: ಗೃಹಜ್ಯೋತಿ ಫಲಾನುಭವಿಗಳಿಗೆ ಮಹತ್ವದ ಸೂಚನೆ – ಸೆಪ್ಟೆಂಬರ್ 30 ರೊಳಗೆ ಇದೊಂದು ಕೆಲಸ ಮಾಡ್ಲಿಲ್ಲಾಂದ್ರೆ ನಿಮಗೆ ಫ್ರೀ ಕರೆಂಟ್ ಕಟ್

Leave A Reply

Your email address will not be published.