Home Breaking Entertainment News Kannada Rakhi Sawant:ರಾಖಿ ಸಾವಂತ್ ಬಯೋಪಿಕ್ ಗೆ ಕನ್ನಡದ ಈ ಖ್ಯಾತ ನಿರ್ದೇಶಕನದೇ ಡೈರೆಕ್ಷನ್ ?! ಏನಿದು...

Rakhi Sawant:ರಾಖಿ ಸಾವಂತ್ ಬಯೋಪಿಕ್ ಗೆ ಕನ್ನಡದ ಈ ಖ್ಯಾತ ನಿರ್ದೇಶಕನದೇ ಡೈರೆಕ್ಷನ್ ?! ಏನಿದು ಹೊಸ ಸುದ್ದಿ ?!

Rakhi Sawant

Hindu neighbor gifts plot of land

Hindu neighbour gifts land to Muslim journalist

Rakhi Sawant: ಬಿಟೌನ್‌ ಮಾದಕ ಚೆಲುವೆಯೆಂದೇ ಖ್ಯಾತಿ ಪಡೆದ ರಾಖಿ ಸಾವಂತ್‌(Rakhi Sawant) ಅವರು ಕಾಂಟ್ರವರ್ಸಿ ಮೂಲಕ ಹೆಚ್ಚು ಖ್ಯಾತಿ ಪಡೆದಿದ್ದಾರೆ. ರಾಖಿ ಸಾವಂತ್ ಇತ್ತೀಚೆಗೆ ದಿನಕ್ಕೊಂದು ಹೊಸ ಪ್ರಹಸನ ಮಾಡುತ್ತಾ ಜನರ ಮುಂದೆ ಪ್ರಚಾರ ಪಡೆದುಕೊಳ್ಳುವ ಪ್ರಯತ್ನ ನಡೆಸುವುದು ಗೊತ್ತಿರುವ ವಿಚಾರವೇ.

ಸೋಷಿಯಲ್ ಮೀಡಿಯಾದಲ್ಲಿ (Social Media)ಇತ್ತೀಚೆಗೆ ಮದುವೆಯಾಗಿದ್ದ ಮೈಸೂರು ಮೂಲದ ಆದಿಲ್‌ ತನಗೆ ಮೋಸ ಮಾಡಿದ ಕುರಿತು ಎಲ್ಲೆಡೆ ಹೇಳಿಕೊಂಡಿದ್ದು ಜೊತೆಗೆ ಜೈಲಿಗೆ ಕಳುಹಿಸಿದ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೇ. ಇದೀಗ, ಡ್ರಾಮಾ ಕ್ವೀನ್ ರಾಖಿ ಸಾವಂತ್ ಇಸ್ಲಾಂ ಸಮುದಾಯದ ಪವಿತ್ರ ಕ್ಷೇತ್ರ ಮೆಕ್ಕಾಗೆ(Mecca)ಭೇಟಿ ನೀಡಿ ಹೊಸ ನಾಟಕ ಶುರು ಮಾಡಿದ್ದಾಳೆ. ರಾಖಿ ಸಾವಂತ್ ಅವರ ವೈಯಕ್ತಿಕ ಜೀವನದ ವಿಚಾರಗಳು ಬೀದಿಗೆ ಬಂದಿದ್ದು, ಪತಿ ಆದಿಲ್ ಖಾನ್ ಜೊತೆ ಅವರು ಕಿರಿಕ್ ಮಾಡಿಕೊಂಡಿರುವ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೇ. ಈಗ ಅವರು ತಮ್ಮ ಬಯೋಪಿಕ್ (Rakhi Sawant Biopic) ಬಗ್ಗೆ ತನ್ನ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಅವರು ಸುದ್ದಿಗೋಷ್ಠಿ ನಡೆಸಿದ ಸಂದರ್ಭ ನನಗೆ ಕಾಂತಾರ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಹೆಚ್ಚು ಇಷ್ಟ’ ಎಂದು ರಾಖಿ ಸಾವಂತ್ ಹೇಳಿದ್ದಾರೆ. ರಾಖಿ ಸಾವಂತ್ ಅವರ ಜೀವನದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲು ಪ್ಲಾನ್ ಮಾಡಿಕೊಂಡಿದೆ. ಈ ಸಿನಿಮಾ ನಿರ್ಮಾಣಕ್ಕೆ ನಿರ್ಮಾಪಕರು ಆಸಕ್ತಿ ತೋರಿಸಿದ್ದಾರಂತೆ. ‘ನಿಮ್ಮ ಪಾತ್ರವನ್ನು ನೀವೇ ಮಾಡಬಹುದಲ್ಲ’ ಎಂದು ನಿರ್ಮಾಪಕರು ರಾಖಿಗೆ ಹೇಳಿದ್ದಾರಂತೆ.‘ಆ ಬಗ್ಗೆ ನಾನು ಯೋಚಿಸಿಲ್ಲ’ ಎಂದು ರಾಖಿ ಸಾವಂತ್ ಹೇಳಿಕೊಂಡಿದ್ದಾರೆ. ತಮ್ಮ ಪಾತ್ರವನ್ನು ವಿದ್ಯಾ ಬಾಲನ್ ಮಾಡಿದರೆ ಉತ್ತಮ ಎಂದು ರಾಖಿ ಸಾವಂತ್ ತನ್ನ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.ಸದ್ಯ, ರಾಖಿ ಸಾವಂತ್ ಅವರ ಸಿನಿಮಾವನ್ನು ಯಾರು ನಿರ್ದೇಶನ ಮಾಡಬೇಕು ಎಂಬ ಚರ್ಚೆ ನಡೆಯುತ್ತಿದೆ. ಕಥೆ, ಚಿತ್ರಕಥೆ, ಸಂಗೀತ, ನಿರ್ದೇಶನ ಎಲ್ಲ ವಿಭಾಗದಲ್ಲೂ ದೊಡ್ಡ ತಂತ್ರಜ್ಞರನ್ನು ಆಯ್ಕೆ ಮಾಡಲಾಗುತ್ತದೆ.

ರಾಖಿ ಸಾವಂತ್ ಈ ಸಿನಿಮಾವನ್ನು ಯಾರು ನಿರ್ದೇಶನ ಮಾಡಬೇಕೆಂದು ಕೇಳಿದಾಗ ರಿಷಬ್ ಶೆಟ್ಟಿಯ ಹೆಸರನ್ನು ಹೇಳಿದ್ದಾರೆ ಎನ್ನಲಾಗಿದೆ. ರಾಖಿ ಸಾವಂತ್ ತಮ್ಮ ಜೀವನದ ಕಥೆಯನ್ನು ಆಧರಿಸಿ ಸಿನಿಮಾ ಮಾಡಲು ರಿಷಬ್ ಶೆಟ್ಟಿ ನಿರ್ದೇಶನ ಮಾಡಬೇಕೆಂದು ಇಚ್ಛೆ ವ್ಯಕ್ತಪಡಿಸಿದ್ದು, ಅವರ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಇದಕ್ಕೆ ರಿಷಬ್ ಶೆಟ್ಟಿ (Rishab Shetty) ಅವರು ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ:Textbook:ಬಿಜೆಪಿ ಮತ್ತೊಂದು ಶಾಕ್ ಕೊಟ್ಟ ಕಾಂಗ್ರೆಸ್- ಶುರುವಾಯ್ತು ಮತ್ತೊಂದು ‘ಆಪರೇಷನ್’